Webdunia - Bharat's app for daily news and videos

Install App

ಐಟಂ ಗರ್ಲ್ ಹಾದಿಯಲ್ಲಿ ಶ್ರುತಿ ಹಾಸನ್..ಹೀರೋಯಿನ್ ಗಿಂತ ಐಟಂ ಗೆ ಆದ್ಯತೆ ಕೊಟ್ಟ ನಟಿ

Webdunia
ಶುಕ್ರವಾರ, 21 ನವೆಂಬರ್ 2014 (12:22 IST)
ಆಗಡು ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ತನ್ನ ಸೌಂದರ್ಯವನ್ನು ಹೊರ ಹಾಕಿದ ಶ್ರುತಿ ಹಾಸನ್ ಈಗ ಆ ಚಿತ್ರ ಸೋತು ಮಕಾಡೆ ಮಲಗಿದ ಬಳಿಕ ಟಾಲಿವುಡ್ ನಲ್ಲಿ ಏನು ಮಾಡ ಬೇಕು ಎಂದು ತಿಳಿಯದ ಪರಿಸ್ಥಿತಿಯಲ್ಲಿ ಇದ್ದಾಳೆ. ಅದಕ್ಕೆ ಪೂರಕವಾಗಿ ಆಕೆ ಮತ್ತೆ ಐಟಂ ಸಾಂಗ್ ನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಎಲ್ಲ ಸಂಗತಿಗಳು ಕಂಡು ಬರುತ್ತಿದೆ. ಅಂದರೆ ಶ್ರುತಿ ಮತ್ತೆ ಜೂನಿಯರ್ ಇಂತಿ ಆರ್ ಅವರ ಚಿತ್ರದಲ್ಲಿ ಐಟಂ ನಂಬರ್ ಮಾಡಲು ಸಿದ್ಧತೆ ನಡೆಸಿದ್ದಾಳೆ. 
 
ಸಾಮಾನ್ಯವಾಗಿ ತಾವು  ಹೆಚ್ಚು ಜನಪ್ರಿಯತೆ ಪಡೆದಿರುವ ಸಮಯದಲ್ಲಿ ಅನೇಕ ನಟಿಯರು ಐಟಂ ನಂಬರ್ ಮಾಡಿದ್ದಾರೆ. ಆದರೆ ಅದನ್ನೇ ಅವರು ನೆಚ್ಚಿಕೊಂಡು ಕುಳಿತಿಲ್ಲ. ಏಕೆಂದರೆ ಒಮ್ಮೆ ಐಟಂ ನಂಬರ್ ಮಾಡದೆ  ಮತ್ತೆ ಅದರತ್ತ ತಮ್ಮ ಆದ್ಯತೆ ನೀಡಿದರೆ ಅದರಿಂದ ನಷ್ಟವೇ ಹೊರತು ಲಾಭವಾಗಿಲ್ಲ ಅವರ ತಾರ ಬದುಕಿಗೆ. 
 
ಹೀಗೆ ಅನೇಕ ತಾರೆಯರು ಅತಿಯಾಸೆಗೆ ಬಿದ್ದು ಹೀರೋಯಿನ್ ಗಳಾಗಿ ಇದ್ದಾಗಲೇ ಐಟಂಕಡೆಗೆ ಕೈ ಚಾಚಿದ ಫಲ ಈಗ ಅವಕಾಶಗಳು ಇಲ್ಲದ ಸ್ಥಿತಿ ಏರ್ಪಡಿಸಿಕೊಂಡಿದ್ದಾರೆ.ಅದೇ ಸಾಲಿಗೆ ಶ್ರುತಿ ಸೇರುತ್ತಿದ್ದಾಳ ಎನ್ನುವ ಚಿಂತೆ ಮತ್ತು ಚರ್ಚೆ ಈಗ ಟಾಲಿವುಡ್  ಚಿತ್ರಪಂಡಿತರಲ್ಲಿ ಮೂಡಿದೆ. 
 
ಮುಖ್ಯವಾಗಿ ಈ ರೀತಿಯ ಅಭಿಪ್ರಾಯ ಹೊಂದಲು ಏನು ಕಾರಣವೆಂದರೆ ಶ್ರುತಿ ಹಾಸನ್ ಕೇವಲ ಟಾಲಿವುಡ್ ಮಾತ್ರವಲ್ಲ, ಕಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಸಹಿತ ಜನಪ್ರಿಯತೆ ಹಾಗೂ ಹೇರಳ ಅವಕಾಶಗಳನ್ನು ಪಡೆದ ನಟಿ. ಇಷ್ಟೆಲ್ಲಾ ಅವಕಾಶಗಳು ಇದ್ದರು ಸಹಿತ ಈ ರೀತಿ ಐಟಂ ಗರ್ಲ್ ಆಗುವ ಆಕೆಯ ಅತಿಯಾಸೆ ಬಗ್ಗೆ ಏನು ಹೇಳುವುದು? ಮುಂದೆ ಏನಾಗುತ್ತದೆಯೋ ಬಲ್ಲವರು ಯಾರು. ಆದರೂ ಸಹಿತ ಐಟಂ ಹುಡುಗಿಯಾಗುವುದಕ್ಕಿಂತ ಹೀರೋಯಿನ್ ಆಗಿ ಹೆಚ್ಚು ಒಳ್ಳೆಯ ಚಿತ್ರಗಳನ್ನು ನೀಡಲಿ ಎನ್ನುವ ಸದಾಶಯ ನಮ್ಮದು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments