Select Your Language

Notifications

webdunia
webdunia
webdunia
webdunia

ಆಗಸ್ಟ್ 5 ಕ್ಕೆ ಮುಂಗಾರು ಮಳೆ ಸಿನಿಮಾಡ ಆಡಿಯೋ ರಿಲೀಸ್

ಆಗಸ್ಟ್ 5 ಕ್ಕೆ ಮುಂಗಾರು ಮಳೆ ಸಿನಿಮಾಡ ಆಡಿಯೋ ರಿಲೀಸ್
ಬೆಂಗಳೂರು , ಶನಿವಾರ, 30 ಜುಲೈ 2016 (09:07 IST)
ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸೆನ್ಸೇಷನ್ ಹುಟ್ಟಿ ಹಾಕಿದ ಸಿನಿಮಾ ಅಂದ್ರೆ ಅದು ಮುಂಗಾರು ಮಳೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ವೃತ್ತಿ ಬದುಕಿಗೆ ಹೊಸದೊಂದು ತಿರುವು ಕೊಟ್ಟ ಸಿನಿಮಾವದು. ಇದೇ ಹೆಸರನ್ನು ಇಟ್ಟುಕೊಂಡು ನಿರ್ದೇಶಕ ಹಾಗೂ ಗಣೇಶ್ ಕಾಂಬಿನೇನ್ ನಲ್ಲಿ ಮುಂಗಾರು ಮಳೆ-2 ಸಿನಿಮಾ ಬರುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಈ ಸಿನಿಮಾದ ಆಡಿಯೋ ರಿಲೀಸ್ ಗೆ ರೆಡಿಯಾಗಿದೆ.

ಅಂದ್ಹಾಗೆ ಈಗಾಗಲೇ ಮುಂಗಾರು ಮಳೆ–2' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಯೂರೋಪ್, ರಾಜಸ್ಥಾನ ಹಾಗೂ ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಆಗಸ್ಟ್ 5ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಶಶಾಂಕ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಕ್ರೇಜಿಸ್ಟಾರ್ ರವಿಚಂದ್ರನ್, ನೇಹಾ ಶೆಟ್ಟಿ, ಐಂದ್ರಿತಾ ರೇ, ಶಿಲ್ಪ ಮಂಜುನಾಥ್, ರವಿಶಂಕರ್, ಸಾಧುಕೋಕಿಲ. ತಬಲನಾಣಿ ಮುಂತಾದವರಿದ್ದಾರೆ.

ಮುಂಗಾರು ಮಳೆ ಸಿನಿಮಾದ ಹಾಡುಗಳು ಸ್ಯಾಂಡಲ್ ವುಡ್ ನಲ್ಲಿ ಇಂದಿಗೂ ಅಭಿಮಾನಿಗಳ ನೆಚ್ಚಿನ ಹಾಡುಗಳು. ಈ ಹಾಡುಗಳು ಇಂದಿಗೂ ಅನೇಕ ಮೊಬೈಲ್ ಗಳ ರಿಂಗ್ ಟೋನ್ ಆಗಿದೆ. ಇದೀಗ ಮುಂಗಾರು ಮಳೆ-2 ಸಿನಿಮಾದ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್‌ಸ್ಟಾಗ್ರಾಮ್‌ನಲ್ಲಿ ಗ್ಲಾಮರಸ್ ಫೊಟೋ ಪೋಸ್ಟ್ ಮಾಡಿದ ನಟಿ ಭಾಗ್ಯಶ್ರೀ