Select Your Language

Notifications

webdunia
webdunia
webdunia
webdunia

ಹನ್ನೊಂದು ವರ್ಷದ ದಾಂಪತ್ಯಕ್ಕೆ ಸೋಡಾಚೀಟಿ ನೀಡಿದ ಪೂಜಾ ಭಟ್

ಹನ್ನೊಂದು ವರ್ಷದ ದಾಂಪತ್ಯಕ್ಕೆ ಸೋಡಾಚೀಟಿ ನೀಡಿದ ಪೂಜಾ ಭಟ್
, ಮಂಗಳವಾರ, 9 ಡಿಸೆಂಬರ್ 2014 (09:03 IST)
ಇಷ್ಟೊಂದು ಖುಷಿಯಾಗಿ ನಗುತ್ತಿರುವ ದಂಪತಿಗಳ ಮುಖದಲ್ಲಿ ಇನ್ನು ನಗೆ ದೂರ ದೂರ! ಬಾಲಿವುಡ್ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಪೂಜಾ ಭಟ್ ಪತಿ ಮುನ್ನ ಅಲಿಯಾಸ್ ಮನೀಶ್ ಮುಖರ್ಜಿ ಇಬ್ಬರು ದೂರ ಸರಿದಿದ್ದಾರೆ. ದಾಂಪತ್ಯ ಬದುಕಿನಿಂದ ಅವರಿಬ್ಬರೂ ದೂರ ಹೋಗಿದ್ದಾರೆ.
ತಮ್ಮನ್ನು ಗೌರವಿಸುವವರು ಮತ್ತು ಗೌರವಿಸದೆ ಇರುವವರು ಸಹ ಈ ಬಗ್ಗೆ ಕೇಳ್ತಾ ಇದ್ದಾರೆ. ನಿಮ್ಮ ಎಣಿಕೆ ಸರಿ ಸಾಕಷ್ಟು ದಿನಗಳಿಂದ ಇದ್ದ ವಿವಾದ, ಗಲಾಟೆ ಗಳಿಗೊಂದು ಪೂರ್ಣ ವಿರಾಮ ನೀಡಬೇಕು ಎಂದು ನಾವಿಬ್ಬರು ನಿರ್ಧರಿಸಿದ್ದೇವೆ. ಆದ್ದರಿಂದ ಹನ್ನೊಂದು ವರ್ಷದ ದಾಂಪತ್ಯ ಬದುಕಿಗೆ ಫುಲ್ ಸ್ಟಾಪ್ ಇಡುತ್ತಿದ್ದೇವೆ. ನಾವಿಬ್ಬರು ಈಗ ಗೌರವವಾಗಿ ಬೇರೆ ಬೇರೆಯಾಗಿದ್ದೇವೆ ಎನ್ನುವುದನ್ನು ಪೂಜಾ ಭಟ್ ತಿಳಿಸಿದ್ದಾರೆ. 
 
ನಾವಿಬ್ಬರು ಸಾರ್ವಜನಿಕ ಜೀವನದ ಭಾಗವಾದ್ದರಿಂದ ಈ ಬಗ್ಗೆ ಟ್ವಿಟ್ಟರ್  ಮೂಲಕ ತಿಳಿಸಿದ್ದೇನೆ. ಇನ್ನು ಮುಂದೆ ನಮ್ಮ ಬಗ್ಗೆ ನೀವು ಏನೇನೋ ಕಲ್ಪಿಸಿ ಕೊಳ್ಳುವ ಅಗತ್ಯವಿಲ್ಲ ಎಂದು ತನ್ನ ಸ್ನೇಹಿತರು, ಹಿತೈಷಿಗಳು ಮತ್ತು ಶ್ರಯೋಭಿಲಾಷಿಗಳಿಗೆ  ಟ್ವೀಟ್ ಮೂಲಕ ತಿಳಿಸಿದ್ದಾರೆ. 
 
ಈ ವಿಷಯ ಪೂಜಾ ತಿಳಿಸಿದ ಬಳಿಕ  ಟ್ವಿಟ್ಟರ್ ನಲ್ಲಿ ನೂರಾರು ಮೆಸೇಜ್ ಗಳು ಬರುತ್ತಿದ್ದು, ಇಷ್ಟು ವರ್ಷ ತನಗೆ ಅಷ್ಟೇನೂ ಗೊತ್ತಿಲ್ಲದವರು ಸಹಿತ ಈ ಪರಿ ಅಭಿಮಾನ ಸಾಂತ್ವಾನ ನೀಡಿದ್ದಾರೆ. ಅದರಿಂದ ನಾನು ಮೂಕಳಾಗಿದ್ದೇನೆ ಎಂದು ಆಕೆ ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.ಆದರೆ ಆಕೆ ಸ್ನೇಹಿತರಲ್ಲಿ ಸಾಕಷ್ಟು ಮಂದಿ ತುಂಬಾ ನಿಶಬ್ಧವಾಗಿದ್ದಾರೆ ಎಂದು ಈ ಸಮಯದಲ್ಲಿ ಹೇಳಿದ್ದಾರೆ ಪೂಜಾ.  

Share this Story:

Follow Webdunia kannada