ನಟ ಅಕ್ಷಯ್ ಕುಮಾರ್ ಗೆ ಪ್ರಧಾನಿ ಮೋದಿ ಹೊಗಳಿಕೆ

Webdunia
ಮಂಗಳವಾರ, 13 ಜೂನ್ 2017 (08:56 IST)
ನವದೆಹಲಿ: ಪ್ರಧಾನಿ ಮೋದಿ ಹಾಗೆಲ್ಲಾ ಸುಮ್ಮನೇ ಒಬ್ಬರನ್ನು ಹೊಗಳುವವರಲ್ಲ. ಆದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅದಕ್ಕೆ ಕಾರಣ ಅಕ್ಷಯ್ ಹೊಸ ಚಿತ್ರ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’!

 
ಅಕ್ಷಯ್ ಅಭಿನಯದ ಈ ಚಿತ್ರದ ಟ್ರೇಲರ್ ಈಗಾಗಲೇ ಹಿಟ್ ಆಗಿದೆ. ಇದು ಸ್ವಚ್ಛ್ ಭಾರತ ಅಭಿಯಾನವನ್ನು ಆಧಾರವಾಗಿಟ್ಟುಕೊಂಡು ಮಾಡಿದ ಸಿನಿಮಾ. ಹಾಗಾಗಿ ಪ್ರಧಾನಿ ಮೋದಿಗೆ ಇದು ಇಷ್ಟವಾಗಿದೆ.

ಹೀಗಾಗಿ ಸ್ವಚ್ಛ್ ಭಾರತ ಅಭಿಯಾನದಲ್ಲಿ ಅಕ್ಷಯ್ ಪಾತ್ರ ದೊಡ್ಡದು ಎಂದು ಹೊಗಳಿದ್ದಾರೆ. ಟ್ವಿಟರ್ ನಲ್ಲಿ ಪರಸ್ಪರ ತಮ್ಮ ಅಭಿಮಾನ ಹಂಚಿಕೊಂಡಿರುವ ಇಬ್ಬರೂ ಪರಸ್ಪರ ಹೊಗಳಿಕೊಂಡಿದ್ದಾರೆ. ಸ್ವಚ್ಛ್ ಭಾರತ ಅಭಿಯಾನಕ್ಕೆ ನನ್ನದೊಂದು ಚಿಕ್ಕ ಕಾಣಿಕೆ ಎಂದು ಚಿತ್ರದ ಟ್ರೇಲರ್ ನ್ನು ಪ್ರಧಾನಿ ಮೋದಿಗೆ ಅಕ್ಷಯ್ ಕಳುಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ತುಂಬಾ ಚೆನ್ನಾಗಿದೆ. ನಿಮ್ಮೊಂದಿಗೆ ಮುಂದಿನ ದಿನಗಳಲ್ಲೂ ಸ್ವಚ್ಛ್ ಭಾರತ ಅಭಿಯಾನದ ಬಗ್ಗೆ ಜತೆಯಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರದ ಅಭಿನಯಕ್ಕೆ ಪ್ರಶಂಸೆ ಬೆನ್ನಲ್ಲೇ ಬಾಲಿವುಡ್‌ಗೆ ಜಿಗಿದ ರುಕ್ಮಿಣಿ ವಸಂತ್

ಕೆಜಿಎಫ್‌ ಚಾಪ್ಟರ್‌ 2 ಸಹ ನಿರ್ದೇಶಕ ಬಾಳಲ್ಲಿ ಇದೆಂಥಾ ದುರಂತ

ಒಳ್ಳೆ ಪಾತ್ರ ಸಾಯಿಸೋದು ಎಷ್ಟು ಸರಿ: ಲಕ್ಷ್ಮೀ ನಿವಾಸ ಸೀರಿಯಲ್ ವಿರುದ್ಧ ಸಿಡಿದೆದ್ದ ಹಿರಿಯ ನಟಿ

ರಿಷಬ್ ಶೆಟ್ಟಿ ಜೊತೆ ಸರಿಯಿಲ್ವಾ, ಏನಾಗಿದೆ: ರಾಜ್ ಬಿ ಶೆಟ್ಟಿ ಕೊನೆಗೂ ಕೊಟ್ರು ಮಾಹಿತಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ: ರೇಣುಕಾ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

ಮುಂದಿನ ಸುದ್ದಿ
Show comments