Select Your Language

Notifications

webdunia
webdunia
webdunia
webdunia

ಆಕ್ಟರ್ ಆಗದಿದ್ರೆ ಪೈಂಟರ್ ಆಗುತ್ತಿದ್ದೆ- ಶರ್ಮಿಳಾ ಟ್ಯಾಗೋರ್

ಆಕ್ಟರ್ ಆಗದಿದ್ರೆ ಪೈಂಟರ್ ಆಗುತ್ತಿದ್ದೆ- ಶರ್ಮಿಳಾ ಟ್ಯಾಗೋರ್
, ಶನಿವಾರ, 29 ಆಗಸ್ಟ್ 2015 (10:28 IST)
ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ತಮ್ಮ ಅಭಿನಯದಿಂದಲೇ ಬಾಲಿವುಡ್ ನಲ್ಲಿ ನೆಲೆ ಕಂಡುಕೊಂಡ ನಟಿ. ಆಧರ್ ಶರ್ಮಿಳಾ ಅವರಿಗೆ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ತಾನು ಪೈಂಟರ್ ಆಗಬೇಕು ಅನ್ನುವ ಆಸೆಯಿತ್ತಂತೆ. ಶಾಂತಿನಿಕೇತನಕ್ಕೆ  ಹೋಗಲು ಬಯಸುತ್ತಿದ್ದರಂತೆ.

ಇನ್ನು  ತಾನು ಅಭಿನಯಕ್ಕಿಂತ ಹೆಚ್ಚಾಗಿ ಚಿತ್ರ ಕಲಾವಿದೆಯಾಗಲು ಬಯಸುತ್ತಿದ್ದೆ ಅಂತಾ ಅವರು ಹೇಳಿದ್ದಾರೆ. ಒಂದು ವೇಳೆ ಆಕ್ಟರ್ ಆಗದೇ ಇರುತ್ತಿದ್ದರೆ ಇವತ್ತು ಪೈಂಟರ್ ಆಗಿರುತ್ತಿದ್ದೆ ಅಂತಾ ಶರ್ಮಿಳಾ ಟ್ಯಾಗೋರ್ ಹೇಳಿದ್ದಾರೆ. ಸದ್ಯ 70ರ ಹರೆಯದಲ್ಲಿರುವ ಶರ್ಮಿಳಾ 1959ರಲ್ಲಿ ಸತ್ಯಜಿತ್ ರೇ ಅವರ ಅಪೂರ್ ಸಂಸಾರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಶರ್ಮಿಳಾ ನಿರ್ವಹಿಸಿದ್ದೆಲ್ಲಾ ಒಂದಕ್ಕಿಂತ ಒಂದು ಭಿನ್ನವಾದದ್ದು.
 
ಮಾಜಿ ಕ್ರಿಕೆಟಿಗ ಪಟೌಡಿ ಅವರನ್ನು ಮದುವೆಯಾದ ಶರ್ಮಿಳಾ ಅವರ ಮೂವರು ಮಕ್ಕಳಲ್ಲಿ, ಇಬ್ಬರು ಮಕ್ಕಳು ಕೂಡ ಕಲಾವಿದರೇ.  ಸೈಫ್ ಆಲಿಖಾನ್ ಹಾಗೂ ಸೋಹಾ ಆಲಿಖಾನ್ ಇಬ್ಬರೂ ಬಾಲಿವುಡ್ ನಲ್ಲಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.

Share this Story:

Follow Webdunia kannada