Select Your Language

Notifications

webdunia
webdunia
webdunia
webdunia

ಅಮ್ಮನಾದ ನಯನತಾರ.. ಯಾರಿಗೆ ಯಾವಾಗ ...!!

ಅಮ್ಮನಾದ ನಯನತಾರ.. ಯಾರಿಗೆ ಯಾವಾಗ ...!!
, ಗುರುವಾರ, 9 ಅಕ್ಟೋಬರ್ 2014 (10:57 IST)
ನಯನತಾರ ನಟನೆಯ ನೈಟ್ ಷೋ ಈಗ ಕಾಲಿವುಡ್ ನ ಹಾಟ್ ಟಾಪಿಕ್ ಆಗಿದೆ. ಯಂಗ್ ಹೀರೋಯಿನ್ ಗಳ ಸ್ಪರ್ಧೆಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ನಯನ ನಟಿಯಾಗಿ ತನ್ನ ಅಭಿನಯವನ್ನು ವಿವಿಧ ಪಾತ್ರಗಳ ಮೂಲಕ ತೋರ್ಪಡಿಸುತ್ತಿದ್ದಾಳೆ.

ಈಗ ಆಕೆ ನೈಟ್ ಷೋ ಎನ್ನುವ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಇದೊಂದು ಪ್ರಯೋಗಶೀಲತೆಯ ಅಂಶಗಳನ್ನು ಒಳಗೊಂಡ ಚಿತ್ರವಾಗಿದೆ. ಆ ಸಿನಿಮಾದಲ್ಲಿ ಆರಿ ಎನ್ನುವ ಉದಯೋನ್ಮುಖ ನಟ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾನೆ. ಆದರೆ ಈ ಚಿತ್ರದ ವಿಶೇಷತೆ ಏನೆಂದರೆ ನಯನಾ ಈ ಯಂಗ್ ಹೀರೋ ತಾಯಿಯ ಪಾತ್ರದಲ್ಲಿ ಕಂಡು ಬರುತ್ತಿದ್ದಾಳೆ.ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣ ಆಗಿದ್ದಲ್ಲದೆ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆಯಂತೆ. ಈ ಸಿನಿಮಾದ ಪ್ರಚಾರಕ್ಕೆಂದು ಇತ್ತೀಚೆಗೆ ಶ್ವೇತಾ ಮೋಹನ್ ಅವರ ಬಳಿ ಒಂದು ಹಾಡನ್ನು ರೆಕಾರ್ಡ್ ಮಾಡಿದ್ದು, ಈ ಚಿತ್ರವನ್ನು ಅಶ್ವಿನ್ ಶರವಣ್ ನಿರ್ದೇಶಿಸಿದ್ದಾರೆ.
 
ಅತ್ಯಂತ ಕಡಿಮೆ ಬಜೆಟ್ ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಯಾವ ಪ್ರಸಿದ್ಧ ಹೀರೋಯಿನ್ ಅಭಿನಯಿಸಲು ಮುಂದೆ ಬರದೆ ಇದ್ದರು ಸಹಿತ ಅತ್ಯಂತ ಕಡಿಮೆ ಹಣ ತೆಗೆದುಕೊಂಡು ನಯನ್ ನಟಿಸಿದ್ದಾಳೆ. ನಿರ್ಮಾಪಕರ ಜೇಬು ಎಷ್ಟು ಸಾಧ್ಯವೋ ಅಷ್ಟು ಖಾಲಿ ಮಾಡುವ ಈಕೆ ಕಡಿಮೆ ಬಜೆಟ್ಟಿನ ಚಿತ್ರದಲ್ಲಿ ನಟಿಸಿದ್ದು ಕಂಡು ಸಿಕ್ಕಾಪಟ್ಟೆ ಆಶ್ಚರ್ಯ ಉಂಟು ಮಾಡಿದೆ ಕಾಲಿವುಡ್ ಮಂದಿಗೆ ! 
 
ಅತಿಮಾನುಷ ಅಂಶಗಳನ್ನು ಹೊಂದಿರುವ ಈ ಸಾಹಸ ಪ್ರಧಾನ ಚಿತ್ರದಲ್ಲಿ ನಯನಾ ಪಾತ್ರ ಎಲ್ಲ ಗಮನ ನಿಸ್ಸಂಶಯವಾಗಿ ಸೆಳೆಯುತ್ತದೆ ಎಂದು ನಂಬಲಾಗಿದೆ. ತನಗೆ ಪ್ರಶಸ್ತಿ ದೊರಕಲೆಂದು ಈ ರೀತಿಯ ಪಾತ್ರಗಳಲ್ಲಿ ನಯನ್ ನಟಿಸಿದ್ದಾಳೆ ಎನ್ನುವ ವಿಮರ್ಶೆಗಳು ಕೇಳಿ ಬರುತ್ತಿವೆ. ಏನೇ ಆದರು ನಯತಾರ ಮಾತ್ರ ತನಗೆ ಹೇಗೆ ಬೇಕೋ ಹಾಗೆ ಇರ್ತಾಳೆ.. ಅದೇ ಆಕೆಯ ವಿಶೇಷತೆ!

Share this Story:

Follow Webdunia kannada