Select Your Language

Notifications

webdunia
webdunia
webdunia
webdunia

ಮತ್ತೆ ಪ್ರೇಮದ ಅಲೆಯಲ್ಲಿ ಪ್ರೀತಿ ಜಿಂಟಾ

ಮತ್ತೆ ಪ್ರೇಮದ ಅಲೆಯಲ್ಲಿ ಪ್ರೀತಿ ಜಿಂಟಾ
, ಗುರುವಾರ, 16 ಏಪ್ರಿಲ್ 2015 (15:35 IST)
ಬಾಲಿವುಡ್‌ನ ಗುಳಿಕೆನ್ನೆಗಳ ಚೆಲುವೆ ಪ್ರೀತಿ ಝಿಂಟಾ ಮತ್ತೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರಂತೆ. ಪಂಜಾಬ್ ಕಿಂಗ್ಸ್ 11 ತಂಡದ ಮಾಜಿ ಸಹ ಮಾಲೀಕರಾಗಿದ್ದ ಪ್ರೀತಿ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ. 

ಉದ್ಯಮಿ ನೆಸ್ ವಾಡಿಯಾ ಜತೆಗೆ ದೀರ್ಘ ಕಾಲದವರೆಗೆ ಪ್ರೇಮ ಸಂಬಂಧವನ್ನು ಹೊಂದಿದ್ದ ಝಿಂಟಾ ಕೆಲ ವರ್ಷಗಳ ಹಿಂದೆ ಅವರ ಜತೆಗಿನ ಪ್ರೀತಿ-ಪ್ರೇಮವನ್ನು ಬದಿಗಿಟ್ಟು ಕೇವಲ ಸ್ನೇಹಿತರಾಗಿ ಮುಂದುವರೆದಿದ್ದರು. ಆದರೆ ಕಳೆದ ವರ್ಷ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
 
ಇತ್ತೀಚಿನ ವರದಿಗಳ ಪ್ರಕಾರ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಕೂಡ ರಾಜೀ ಮಾಡಿಕೊಂಡು ಪ್ರಕರಣವನ್ನು ಇತ್ಯಾರ್ಥಗೊಳಿಸಿಕೊಂಡಿದ್ದಾರೆ. 
 
ಪ್ರೀತಿ ಸದ್ಯದಲ್ಲಿಯೇ ನಚ್ ಬಲಿಯೇ ಸೀಸನ್-7 ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ನಿಜ ಜೀವನದ ಪ್ರಸಿದ್ಧ ಜೋಡಿಗಳು ಈ ಜನಪ್ರಿಯ ಕಾರ್ಯಕ್ರಮದ ಸ್ಪರ್ಧಿಗಳಾಗಿರುತ್ತಾರೆ. 

Share this Story:

Follow Webdunia kannada