Webdunia - Bharat's app for daily news and videos

Install App

ಮದುವೆಯಾಗದೆ ಅಪ್ಪನಾದ ತುಷಾರ್ ಕಪೂರ್

Webdunia
ಬುಧವಾರ, 29 ಜೂನ್ 2016 (08:53 IST)
ಮೊನ್ನೆಯಷ್ಟೇ ನಟ ರಿತೇಶ್ ದೇಶ್ ಮುಖ್ ಅವರು ತಾನು ಎರಡನೇ ಮಗುವಿನ ತಂದೆಯಾದ ಖುಷಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಬಾಲಿವುಡ್‌ನ ಮತ್ತೊಬ್ಬ ನಟನ ಸರದಿ. ಬಾಲಿವುಡ್ ನಟ ತುಷಾರ್ ಕಪೂರ್ ಅವರು ಇದೀಗ ಮುದ್ದಾದ ಗಂಡು ಮಗುವಿನ ತಂದೆಯಾಗಿಯಾಗಿದ್ದಾರೆ.
ತುಷಾರ್ ಕಪೂರ್ ಅವರು ತಂದೆಯಾಗಿದ್ದಾರೆ ಅಂತಾ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರ ತಲೆಯಲ್ಲಿ ಮೊದಲು ಬಂದ ಪ್ರಶ್ನೆ ಅಂದ್ರೆ ತುಷಾರ್ ಕಪೂರ್ ಅವರು ಯಾವಾಗ ವಿವಾಹವಾಗಿದ್ದರು ಅಂತಾ. ಆದ್ರೆ ತುಷಾರ್ ಮಗುವನ್ನು ಪಡೆದಿರೋದು ಐವಿಎಫ್ ಚಿಕಿತ್ಸೆಯ ಮೂಲಕ. ಅಂದ್ಹಾಗೆ ಈ ಮಗುವಿಗೆ ತುಷಾರ್ ಕಪೂರ್ ಅವರು ಲಕ್ಷ್ಯ ಅಂತಾ ಹೆಸರಿಟ್ಟಿದ್ದಾರೆ. ಇನ್ನು ಮನೆಗೆ ಮುದ್ದಾದ ಮಗು ಬಂದಿರೋದರಿಂದ ತುಷಾರ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆಯಂತೆ.ಅಲ್ಲದೇ ಮಗು ಆರೋಗ್ಯವಾಗಿದೆ ಅಂತಾ ತುಷಾರ್ ಹೇಳಿದ್ದಾರೆ.
 
ಅಲ್ಲದೇ ತಾನು  ತಂದೆಯಾಗಿರೋದಕ್ಕೆ ನನಗೆ ತುಂಬಾನೇ ಖುಷಿಯಾಗುತ್ತಿದೆ ಅಂತಾ ಅವರು ಹೇಳಿದ್ದಾರೆ.
ಇನ್ನು ತಂದೆಯಾದ ಬಳಿಕ ನನ್ನಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಅದರಲ್ಲೂ ನನ್ನ ಮಗುವಿನ ಮುದ್ದು ಮುಖ ನೋಡಿದಾಗ ನನ್ನ ಸಂಭ್ರಮ ಇನ್ನಷ್ಟು ಹೆಚ್ಚಾಗುತ್ತೆ  ಅಂತಾ ಅವರು ಹೇಳಿದ್ದಾರೆ. ಅಲ್ಲದೇ ಲಕ್ಷ್ಯ ನನ್ನ ಜೀವನದ ಅತ್ಯಂತ ಸಂತೋಷದ ಮೂಲ ಅಂತಾ ತುಷಾರ್ ಹೇಳಿದ್ದಾರೆ.ಆದ್ರೆ ತುಷಾರ್ ಅವರು ಐವಿಎಫ್ ಚಿಕಿತ್ಸೆ ಮೂಲಕ ಹೀಗೆ ಮಗುವನ್ನು ಯಾಕೆ ಪಡೆದ್ರು ಅನ್ನೋದು ಮಾತ್ರ ಹಲವರ ತಲೆಯಲ್ಲಿ ಕೊರೆಯುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments