Webdunia - Bharat's app for daily news and videos

Install App

’ದೇವೀರಿ’ ನಂದಿತಾ ದಾಸ್ ಮುರಿದು ಬಿದ್ದ ದಾಂಪತ್ಯ

Webdunia
ಮಂಗಳವಾರ, 3 ಜನವರಿ 2017 (09:35 IST)
ಕನ್ನಡದ ’ದೇವೀರಿ’ ಚಿತ್ರದಲ್ಲಿ ಅಭಿನಯಿಸಿದ್ದ ನಂದಿತಾ ದಾಸ್ ನೆನಪಿರಬೇಕಲ್ಲಾ. ಕವಿತಾ ಲಂಕೇಶ್ ನಿರ್ದೇಶನದ ಚೊಚ್ಚಲ ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟ ತಾರೆ. ಈ ತಾರೆಯ ವೈವಾಹಿಕ ಜೀವನ ಅಂತ್ಯವಾಗಿದೆ. ಸ್ವಲ್ಪ ದಿನಗಳ ಹಿಂದಷ್ಟೇ ತನ್ನ ಪತಿ ಸುಬೋಧ್ ಮಸ್ಕರಾರಿಂದ ದೂರ ಸರಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
 
ಆಗ ನಂದಿತಾ ದಾಸ್ ಮಾತನಾಡಿರಲಿಲ್ಲ. ಸುಬೋಧ್ ಮಾತ್ರ, ತಾವಿಬ್ಬರೂ ಒಟ್ಟಿಗೆ ಇದ್ದೀವೆಂದು, ದೂರಾಗಬೇಕಾದರೆ ಖಂಡಿತ ಮಾಧ್ಯಮಗಳಿಗೆ ತಿಳಿಸುತ್ತೇವೆ ಎಂದಿದ್ದರು. ಆದರೆ ಸಂದರ್ಶನವೊಂದರಲ್ಲಿ ನಂದಿತಾ ಮಾತನಾಡುತ್ತಾ, ನಾವಿಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.
 
"ಹೌದು ನಿಜ, ನಾನು ಸುಬೋಧ್ ದೂರವಾಗಲು ನಿರ್ಧರಿಸಿದ್ದೇವೆ. ನನ್ನ ಮಗ ನನಗೆ ಬಹಳ ಮುಖ್ಯ. ಸೂಕ್ಷ್ಮ ಮನಸ್ಸಿನ ಮಗು ಮೇಲೆ ನಾವಿಬ್ಬರು ದೂರ ಸರಿಯುತ್ತಿರುವ ಪರಿಣಾಮ ಉಂಟಾಗಬಾರದು. ಈ ಬಗ್ಗೆ ಮುಚ್ಚಿಡುವಂತದ್ದೇನು ಇಲ್ಲ. ಹೇಳಲಿಕ್ಕೂ ಏನೂ ಇಲ್ಲ" ಎಂದಿದ್ದಾರೆ ನಂದಿತಾ ದಾಸ್.

ಈ ಹಿಂದೆ ನಂದಿತಾ ದಾಸ್ ಸೌಮ್ಯಾಸೇನ್‍ರನ್ನು ಮದುವೆಯಾಗಿದ್ದರು. ಏಳು ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದರು. 2010ರಲ್ಲಿ ಸುಬೋಧ್‌ರನ್ನು ಮದುವೆಯಾದರು. ಈ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ಮುಂದಿನ ಸುದ್ದಿ
Show comments