Select Your Language

Notifications

webdunia
webdunia
webdunia
webdunia

ಕಿಕ್ ಮುಂದುವರೆದ ಭಾಗದತ್ತ ಸಾಜಿದ್ ಆಸಕ್ತಿ.. ಸಲ್ಮಾನ್ ಖಾನ್ ನಿಂದ ಗ್ರೀನ್ ಸಿಗ್ನಲ್

ಕಿಕ್ ಮುಂದುವರೆದ ಭಾಗದತ್ತ ಸಾಜಿದ್ ಆಸಕ್ತಿ.. ಸಲ್ಮಾನ್ ಖಾನ್ ನಿಂದ ಗ್ರೀನ್ ಸಿಗ್ನಲ್
ಮುಂಬೈ , ಶುಕ್ರವಾರ, 21 ನವೆಂಬರ್ 2014 (12:20 IST)
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈಗ ರೀಮೇಕ್ ರಾಜ್ ಅನ್ನುವ ಅಗ್ಗಳಿಕೆ ಪಡೆದ ನಟ. ಆದರೆ ಎಲ್ಲ ಚಿತ್ರಗಳನ್ನು ರೀಮೇಕ್ ಮಾಡಿಲ್ಲ ಆ ಸಂಗತಿಯು ನೆನಪಿರಲಿ. ದಬಾಂಗ್ ಸಲ್ಮಾನ್ ಅವರ ಯಶಸ್ವಿ ಚಿತ್ರಗಳಲ್ಲಿ ಒಂದು.ಆ ಚಿತ್ರ ನಟಿ ಸೋನಾಕ್ಷಿ ಸಿನ್ಹ ಗೆ ಜೀವದಾನ ಮಾಡಿತ್ತು. 
 
ಅದಾದ ಬಳಿಕ ಅದೇ ಚಿತ್ರದ ಪಾರ್ಟ್ 2  ವನ್ನು ಸಹಿತ ತೆರೆಗೆ ತಂದರು ಸಲ್ಮಾನ್ ಖಾನ್. ನಂತರ ತೆಲುಗು ಚಿತ್ರ ಕಿಕ್ ನ ರೀಮೇಕ್ ನ್ನು ಕಿಕ್ ಹೆಸರಿನಲ್ಲಿಯೇ ನಿರ್ಮಿಸಿದರು. ಮುಖ್ಯ ಪಾತ್ರಧಾರಿಯಾಗಿದ್ದ ಸಲ್ಮಾನ್ ಜಾಕ್ವೆಲಿನ್ ‍ಫರ್ನಾಂಡೀಸ್ ಗೆ ಜೀವದಾನ ಮಾಡಿದರು. ಈಗ ಆ ಚಿತ್ರದ ಎರಡನೇ ಭಾಗವನ್ನು ನಿರ್ಮಿಸುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಆ ಚಿತ್ರವನ್ನು ಸಾಜಿದ್  ನಡಿಯಾಡ್ ವಾಲ ಅವರು ನಿರ್ದೇಶನ ಮಾಡುತ್ತಿದ್ದಾರೆ. 
 
ಮೊದಲ ಕಿಕ್ ಬಾಕ್ಸಾಫೀಸಲ್ಲಿ ಕಿಕ್ ನೀಡಿದ ಬಳಿಕ ಎರಡನೇ ಬಾರಿ ಕಿಕ್ ಪಡೆಯಲು ಸಲ್ಮಾನ್ ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ಈಗ ಬಾಲಿವುಡ್ ಪಟ್ಟಣದಲ್ಲಿ ಹರಡಿದೆ.  
 
ಈ ವರ್ಷ ಬಿಡುಗಡೆಯಾದ ಕಿಕ್  ಈವರೆಗೂ ಗಳಿಸಿದ ಮೊತ್ತ 234  ಕೋಟಿ ರೂಪಾಯಿಗಳು ಎಂದು ಬಾಕ್ಸಾಫೀಸ್ ದಾಖಲೆಗಳು ತಿಳಿಸಿವೆ. 
 
ಸಲ್ಮಾನ್ ಖಾನ್ ಅವರ ಅಭಿನಯದ ಏಕ ಥಾ ಟೈಗರ್ ಚಿತ್ರ 188 ಕೋಟಿ ರೂಗಳನ್ನು ಗಳಿಸಿತ್ತು. ಈಗ ಕಿಕ್ ಅದನ್ನು ಸಹಿತ ಮೀರಿದೆ.ಆದ್ದರಿಂದ ಸಾಜಿದ್ ಮತ್ತು ವಿತರಕರು ಈ ಚಿತ್ರದ ಮುಂದುವರೆದ ಭಾಗ ನಿರ್ಮಿಸಲು ಆಸಕ್ತಿ ತೋರುತ್ತಿದ್ದಾರಂತೆ. 
 
ಆದರೆ ಪ್ರಸ್ತುತ ಸಾಜಿದ್ ಸಕತ್ ಬ್ಯುಸಿ. ಆದರೆ ಚಿತ್ರವೂ ಸೆಟ್ಟೇರಿದಾಗ ಮಾತ್ರ ಅದರ ಬಗ್ಗೆ ಮಾತಾಡೋಣ ಅಲ್ಲಿವರೆಗೂ ಅಂತೆ ಕಂತೆಗಳನ್ನು ಕೇಳೋಣ ಎನ್ನುವ ಮಾತು ಬಿ ಟೌನ್ ವಾಸಿಗಳು ಆಡುತ್ತಿದ್ದಾರೆ.ಅವರಿಷ್ಟದಂತೆ ಆಗಲಿ.. ಏನನ್ನುತ್ತೀರಿ?    

Share this Story:

Follow Webdunia kannada