Select Your Language

Notifications

webdunia
webdunia
webdunia
webdunia

ಕಪೂರ್ ಮನೆತನದ ಐದನೆಯ ತಲೆಮಾರಿನ ನಟಿ ಕರಿಶ್ಮಾ ಕಪೂರ್

ಕಪೂರ್ ಮನೆತನದ ಐದನೆಯ ತಲೆಮಾರಿನ ನಟಿ ಕರಿಶ್ಮಾ ಕಪೂರ್
ಚೆನ್ನೈ , ಶುಕ್ರವಾರ, 21 ನವೆಂಬರ್ 2014 (16:45 IST)
ಬಾಲಿವುಡ್ ಜಗತ್ತಿನ ಅತ್ಯುತ್ತಮ ಚಿತ್ರನಟಿಯರಲ್ಲಿ ಒಬ್ಬರಾಗಿರುವ ಕರಿಶ್ಮಾ ಕಪೂರ್ ಜನಿಸಿದ್ದು ವಾಣಿಜ್ಯ ನಗರಿ ಮುಂಬೈನಲ್ಲಿ 1974ರ ಜೂನ್ 25ರಂದು.
 
ಬಾಲಿವುಡ್ ಜಗತ್ತಿನ ದಂತಕತೆಯಾಗಿರುವ ಕಪೂರ್ ಮನೆತನದಲ್ಲಿ ಜನಿಸಿದ ಕರಿಶ್ಮಾಗೆ ನಟನೆ ಹುಟ್ಟಿನಿಂದಲೆ ವರದಾನವಾಗಿ ಬಂದಿದೆ ಮತ್ತು ಬಾಲ್ಯದಿಂದಲೂ ಅಭಿನಯಿಸುತ್ತಾ ಬಂದಿರುವ ಕರಿಶ್ಮಾ ಸಹ ಇತರ ನಟಿಯರಂತೆ ಹಲವು ಕೀರ್ತಿ ಮತ್ತು ಅಪಕೀರ್ತಿಗಳಿಗೆ ಗುರಿಯಾಗಿರುವ ನಟಿಯಾಗಿದ್ದಾರೆ.
 
ತಂದೆಯಂತೆಯೆ ಬಾಲಿವುಡ್ ಜಗತ್ತಿನಲ್ಲಿ ಭವಿಷ್ಯವನ್ನು ಅರಸಿಕೊಂಡು ಬಂದ ಕರಿಶ್ಮಾ 1991ರಲ್ಲಿ 'ಪ್ರೇಮಖೈದಿ' ಚಿತ್ರದ ಮೂಲಕ ತಮ್ಮ ಚಿತ್ರವೃತ್ತಿಯ ಜೀವನವನ್ನು ಆರಂಭಿಸಿದರು.
 
ಎರಡು ವರ್ಷಗಳ ನಂತರ ಮತ್ತೆ ಭರ್ಜರಿ ಯಶಸ್ಸಿನ ಚಿತ್ರವನ್ನು ನೀಡಿದ ಕರಿಶ್ಮಾ, ಅಲ್ಲಿಂದ ಹಿಂದುರಿಗಿ ನೋಡಿಯೆ ಇಲ್ಲ. 1993ರಲ್ಲಿ 'ಅನಾರಿ' ಚಿತ್ರ ಕರಿಶ್ಮಾಗೆ ಬಾಲಿವುಡ್ ಚಿತ್ರ ಜಗತ್ತಿನಲ್ಲಿ ಶಾಶ್ವತವಾದ ಸ್ಥಾನವೊಂದನ್ನು ನಿರ್ಮಿಸಿಕೊಟ್ಟಿತು.
 
ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ ಕರಿಶ್ಮಾ 1994ರಿಂದ 1997ರ ವರೆಗೆ ಯಶಸ್ವಿ ಹಾಸ್ಯಭರಿತ ಚಿತ್ರಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿದರು.
 
'ಅಂದಾಜ್ ಅಪ್ನಾ ಅಪ್ನಾ', 'ರಾಜಾ ಬಾಬು', 'ಹೀರೋ ನಂಬರ್ ಓನ್', 'ರಾಜಾ ಹಿಂದೂಸ್ತಾನಿ', 'ದಿಲ್ ತೊ ಪಾಗಲ್ ಹೈ', 'ಪಿಜಾ' ದಂತಹ ಹಾಸ್ಯಭರಿತ ಚಿತ್ರಗಳನ್ನು ನೀಡಿ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಅಚ್ಚೊತ್ತಿದ್ದಾರೆ.
 
'ರಾಜಾ ಹಿಂದೂಸ್ತಾನಿ' ಚಿತ್ರದ ಆರತಿ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯ ನೀಡಿದ್ದಕ್ಕಾಗಿ ಕರಿಶ್ಮಾ 1996ರ ಅತ್ಯುತ್ತಮ ಚಲನಚಿತ್ರ ನಟಿ ಎಂದು ಫಿಲ್ಮಪೇರ್ ಪ್ರಶಸ್ತಿ ಗಳಿಸಿದ್ದಾರೆ.
 
1997ರಲ್ಲಿ 'ದಿಲ್ ತೊ ಪಾಗಲ್ ಹೈ' ಚಿತ್ರದ ಅಭಿನಯಕ್ಕಾಗಿ ಅತ್ಯತ್ತಮ ಪೋಷಕ ನಟಿ ಎಂದು ರಾಷ್ಟ್ರೀಯ ಪ್ರಶಸ್ತಿಯನ್ನು ಮತ್ತು ಝೀ ಸಿನೇಮಾ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ.
 
2002ರಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ವಿವಾಹ್ ನಿಶ್ಚಿತಾರ್ತವಾಗಿ ನಾಲ್ಕು ತಿಂಗಳ ನಂತರ ವಿವಾಹ ಮುರಿದು ಬಿದ್ದದ್ದು ಕರಿಶ್ಮಾ ಜೀವನದ ದೊಡ್ಡ ಅಘಾತವಾಗಿದೆ.
 
ಅಲ್ಪ ದಿನಗಳಲ್ಲಿಯೆ ಈ ಅಘಾತದಿಂದ ಹೊರ ಬಂದ ಕರಿಶ್ಮಾ ಸಂಜಯ ಕಪೂರ್ ಎನ್ನುವ ಖ್ಯಾತ ಉದ್ಯಮಿಯನ್ನು ವಿವಾಹವಾಗಿ ಉತ್ತಮ ಕೌಟುಂಬಿಕ ಜೀವನವನ್ನು ಸಾಗಿಸುತ್ತಿದ್ದಾರೆ.
 
 
 

Share this Story:

Follow Webdunia kannada