Select Your Language

Notifications

webdunia
webdunia
webdunia
webdunia

ಹೊಸಮನೆಗೆ ಅಡಿ ಇಟ್ಟ ರಣಬೀರ್ ಕಪೂರ್-ಕತ್ರಿನ ಕೈಫ್

ಹೊಸಮನೆಗೆ ಅಡಿ ಇಟ್ಟ ರಣಬೀರ್ ಕಪೂರ್-ಕತ್ರಿನ ಕೈಫ್
ಮುಂಬೈ , ಶುಕ್ರವಾರ, 21 ನವೆಂಬರ್ 2014 (12:25 IST)
ಸಾಕಷ್ಟು ದಿನಗಳಿಂದ ಸುದ್ದಿಯಲ್ಲಿ ಇದ್ದ ಇವರ ಡೇಟಿಂಗ್ ಸಂಗತಿಗೆ ಈಗ ಒಂದು ಅರ್ಥ ಸಿಕ್ಕಿದೆ. ಜೊತೆಗೆ ಅಂತಿಮ ರೂಪ ಪಡೆದುಕೊಂಡಿದೆ ಎಂದೇ ಹೇಳ ಬಹುದಾಗಿದೆ. 
 
ಬಾಲಿವುಡ್ ನಲ್ಲಿ ಸಾಕಷ್ಟು ದಿನಗಳಿಂದ ಪ್ರೀತಿಯಲ್ಲಿ ಮುಳುಗಿ ಮುಳುಗಿ-ಏಳುತ್ತಿದ್ದ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಇನ್ನು ಕದ್ದುಮುಚ್ಚಿ ಲವ್ ಮಾಡೋದು ಬೇಡ ಒಂದೇ ಸರ್ತಿ ಸಂಸಾರವನ್ನೇ ಮಾಡಿ ಬಿಡೋಣ ಎಂದು ನಿರ್ಧರಿಸಿ ಮುಂಬೈನಲ್ಲಿ ಮನೆ ತೆಗೆದುಕೊಂಡು ಈಗ ಆ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. 
 
ಆ ಮನೆಗೆ ಬರುವ ಮುನ್ನ ರಣಬೀರ್ ಅವರ ತಂದೆ ರಣಧೀರ್ ಕಪೂರ್ ಅವರ ಆರೋಗ್ಯ ಹದಗೆಟ್ಟಿತ್ತು. ತನ್ನ ತಂದೆಯ ಆರೋಗ್ಯ ಸರಿಯಾದ ಬಳಿಕ ಹೊಸ ಮನೆಗೆ ಬಂದಿದ್ದಾರೆ ರಣಬೀರ್. ಈಗ ಅವರು ಕೃಷ್ಣ ನಿವಾಸಿಯಲ್ಲ.  ಬದಲಿಗೆ ಕತ್ರಿನಾ ಜೊತೆ ವಾಸಿ ಈ ಮನೆಯ ಗೃಹ ಪ್ರವೇಶ  ಇತ್ತೀಚಿಗೆ ನಡೆದಿದ್ದು, ಕಾರ್ಯಕ್ರಮದಲ್ಲಿ  ಆರ್ಯನ್ ಮುಖರ್ಜಿ, ಹೃತಿಕ್ ರೋಶನ್, ಕಂಗನ ರನೌಟ್, ಅನುಷ್ಕ ಶರ್ಮ, ಕಬೀರ್ ಖಾನ್, ಸೇರಿದಂತೆ ಬಾಲಿವುಡ್ ಗೆ ಸೇರಿದ ಬಹುತೇಕರು ಬಂದಿದ್ದರಂತೆ.ಈಗ ಲೀವಿನ್ ಸಂಬಂಧದಲ್ಲಿ ಇರುವ ಈ ಜೋಡಿ ಹೊಸ ಮನೆಯ ಆನಂದ ಅನುಭವಿಸುತ್ತಿದ್ದಾರೆ. ಎಲ್ಲವು ಇವರು ನೆನೆದಂತೆ ಆದರೆ ಮುಂದಿನ ವರ್ಷ ಮದುವೆ ಆಗುತ್ತಿದ್ದಾರೆ. 

Share this Story:

Follow Webdunia kannada