Select Your Language

Notifications

webdunia
webdunia
webdunia
webdunia

ರಜನಿಕಾಂತ್ ಸ್ಥಾನಕ್ಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ?

ರಜನಿಕಾಂತ್  ಸ್ಥಾನಕ್ಕೆ  ಮಿಸ್ಟರ್ ಪರ್ಫೆಕ್ಷನಿಸ್ಟ್  ಆಮೀರ್ ಖಾನ್ ?
ಮುಂಬೈ , ಮಂಗಳವಾರ, 25 ನವೆಂಬರ್ 2014 (12:17 IST)
ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ರಜನಿ ಕಾಂತ್ ಅವರ ಬದಲಾಗಿ ನಟಿಸುತ್ತಿದ್ದಾರ ? ಇದು ಈಗ ಬಾಲಿವುಡ್ ಮಾತ್ರವಲ್ಲ ದಕ್ಷಿಣದ ಎಲ್ಲ ವುಡ್ ಗಳಲ್ಲೂ  ಕಾಡುತ್ತಿರುವ ಪ್ರಶ್ನೆಯಾಗಿದೆ.

ಏಕೆಂದರೆ  ರೋಬೋ ರಜನಿಕಾಂತ್ ಮತ್ತು ಐಶ್ವರ್ಯ ರೈ ನಟಿಸಿದ್ದ ಸೂಪರ್ ಡೂಪರ್ ಹಿಟ್  ಚಿತ್ರ. ಅದರಲ್ಲಿ ಮುಖ್ಯಪಾತ್ರಧಾರಿ ರೋಬೋಟ್. ಅತ್ಯಂತ ಆಕರ್ಷಕ ಟೆಕ್ನಾಲಜಿ ಬಳಸಿ  ನಿರ್ಮಿಸಿದ ಚಿತ್ರವನ್ನು ಶಂಕರ್ ಅವರು ನಿರ್ದೇಶನ ಮಾಡಿದ್ದರು. ಸಾಕಷ್ಟು ಗಳಿಕೆ ಮಾಡಿದ್ದ ಈ ಚಿತ್ರದ ಎರಡನೇ ಭಾಗ ಸಿದ್ಧ ಮಾಡುವ ಸಿದ್ಧತೆ ನಡೆದಿದೆ. ಆದರೆ ರಜನಿಕಾಂತ್ ಅವರು ಈ ಪಾತ್ರದಲ್ಲಿ ನಟಿಸಲು ಸಮ್ಮತಿಸಿಲ್ಲ.

ಅದಕ್ಕೆ ಅವ್ರ  ವಯಸ್ಸು ಮತ್ತು ದೇಹಸ್ಥಿತಿ ಅಡ್ಡಿಯಾಗಿದೆ. ಆದರೆ ಮುಂದುವರೆದ ಭಾಗದಲ್ಲಿ ತಮಿಳು ನಟ ವಿಜಯ್ ನಟಿಸುವ ಸಾಧ್ಯತೆ ಕೇಳಿ ಬಂದಿತ್ತು. ಅಂತಿಮವಾಗಿ ಆಮೀರ್ ಖಾನ್ ನಟಿಸುವ ಸಾಧ್ಯತೆಗಳು ಕೇಳಿ ಬರುತ್ತಿವೆ.

 ಹಾಗಾದಲ್ಲಿ ಇಷ್ಟು ದಿನ ರಜನಿ ಅವರ ಬಗ್ಗೆ  ಕೇಳಿ ಬರುತ್ತಿದ್ದ ಜೋಕ್ಸ್ ಆಮೀರ್ ಬಗ್ಗೆ ಕೇಳಿ ಬರುತ್ತದೆ.  ಮೊದಲ ಭಾಗದಲ್ಲಿ ಐಶ್ ಹೀರೋಯಿನ್ ಆಗಿದ್ದರು . ಆದರೆ ಎರಡನೇ ಭಾಗದಲ್ಲಿ ಯಾರು ಆಗ ಬಹುದೆನ್ನುವ ಸಂಗತಿ ಇನ್ನು ನಿಕ್ಕಿ ಆಗಿಲ್ಲ.

Share this Story:

Follow Webdunia kannada