Select Your Language

Notifications

webdunia
webdunia
webdunia
webdunia

ಕೇವಲ 19 ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದ ಪೀಕೆ

ಕೇವಲ 19 ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದ ಪೀಕೆ
, ಶನಿವಾರ, 25 ಅಕ್ಟೋಬರ್ 2014 (08:49 IST)
ಬಾಲಿವುಡ್ ನಲ್ಲಿ ಈಗ ಗಳಿಕೆಯ ಕಾಲ. ಪ್ರತಿಯೊಬ್ಬ  ಹೀರೋ ತನ್ನ ಬಾಕ್ಸಾಫೀಸಿನ ವೇಗ ಹೆಚ್ಚಿಸಿಕೊಳ್ಳಲು  ಗಮನ ನೆಟ್ಟಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್, ಶಾರುಖ್ ಖಾನ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆಮೀರ್ ಖಾನ್ ಕೇವಲ ಟ್ರಾನ್ಸಿಸ್ಟರ್ ಹಿಡಿದು  ಎಲ್ಲರಲ್ಲೂ ಸಂಚಲನ ಉಂಟು ಮಾಡಿದ್ದಾರೆ ತಮ್ಮ ಪೀಕೆ ಚಿತ್ರದ ಪೋಸ್ಟರ್ ಮೂಲಕ.

ಆಮೀರ್ ಅವರು ತಮ್ಮ ಪೀಕೆ ಚಿತ್ರದ ಟೀಸರ್‌ನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಿದ್ದಾರೆ. ಈವರೆಗೂ ಪೋಸ್ಟರ್ ಮೂಲಕ ಜನರನ್ನು ಹಿಡಿದಿಟ್ಟಿದ್ದ ಆ ಕಲಾವಿದನ ಚಿತ್ರದ ಟೀಸರ್ ಮಾಡಿರುವ ಹಂಗಾಮ ಅಷ್ಟಿಷ್ಟಲ್ಲ. ತಾನು ಧರಿಸಿರುವ ಎಲ್ಲ ಗೆಟಪ್ಸ್‌ಗಳನ್ನು ಜನರ ಮುಂದೆ ತಂದಿದ್ದು ಈಗ ತನ್ನ ಚಿತ್ರದ ಟೀಸರ್ ಮೂಲಕ ಮತ್ತೆ ಸಂಚಲನ ಉಂಟು ಮಾಡಿದ್ದಾರೆ. ಇದನ್ನು ನೋಡಿದವರಿಗೆ ಚಿತ್ರ ಕ್ಲಾಸ್ ಮತ್ತು ಮಾಸ್ ಎರಡನ್ನು ಆಕರ್ಷಿಸುವಂತೆ ಇದೆ ಎಂದು ಅನ್ನಿಸುತ್ತಿದೆ..
 
ಈ ಟ್ರೇಲರ್ ನಿಂದ ಅತ್ಯುತ್ತಮ ಫಲಿತಾಂಶ ದೊರಕಿದ್ದು, ಕೇವಲ 19  ಗಂಟೆಗಳಲ್ಲಿ 8  ಲಕ್ಷಕ್ಕೂ ಅಧಿಕ ಹಿಟ್ಸ್ ದೊರಕಿತ್ತು. ಕ್ರಿಸ್ಮಸ್ ಸಮಯದಲ್ಲಿ ಅಂದರೆ ಡಿಸೆಂಬರ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ರಾಜ್ ಕುಮಾರ್ ಹಿರಾನಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಆಮೀರ್ ಜೊತೆ ಅನುಷ್ಕ ಶರ್ಮ ಅಭಿನಯಿಸಿದ್ದಾರೆ.
 
ಈ ಹಿಂದೆ ರಾಜ್ ಕುಮಾರ್ ಹಿರಾನಿ ನಿರ್ಮಿಸಿದ ಮುನ್ನಾ ಭಾಯಿ ಎಂಬಿಬಿಎಸ್ , ಲಗೇ ರಹೋ ಮುನ್ನ ಭಾಯಿ, 3 ಇಡಿಯೇಟ್ಸ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈಗ ಪೀಕೆ ಚಿತ್ರವೂ ಸಹ 500 ಕೋಟಿಗಳ ದಾಖಲೆ ನಿರ್ಮಿಸುವ ಸಾಧ್ಯತೆ ಕಂಡು ಬರುತ್ತಿದೆ.  

Share this Story:

Follow Webdunia kannada