Select Your Language

Notifications

webdunia
webdunia
webdunia
webdunia

ಫುಲ್ ಟೈಟ್ ಆಗಿ ರಾದ್ಧಾಂತ ಮಾಡಿದ ಸೈಫ್ ಮಗಳು

ಫುಲ್ ಟೈಟ್ ಆಗಿ ರಾದ್ಧಾಂತ ಮಾಡಿದ ಸೈಫ್ ಮಗಳು
Mumbai , ಶನಿವಾರ, 10 ಡಿಸೆಂಬರ್ 2016 (11:04 IST)
ಬಾಲಿವುಡ್ ಸ್ಟಾರ್ ಹೀರೋ ಹೀರೋಯಿನ್‍ಗಳ ಮಗ, ಮಗಳ ಸ್ವೇಚ್ಛಾಚಾರ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ದುಡ್ಡಿದೆಯಲ್ಲಾ ಅಂತೇಳಿ ದಿನಾ ಪಾರ್ಟಿ ಮಾಡಿಕೊಳ್ಳುತ್ತಾ ಪಬ್ಬು ಬಾರ್‌ಗಳಲ್ಲಿ ಕಳೆಯುವಂತಾಗಿದೆ. 
 
ಇನ್ನೂ ಕೆಲವರು ತಂದೆತಾಯಿಗೆ ನಯಾಪೈಸೆ ಬೆಲೆ ಕೊಡದೆ ಬಾಯ್‌ಫ್ರೆಂಡ್ ಗರ್ಲ್ ಫ್ರೆಂಡ್‍ಗಳ ಜೊತೆ ಅಪ್ಪಅಮ್ಮನ ಮುಂದೆಯೇ ಓಡಾಡುತ್ತಿದ್ದಾರೆ. ಹಣ ಇರೋರಿಗೆ ಇದೆಲ್ಲಾ ಕಾಮನ್ ಅಂತ ಕೆಲವರು ಅಂದುಕೊಂಡು ಸುಮ್ಮನಾದರೆ, ಇನ್ನೂ ಕೆಲವರು ಇದನ್ನೆಲ್ಲಾ ನೋಡುತ್ತಾ ನೋವನುಭವಿಸುವಂತಾಗಿದೆ.
 
ಇತ್ತೀಚೆಗೆ ಸೈಫ್ ಆಲಿಖಾನ್ ಮಗಳು ಸಾರಾ ಅಲಿಖಾನ್ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿವೆ. ಅಮಿತಾಬ್ ಬಚ್ಚನ್ ಮಗಳು ನವ್ಯಾ ನವೇಲಿ 19ನೇ ಹುಟ್ಟುಹಬ್ಬ ಕಾರ್ಯಕ್ರಮ ನಡೆಯಿತು. ಈ ಪಾರ್ಟಿಯಲ್ಲಿ ಬಾಲಿವುಡ್ ಸ್ಟಾರ್ ಹೀರೋ, ಹೀರೋಯಿನ್ ಮಕ್ಕಳದೇ ಹವಾ ಜಾಸ್ತಿ ಇತ್ತು. 
 
ಜಾವಿದ್ ಜಾಫ್ರಿ ಮಗಳು ಅಲವಿಯಾ ಜಾಫ್ರಿ, ಪ್ರಮುಖ ಬಾಲಿವುಡ್ ನಟ ಸೈಫ್ ಆಲಿ ಖಾನ್ ಮಗಳು ಸಾರಾ ಅಲಿಖಾನ್ ಈ ಪಾರ್ಟಿಯಲ್ಲಿ ಹಂಗಾಮ ಮಾಡಿದ್ದಾರೆ. ಫುಲ್ ಟೈಟ್ ಆಗಿ, ಒಬ್ಬರಿಗೊಬ್ಬರು ಮುತ್ತಿಕ್ಕುತ್ತಾ ಕುಡಿದ ಮತ್ತಿನಲ್ಲಿ ನಾನಾ ರಾದ್ಧಾಂತ ಮಾಡಿದ್ದಾರೆ. ಈಗ ಈ ಫೋಟೋಗಳು ಸೈಫ್ ಆಲಿ ಖಾನ್ ಕುಟುಂಬಕ್ಕೆ ಇನ್ನೊಂದು ತಲೆನೋವು ತಂದಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭನ್ಸಾಲಿ ಚಿತ್ರದಲ್ಲಿ ಐಶ್ವರ್ಯ ರೈ ಐಟಂ ಸಾಂಗ್