Webdunia - Bharat's app for daily news and videos

Install App

ನನ್ನ ಮತ್ತು ಸಲ್ಮಾನ್ ಖಾನ್ ನಡುವೆ ಯಾವುದೇ ರೀತಿಯ ಭಿನ್ನತೆ ಇಲ್ಲ..

Webdunia
ಶುಕ್ರವಾರ, 31 ಅಕ್ಟೋಬರ್ 2014 (09:41 IST)
ಕೆಲವು ಬಾರಿ ಮತ್ತೆ ಮತ್ತೆ ತಮ್ಮ ಬಾಂಧವ್ಯದ ಬಗ್ಗೆ ಹೇಳಲೇ ಬೇಕಾಗುವ ಪರಿಸ್ಥಿತಿ ಉಂಟಾಗುತ್ತದೆ ಟಾಪ್ ಹೀರೋಗಳಿಗೆ. ಮೊದಲ ಸಾಲು ನಿಮಗೆ ಅರ್ಥ ಆಗಲಿಲ್ಲ ಎಂದು ಕಾಣುತ್ತದೆ, ಈ ಬಗ್ಗೆ ವಿವರಿಸಿ ಹೇಳುವುದಾದರೆ ತನ್ನ ಮತ್ತು ಸಲ್ಮಾನ್ ಖಾನ್ ನಡುವೆ ಯಾವುದೇ ರೀತಿಯ ಭೇದಾಭಿಪ್ರಾಯಗಳು ಇಲ್ಲ ಎಂದು ಹೇಳಿದ್ದಾರೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್. 
ಅವರ ಅಭಿನಯದ ಹ್ಯಾಪಿ ನ್ಯೂ ಇಯರ್ ಚಿತ್ರವೂ ಕಳೆದವಾರ ಬಿಡುಗಡೆ ಆಗಿ ಬಾಕ್ಸಾಫೀಸಲ್ಲಿ ಗದ್ದಲ ಮಾಡಿತ್ತು. ಈ ಚಿತ್ರದ ಪ್ರಮೋಶನ್‌ನ್ನು ಸಲ್ಮಾನ್ ಖಾನ್ ಬಿಗ್ ಬಾಸ್ ನಲ್ಲಿ ಮಾಡಿದ್ದರು. ಈ ಬಗ್ಗೆ ಧನ್ಯವಾದ ಅರ್ಪಿಸುತ್ತಾ ಶಾರೂಖ್ ತನ್ನ ಮತ್ತು ಸಲ್ಮಾನ್   ನಡುವೆ ಯಾವುದೇ ರೀತಿಯ ಭಿನ್ನತೆ ಇಲ್ಲ ಎನ್ನುವುದನ್ನು ಈ ಪ್ರಕರಣ ಸಾಬೀತು ಮಾಡಿದೆ ಎಂದು ಹೇಳಿದ್ದಲ್ಲದೆ, ತನ್ನ ಚಿತ್ರ ಪ್ರಮೋಟ್ ಮಾಡಿದ್ದಕ್ಕೆ ಸಲ್ಮಾನ್ ಖಾನ್‌ಗೆ ಕೃತಜ್ಞತೆ ಅರ್ಪಿಸಿದ್ದಾರೆ.  
 
ಸಲ್ಮಾನ್ ಮಾಡಿದ ಸಹಾಯಕ್ಕೆ ತಾನು ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ ಶಾರುಖ್. ನಮ್ಮ ನಡುವೆ ಎಂತಹ  ಕಿರಿಕಿರಿ ಇಲ್ಲ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ. ಸಲ್ಮಾನ್ ಖಾನ್ ನನ್ನ ಒಳ್ಳೆಯ ಗೆಳೆಯ,ನನ್ನ ಸಿನಿಮಾಗಳೆಂದರೆ ಆತನಿಗೆ ಸಕತ್ ಇಷ್ಟ ಎಂದು ನಿರ್ದೇಶಕಿ ಫರಾಖಾನ್ ಹೇಳಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್  ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರಧಾರಿಯಾಗಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments