Webdunia - Bharat's app for daily news and videos

Install App

ನಟಿ ಪ್ರತ್ಯೂಶಾ ಬ್ಯಾನರ್ಜಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಪ್ರಿಯಕರ ರಾಹುಲ್ ರಾಜ್

Webdunia
ಶುಕ್ರವಾರ, 4 ನವೆಂಬರ್ 2016 (16:39 IST)
ಆತ್ಮಹತ್ಯೆಗೆ ಶರಣಾದ ಬಾಲಿಕಾ ವಧು ಖ್ಯಾತಿಯ ನಟಿ ಪ್ರತ್ಯೂಶಾ ಬ್ಯಾನರ್ಜಿ‌ಗೆ ಆಕೆಯ ಗೆಳೆಯ ರಾಹುಲ್ ರಾಜ್ ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದ್ದ ಎನ್ನುವ ವರದಿಗಳು ಬಾಲಿವುಡ್ ಚಿತ್ರರಂಗ, ಕಿರುತೆರೆ ವಲಯಗಳಲ್ಲಿ ಕೋಲಾಹಲ ಸೃಷ್ಟಿಸಿವೆ.
ಪ್ರತ್ಯೂಶಾ ಏಪ್ರಿಲ್ 1 ರಂದು ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಗೆಳೆಯ ರಾಹುಲ್ ರಾಜ್‌ನೊಂದಿಗೆ ನಡೆದ ಸಂಭಾಷಣೆ ಬಹಿರಂಗವಾಗಿದ್ದು ಅದರಲ್ಲಿನ ಸಾರಾಂಶ ಆಘಾತ ಮೂಡಿಸುವಂತಿದೆ.    
 
ಪ್ರತ್ಯೂಶಾ ಮತ್ತು ರಾಹುಲ್ ನಡುವೆ ನಡೆಗ ಟೆಲಿಫೋನ್ ಮಾತುಕತೆಯ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಆಕೆ ಆತ್ಮಹತ್ಯೆಗೆ ಶರಣಾಗುವ ಮುನ್ನ ನಡೆದ ಸಂಭಾಷಣೆಯಾಗಿದೆ ಎಂದು ಪ್ರತ್ಯೂಶಾ ಪೋಷಕರ ಪರ ವಕೀಲ ನೀರಜ್ ಗುಪ್ತಾ ತಿಳಿಸಿದ್ದಾರೆ. 
 
ರಾಹುಲ್ ರಾಜ್ ನೀನೊಬ್ಬ ಕೆಟ್ಟ ವ್ಯಕ್ತಿ. ನನ್ನ ಜೀವನವನ್ನೇ ನಾಶ ಮಾಡಿದ್ದೀಯಾ? ನಾನು ಚಿತ್ರರಂಗಕ್ಕೆ ನನ್ನ ಮೈಮಾರಿಕೊಳ್ಳಲು ಬರಲಿಲ್ಲ. ನಾನು ನಟಿಸಲು. ಉದ್ಯೋಗಕ್ಕಾಗಿ ಬಂದಿದ್ದೆ. ಆದರೆ, ನೀನು ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಿದ್ದೀಯಾ. ನನಗೆ ನಿನ್ನ ಬಗ್ಗೆ ತುಂಬಾ ಬೇಸರವಾಗಿದೆ ಎಂದು ಪ್ರತ್ಯೂಶಾ ರಾಹುಲ್‌ಗೆ ಟೆಲಿಫೋನ್ ಸಂಭಾಷಣೆಯಲ್ಲಿ ಹೇಳಿದ್ದಾಳೆ. 
 
ಉಭಯರ ನಡುವೆ ನಡೆದ ಸಂಭಾಷಣೆಯಲ್ಲಿ ರಾಹುಲ್, ಪ್ರತ್ಯೂಶಾಳನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದ್ದ ಎನ್ನುವುದು ಸ್ಪಷ್ಟವಾಗಿದೆ. ನಂತರ ಫೋನ್ ಮಾಡಿದಾಗ ಕೂಡಾ ಪ್ರತ್ಯೂಶಾ ವೇಶ್ಯಾವಾಟಿಕೆಯ ಶಬ್ದ ಬಳಸಿದ್ದಳು ಎನ್ನಲಾಗಿದೆ.
 
ಪ್ರತ್ಯೂಶಾ ಬ್ಯಾನರ್ಜಿಯ ಸುದ್ದಿ ಚಿತ್ರರಂಗವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಬಾಲಿಕಾ ವಧು ಕಿರುತೆರೆ ಧಾರವಾಹಿಯಲ್ಲಿ ನಡೆಸಿ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಸಿದ್ದ ಪ್ರತ್ಯೂಶಾಗೆ ತಾನೇ ನಂಬಿದ ಗೆಳೆಯ ಕೈಕೊಟ್ಟಾಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಒಂದೇ ಬಾರಿಗೆ ಏಳು ಸಿನಿಮಾಗಳನ್ನು ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಸ್‌, ಇಲ್ಲಿದೆ ಡೀಟೆಲ್ಸ್‌

ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಜೋಡಿಯಲ್ಲಿ ಹೊಸ ಸಿನಿಮಾ

ಮುಂದಿನ ಸುದ್ದಿ
Show comments