150 ಕೋಟಿ ಗಳಿಕೆಯ ಸನಿಹದಲ್ಲಿ 'ಪದ್ಮಾವತ್'

ರಾಮಕೃಷ್ಣ ಪುರಾಣಿಕ
ಶುಕ್ರವಾರ, 2 ಫೆಬ್ರವರಿ 2018 (19:20 IST)
ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾದ ಗಳಿಕೆಯನ್ನು ಮುಂದುವರಿಸುತ್ತಿರುವ 'ಪದ್ಮಾವತ್', ಒಂಬತ್ತು ದಿನಗಳಲ್ಲಿ ರೂ 142 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ರೂ. 150 ಕೋಟಿಯನ್ನು ತಲುಪುವುದರಲ್ಲಿದೆ, ಎಂದು ವ್ಯಾಪಾರ ಮೂಲಗಳಿಂದ ಬುಧವಾರದಂದು ತಿಳಿದುಬಂದಿದೆ.
ಬಿಡುಗಡೆಯ ಮೊದಲ ವಾರಾಂತ್ಯದಲ್ಲಿ ಬೃಹತ್ ಗಳಿಕೆಯ ದಾಖಲೆಯನ್ನು ಮಾಡಿದ ನಂತರ, ಒಂಬತ್ತನೆಯ ದಿನದಂದು ರೂ 13 ಕೋಟಿ ಗಳಿಸುವ ಮೂಲಕ ವಾರದ ದಿನಗಳಲ್ಲಿಯೂ ಸಹ ಗಳಿಕೆಯನ್ನು ಮುಂದುವರಿಸಿದೆ.
 
ಇದು ಸೇರಿದಂತೆ ಚಿತ್ರದ ಒಟ್ಟಾರೆ ಗಳಿಕೆ ರೂ 142 ಕೋಟಿ. ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ತೀರ್ಮಾನಿಸಿದ ನಾಲ್ಕು ರಾಜ್ಯಗಳ ಚಿತ್ರಮಂದಿರಗಳು ಸೇರಿದಂತೆ, ಸೀಮಿತ ಬಿಡುಗಡೆಯ ಹೊರತಾಗಿಯೂ, 'ಪದ್ಮಾವತ್' ಅತ್ಯುತ್ತಮವಾಗಿ ಗಳಿಸಿದೆ.
 
ಪದ್ಮಾವತ್' ಚಿತ್ರದ ಚಿತ್ರಮಂದಿರಗಳಲ್ಲಿನ ಮುಂದುವರಿದ ನೂಕುನುಗ್ಗಲನ್ನು ಪರಿಗಣಿಸಿದರೆ, ಬಿಡುಗಡೆ ವಾರದ ವಾರಾಂತ್ಯದವರೆಗೆ ರೂ 150 ಕೋಟಿ ಮೀರಿಸಲಿದೆ ಮತ್ತು ರೂ 200 ಕೋಟಿ ಕ್ಲಬ್ ದಾಟುವ ಸೂಚನೆಗಳಿವೆ ಎಂದು ವ್ಯಾಪಾರ ಮೂಲಗಳು ಹೇಳುವೆ.
 
ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಶಾಹಿದ್ ಕಪೂರ್ ರಜಪೂತ ರಾಜ ಮಹಾರಾವಲ್ ರತನ್ ಸಿಂಗ್ ಮತ್ತು ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಜನವರಿ 25 ರಂದು ಬಿಡುಗಡೆಯಾದ ದಿನದಿಂದ ಈ ಚಿತ್ರವು ಹೆಚ್ಚಿನ ಜನರನ್ನು ಸೆಳೆಯುತ್ತಿದೆ.
 
ಈ ಚಿತ್ರದಲ್ಲಿ ಅದಿತಿ ರಾವ್ ಹೈದರಿ, ಜಿಮ್ ಸರ್ಬ್, ರಝಾ ಮುರಾದ್ ಮತ್ತು ಅನುಪ್ರಿಯ ಗೋಯೆಂಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments