Select Your Language

Notifications

webdunia
webdunia
webdunia
webdunia

ಮಹೇಶ್ ಬಾಬು ಜೊತೆ ಸೋನಾಕ್ಷಿ ಸಿನ್ಹ ಡೇಟಿಂಗ್ ?

ಮಹೇಶ್ ಬಾಬು ಜೊತೆ ಸೋನಾಕ್ಷಿ ಸಿನ್ಹ ಡೇಟಿಂಗ್ ?
ಮುಂಬೈ , ಮಂಗಳವಾರ, 18 ನವೆಂಬರ್ 2014 (11:26 IST)
ಟಾಲಿವುಡ್ ಮಂದಿ ಬೆರಗಾಗಿ ಸೋನಾಕ್ಷಿ ಕಡೆ ನೋಡುತ್ತಿದ್ದಾರೆ.  ಆಕೆಯತ್ತ ನೋಡಲು   ಕಾರಣವೇನು  ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುವುದು ಸಹಜ. ಅದಕ್ಕೆ ಇಲ್ಲಿ ವಿವರವಿದೆ..  ಓದಿ ಎಂಜಾಯ್  ಮಾಡಿರಿ! ಕಾಲಿವುಡ್ ಚಿತ್ರರಂಗದ ಟಾಪ್ ಹೀರೋಗಳಲ್ಲಿ ಮಹೇಶ್ ಬಾಬು ಸಹಿತ ಒಬ್ಬರು ಎನ್ನುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರರಂಗದಲ್ಲಿ ಅವರ ಬಗ್ಗೆ ಟಾಪ್ ಹೀರೋಯಿನ್ ಗಳು ಸಹಿತ ಯಾವ ರೀತಿಯ ಕಮೆಂಟ್ ಮಾಡಲ್ಲ.

ಅದಕ್ಕೆ ಕಾರಣ ಒಂದು ಬಾರಿ ಅವರ ಜೀವನದಲ್ಲಿ ಅವರ ಜೊತೆ ಅಭಿನಯಿಸಲು ಅವಕಾಶ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಆದರೆ ಬಾಲಿವುಡ್  ಹೀರೋಯಿನ್ ಸೋನಾಕ್ಷಿ ಸಿನ್ಹ  ಏಕಾಏಕಿ ಮಹೇಶ್ ಬಾಬು ಅವರನ್ನು ಡೇಟಿಂಗ್ ಗೆ ಕರೆದಿದ್ದಾಳೆ. ಆಕೆ ಬಾಲಿವುಡ್ ಚಿತ್ರರಂಗದ ಹಾಟ್ ಫೇವರೆಟ್. ಆಕೆ ನಟಿಸಿದ ಚಿತ್ರಗಳು ನೂರು ಕೋಟಿ ಕ್ಲಬ್ ಮುಟ್ಟಿದೆ. ಈಗಾಕೆ ತನ್ನ ಸ್ಟಾರ್ ಡಂ ದಕ್ಷಿಣದಲ್ಲೂ   ಹರಡುವತ್ತ ಆದ್ಯತೆ ನೀಡಿದ್ದಾಳೆ.

ಆಕೆ ನಟಿಸಿರುವ ಲಿಂಗಾ ಚಿತ್ರ ಡಿಸೆಂಬರ್ 12  ರಂದು ಬಿಡುಗಡೆ ಆಗಲಿದೆ. ಈಗ ತಾನು ತೆಲುಗು-ತಮಿಳು ಚಿತ್ರಗಳಲ್ಲಿ ಸಹಿತ  ನಟಿಸುವುದಕ್ಕೆ ಸಮಯ ಹೊಂದಿಸಿಕೊಳ್ಳಲು ಸಿದ್ಧವಾಗಿರುವುದಾಗಿ ಸಂದರ್ಶನ ಒಂದರಲ್ಲಿ ಹೇಳುತ್ತಾ, ತಾನು ಅಲ್ಲಿನ ಟಾಪ್   ಹೀರೋಗಳ ಜೊತೆ  ನಟಿಸುವ  ಆಶಯ  ವ್ಯಕ್ತ ಪಡಿಸಿದ್ದಾಳೆ.

ಆಗ ಸಂದರ್ಶನದ  ನಡುವೆ  ನೀವು ಯಾರ ಜೊತೆ ಡೇಟಿಂಗ್ ಗೆ ಹೋಗಲು ಇಷ್ಟ ಪಡುತ್ತೀರಿ ಎನ್ನುವ ಪ್ರಶ್ನೆಗೆ ಆಕೆ ತಾನು ಮಹೇಶ್ ಬಾಬು ಅವರ ಜೊತೆ ಡೇಟಿಂಗ್ ಗೆ ಹೋಗಲು ಇಷ್ಟ ಪಡುವುದಾಗಿ ಹೇಳಿ ಎಲ್ಲರ ಗಮನ ತನ್ನ ಕಡೆ ತಿರುಗುವಂತೆ ಮಾಡಿದ್ದಾಳೆ. ಅಲೆಲೆ ಸೋನಾಕ್ಷಿ !
 

Share this Story:

Follow Webdunia kannada