Select Your Language

Notifications

webdunia
webdunia
webdunia
webdunia

ಜೀನತ್ ಅಮಾನ್ ಮದುವೆಗೆ ಸಿದ್ಧತೆ.. ಸಂಗಾತಿಯ ಹುಡುಕಾಟದಲ್ಲಿ 63ರ ಚೆಲುವೆ

ಜೀನತ್ ಅಮಾನ್ ಮದುವೆಗೆ ಸಿದ್ಧತೆ.. ಸಂಗಾತಿಯ ಹುಡುಕಾಟದಲ್ಲಿ 63ರ ಚೆಲುವೆ
ಮುಂಬೈ , ಗುರುವಾರ, 20 ನವೆಂಬರ್ 2014 (11:05 IST)
ಒಂದು ಕಾಲದಲ್ಲಿ ಸತ್ಯಂ ಶಿವಂ ಸುಂದರಂ ಎಂದು ಹಾಡುತ್ತಾ, ದಮ್ ಮಾರೋ ದಮ್ ಎಂದು ಕುಣಿಯುತ್ತ ಭಾರತೀಯ ಪ್ರೇಕ್ಷಕರ ಹೃದಯ ಬಿಸಿ ಬಿಸಿ ಮಾಡಿದ ಮಾದಕ ಚೆಲುವೆ ಜೀನತ್ ಅಮಾನ್. ತನ್ನ ರಾಶಿ ರಾಶಿ ಸೌಂದರ್ಯ ತೆರೆಯ ಮೇಲೆ ಹರಡಿದ್ದ ಈ ಚೆಲುವೆಗೆ ಈಗ 63ರ ಹರೆಯ. ಈಗಾಗಲೇ ಎರಡು ಮದುವೆ ಆಗಿದೆ. ಇಬ್ಬರೂ ಬದುಕಿಲ್ಲ. ಎರಡು ಗಂಡು ಮಕ್ಕಳ ತಾಯಿ ಆಗಿರುವ ಈ ಮಾದಕ ಹೆಣ್ಣು ಮರುಮದುವೆ ಆಗಲು ಸಿದ್ಧತೆ ನಡೆಸಿದ್ದಾರೆ. 
 
ಇಷ್ಟು ದಿನಗಳ ಕಾಲ ತಾನು ಒಬ್ಬಳೇ ತನ್ನ ಎರಡು ಗಂಡು ಮಕ್ಕಳನ್ನು ಸಾಕಿ ಸಲುಹಿ ಕಾಲ  ಕಳೆದಿದ್ದೇನೆ. ಅಜಾನ್ ಮತ್ತು ಜಹೋನ್ ಈಗ ಬೆಳೆದಿದ್ದಾರೆ. ಅವರ ಹೊಣೆ ಅವರೇ ಹೊರುವಷ್ಟು ಸಾಮರ್ಥ್ಯ ಪಡೆದಿದ್ದಾರೆ. ಇನ್ನು ತಾನು ತನ್ನಸ್ವಂತ ಬದುಕಿನ ಕಡೆಗೆ ಆದ್ಯತೆ ನೀಡುವುದಕ್ಕೆ ಗಮನ ಕೊಡುವುದಾಗಿ ಹೇಳಿದ್ದಾರೆ. 1970 ರ ಸಮಯದಲ್ಲಿ ದಿನದ 24  ಗಂಟೆಗಳ ಕಾಲ ಅವರು ಕೆಲಸ ಮಾಡುತ್ತಿದ್ದರು. 
 
ಆಗ ಆಕೆಯದ್ದೇ ಬಾಲಿವುಡ್ ನಲ್ಲಿ ರಾಜ್ಯಬಾರ. 1985ರಲ್ಲಿ ಮಜರ್ ಖಾನ್ ಅವರ ಜೊತೆ ಮದುವೆ ಆದ ಬಳಿಕ ಕೆರಿಯರ್ ನಲ್ಲಿ ಏರುಪೇರಾಯಿತು. ಮದುವೆ ಆದ ಬಳಿಕ ತಾನು ಪತಿ ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಿದ್ದನ್ನು ನೆನಪಿಸಿ ಕೊಂಡಿದ್ದಾರೆ. ಈಗ ಮಜರ್ ಜೀವಂತವಿಲ್ಲ. ಒಂಟಿಯಾಗಿ ಬದುಕುವುದಕ್ಕಿಂತ ಆಶ್ರಯ ಹುಡುಕುವುದು ಎಲ್ಲ ರೀತಿಯಿಂದಲೂ ಒಳಿತು.. ಆಕೆಯ ಬದುಕಿಗೆ ಆಸರೆ ಸಿಗಲಿ. 
 

Share this Story:

Follow Webdunia kannada