ಉಗ್ರಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತನ್ನ ಸ್ಥಾನವನ್ನು ಭದ್ರವಾಗಿಸಿಕೊಂಡ ನಟ ಶ್ರೀಮುರಳಿ ಈ ಹಿಂದೆ ತೆರೆಕಂಡ ತಮ್ಮ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದರು.ಇದೀಗ ತಮ್ಮ ಮುಂದಿನ ಸಿನಿಮಾದಲ್ಲೂ ಮುರಳಿ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ಗಣೇಶ ಚತುರ್ಥಿ ಹಬ್ಬಕ್ಕೆ ಮುರಳಿ ಮುಂದಿನ ಚಿತ್ರದ ಘೋಷಣೆ ಮಾಡಲಾಗುವುದು ಎಂದು ಸ್ಯಾಂಡಲ್‌ವುಡ್ ನಟ ಮುರುಳಿ ತಿಳಿಸಿದ್ದಾರೆ.
ನಟ ಮುರಳಿ ಮುಂದಿನ ಚಿತ್ರದ ಟೈಟಲ್ ಅನೌನ್ಸ್ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ನಟ ಮುರಳಿ ಅವರೇ ಖಚಿತಪಡಿಸಿದ್ದು, ಹಬ್ಬದಂದು ಚಿತ್ರದ ಟೈಟಲ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.
ಮೂಲಗಳ ಪ್ರಕಾರ ಸಿನಿಮಾ ಟೈಟಲ್ 'ಮುಫ್ತಿ' ಎಂದು ಈಡಲಾಗಿತ್ತು. ಟೈಟಲ್ ಬಗ್ಗೆ ಜಯಣ್ಣ ಮುಫ್ತಿ ಎಂದು ಇಟ್ಟಿದ್ರಂತೆ. ಆದರೆ ಚಿತ್ರತಂಡ ಇದೀಗ ಸಿನಿಮಾದ ಟೈಟಲ್ ಬದಲಾವಣೆ ಮಾಡುತ್ತಿದೆ. ಹಬ್ಬಕ್ಕೆ ಹೊಸ ಟೈಟಲ್ ಘೋಷಣೆ ಮಾಡುವುದರ ಬಗ್ಗೆ ಖಚಿತ ಪಡಿಸಿದ್ದಾರೆ.
ಶ್ರೀಮುರಳಿ ಅವರ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್ ಜತೆಗೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.ಅಂದ್ಹಾಗೆ ಮುರುಳಿ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.ಈಗಾಗಲೇ ಸಿನಿಮಾದ ಸ್ಕ್ರಿಫ್ಟ್ ಕೆಲಸಗಳು ಮುಗಿದ್ದಿದ್ದು, ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.ಅತೀ ಶೀಘ್ರದಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ