Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ಟೀವಿ ಷೋ ಗೆ ಪಡೆದ ಮೊತ್ತ ಎಷ್ಟು ಗೊತ್ತೇ!

ಸಾನಿಯಾ ಮಿರ್ಜಾ ಟೀವಿ ಷೋ ಗೆ ಪಡೆದ ಮೊತ್ತ  ಎಷ್ಟು ಗೊತ್ತೇ!
ಹೈದ್ರಾಬಾದ್ , ಗುರುವಾರ, 20 ನವೆಂಬರ್ 2014 (11:16 IST)
ಸ್ಟಾರ್ ಡಂ ಇರುವ ಕಲಾವಿದರು ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸಾಕಷ್ಟು ಹಣ ಸಂಪಾದಿಸುತ್ತಾರೆ. ಅದೇರೀತಿ ಫಾಂ ನಲ್ಲಿ ಇರುವಾಗಲೇ  ಎಂಡೋರ್ಸ್ ಮೆಂಟ್ ನಿಂದ ಕೋಟಿ ರೂಪಾಯಿಗಳನ್ನು ಪಡೆಯ ಬೇಕು ಎನ್ನುವ ಗುರಿ ಇಂದಿನ ಕ್ರೀಡಾಪಟುಗಳದ್ದಾಗಿದೆ. ಆದರೆ ಸ್ಟಾರ್ ಕ್ರೀಡಾಪಟುಗಳು ಬಾಯಿಗೆ ಬಂದಷ್ಟು ಮೊತ್ತ ಹೇಳಿ  ಸಂಭಾವನೆ ಪಡೆದಿದ್ದಾರೆ. ಈಗ ಸಾನಿಯಾ ಮಿರ್ಜಾ ಈ ಗುಂಪಿಗೆ ಸೇರ್ಪಡೆ ಆಗಿದ್ದಾಳೆ. 
 
ಸಾನಿಯಾ ಮಿರ್ಜಾ ಈ ಹಿಂದೆ  ಎಂಡೋರ್ಸ್ ಮೆಂಟ್ ಗಾಗಿ ಕೋಟಿ ರೂಪಾಯಿಗಳು ಪಡೆದಿರಬಹುದು. ಆದರೆ ಮೊದಲ ಬಾರಿಗೆ ತಾನು ಹೋಸ್ಟ್ ಆಗುತ್ತಿರುವ ಟೆಲಿವಿಷನ್ ಷೋಗೆಂದು ಆಕೆ ಪಡೆಯುತ್ತಿರುವ ಸಂಭಾವನೆ ಈಗ ಎಲ್ಲರ ಗಮನ ಸೆಳೆಯುವಂತೆ ಇದೆ. ಇದು ಬಿ ಪಟ್ಟಣವಾಸಿಗಳನ್ನು ಆಕೆಯತ್ತ ನೋಡುವಂತೆ ಮಾಡಿದೆ. ಇದು ಜೇಮ್ಸ್ ಬಾಂಡ್ ಗೆ ಸಂಬಂಧಪಟ್ಟ ಟೀವಿ   ಷೋ ಆದ್ದರಿಂದ ಮತ್ತಷ್ಟು ಆಕರ್ಷಣೆ ಇದೆ. ಸೋನಿ ಫಿಕ್ಸ್ ವಾಹಿನಿಯಲ್ಲಿ ಸಧ್ಯದಲ್ಲೇ ಆಕೆ ಸ್ಕೂಲ್ ಆಫ್  ಬಾಂಡಿಂಗ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಳೆ ಈ ಭಾಮೆ. 
 
ಈ ಕಾರ್ಯಕ್ರಮದ ಟೀಜರ್ ಬಿಡುಗಡೆ ಆಗಿದ್ದು ಅರವತ್ತು ಸೆಕೆಂಡ್ ಗಳಲ್ಲಿ ಆಕೆಯ ನಟನೆ, ಮಾತುಕತೆ ಪ್ರತಿಯೊಬ್ಬರನ್ನು ಆಕರ್ಷಿಸಿದೆ.ಜೇಮ್ಸ್ ಬಂದ್ ಚಿತ್ರಕ್ಕೆ ಸಂಬಂಧ ಪಟ್ಟ ವಿಶೇಷತೆಗಳನ್ನು ಈ  ಕಾರ್ಯಕ್ರಮದಲ್ಲಿ ರಿವೀಲ್ ಮಾಡಲಾಗುತ್ತಿದೆ. 
 
ಹೇಗೆ ಆರಂಭವಾಗಿದೆ ಎನ್ನುವುದಕ್ಕಿಂತ ಎಂತಹ ಮುಕ್ತಾಯ ಹೊಂದುತ್ತೇವೆ ಎನ್ನುವ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಈ ಶೋ ನಿರೂಪಕಿಯಾಗಲು ಆಕೆ ಪಡೆದ ಸಂಭಾವನೆ ಬರೋಬ್ಬರಿ ಎರಡು ಕೋಟಿ ರೂಪಾಯಿಗಳು. 

Share this Story:

Follow Webdunia kannada