Select Your Language

Notifications

webdunia
webdunia
webdunia
webdunia

ಗಾಯಕಿಯಾಗೋದಕ್ಕೆ ರೆಡಿಯಾಗಿದ್ದಾರೆ ಪರಿಣಿತಿ ಛೋಪ್ರಾ

ಗಾಯಕಿಯಾಗೋದಕ್ಕೆ ರೆಡಿಯಾಗಿದ್ದಾರೆ ಪರಿಣಿತಿ ಛೋಪ್ರಾ
, ಗುರುವಾರ, 11 ಫೆಬ್ರವರಿ 2016 (11:02 IST)
ಬಾಲಿವುಡ್ ಅದೆಷ್ಟೋ ತಾರೆಯರು ತಾವು ತೆರೆ ಮೇಲೆ ಅಭಿನಯಿಸೋದರಲ್ಲಿ ಹೇಗೆ ಸೈ ಅನ್ನಿಸಿಕೊಂಡಿದ್ದಾರೋ ಹಾಗೇ ಗಾಯನದಲ್ಲೂ ನಾವೇನು ಕಡಿಮೆ ಇಲ್ಲ ಅಂತಾ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಅನೇಕ ತಾರೆಯರು ಈಗಾಗಲೇ ತಮ್ಮ ಗಾಯನದ ಮೂಲಕವು ಅಭಿಮಾನಿಗಳ ದಿಲ್ ಕದ್ದಿದ್ದಾರೆ. ಇದೀಗ ಅದೇ ಸಾಲಿಗೆ ಸೇರೋದಕ್ಕೆ ಮತ್ತೊಬ್ಬ ನಟಿ ರೆಡಿಯಾಗಿದ್ದಾರೆ.

ಹೌದು... ಈಗಾಗಲೇ ಬಾಲಿವುಡ್ ನಟಿಯರಾದ ಸೋನಾಕ್ಷಿ ಸಿನ್ಹಾ ಹಾಗೂ ಶ್ರದ್ಧಾ  ಕಪೂರ್ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಮತ್ತೊಬ್ಬ ನಟಿ ಬಾಲಿವುಡ್ ನಲ್ಲಿ ತಮ್ಮ ಗಾಯನ ಪರೀಕ್ಷೆಗೆ ಮುಂದಾಗಿದ್ದಾರೆ. ಅವರು ಬೇರಾರು ಅಲ್ಲ ನಟಿ ಪರಿಣಿತಿ ಛೋಪ್ರಾ. ಮೊನ್ನೆಯಷ್ಟೇ ಯಶ್ ಛೋಪ್ರಾ
ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಮೇರಿ ಪ್ಯಾರಿ ಬಿಂದು ಸಿನಿಮಾದಲ್ಲಿ ತಾನು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಅಂತಾ ಪರಿ ಹೇಳಿಕೊಂಡಿದ್ದರು. ಇದೀಹ ಪರಿ ನಾನು ಸಿಂಗರ್ ಆಗುತ್ತಿದ್ದೇನೆ ಅಂತಾ ಹೇಳೋ ಮೂಲಕ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ.
 
ಪರಿಣಿತಾ ಈ ಬಗ್ಗೆ ಟ್ವೀಟ್ ಮಾಡಿದ್ದು ನನ್ನ ಬಹುದಿನಗಳ ಕನಸು ನನಸಾಗುತ್ತಿದೆ. ಮೇರಿ ಪ್ಯಾರಿ ಬಿಂದು ಸಿನಿಮಾದ ಮೂಲಕ ನಾನು ಗಾಯಕಿಯಾಗುತ್ತಿದ್ದೇನೆ. ಅದಕ್ಕಾಗಿ ಸಿನಿಮಾದ ನಿರ್ದೇಶಕರು ಹಾಗೇ ನಿರ್ಮಾಪಕರಿಗೆ ನಾನು ಋಣಿಯಾಗಿದ್ದೇನೆ ಅಂತಾ ಅವರು ಹೇಳಿದ್ದಾರೆ. 
 

Share this Story:

Follow Webdunia kannada