Select Your Language

Notifications

webdunia
webdunia
webdunia
webdunia

ರಜನಿ ಕಾಂತ್ ಜೊತೆ ಅಮೀರ್ ಖಾನ್ ರೋಬೋಟ್ 2 ನಲ್ಲಿ ನಟಿಸ್ತಾರಂತೆ

ರಜನಿ ಕಾಂತ್ ಜೊತೆ ಅಮೀರ್ ಖಾನ್ ರೋಬೋಟ್ 2  ನಲ್ಲಿ ನಟಿಸ್ತಾರಂತೆ
ಮುಂಬೈ , ಸೋಮವಾರ, 17 ನವೆಂಬರ್ 2014 (11:49 IST)
ಸೂಪರ್ ಸ್ಟಾರ್ ರಜನಿಕಾಂತ್  ಯಶಸ್ವಿ ಚಿತ್ರಗಳಲ್ಲಿ ರೋಬೋಟ್  ಸಹ ಒಂದಾಗಿದೆ. ಐಶ್ವರ್ಯ ರೈ ಮತ್ತು ರಜನಿ ಅವರು ಒಟ್ಟಾಗಿ ನಟಿಸಿದ್ದ ರೋಬೋಟ್  ಈಗ ಮುಂದಿನ ಭಾಗದಲ್ಲಿ ಸಿದ್ಧ ಆಗುವುದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ಈ ಚಿತ್ರದಲ್ಲಿ ತಾನು ನಟಿಸಲ್ಲ ಎಂದು ರಜನಿ ಕಾಂತ್ ಅವರು ಹೇಳಿದ್ದರು, ಅವರ ಬದಲಿಗೆ ತಮಿಳು ನಟ ವಿಜಯ್ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು.

ಆದರೆ ಈಗ ಕೇಳಿ ಬಂದಿರುವ ಸುದ್ದಿ ಪ್ರಕಾರ ರಜನಿಕಾಂತ್  ಆ ಚಿತ್ರದ ಮುಂದುವರೆದ ಭಾಗದಲ್ಲಿ ನಟಿಸುತ್ತಿದ್ದಾರೆ. ಅವರ ಜೊತೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಮೀರ್ ಖಾನ್ ಸಹ ನಟಿಸುತ್ತಿದ್ದಾರೆ. ಆದರೆ ಈ ಬಗ್ಗೆ  ಶಂಕರ್  ಅವರು ಆಮೀರ್  ಅವರ ಬಳಿ ಮಾತನಾಡಿದ್ದು, ಈ ಚಿತ್ರದಲ್ಲಿ ನಟಿಸಲು ಆಮೀರ್  ಸಿದ್ಧ ಆಗಿರುವ ಬಗ್ಗೆ ಸುದ್ದಿ ಹರಡಿದೆ. ಆದರೆ  ಪ್ರಸ್ತುತ ಎಂತಹ  ನಿರ್ಧಾರಕ್ಕೆ ಆಮೀರ್  ಬಂದಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿದೆ.

 
ಮೊದಲ ರೋಬೋಟ್  ಸಾಕಷ್ಟು ಹೆಸರುವಾಸಿಯಾಗಿದ್ದು, ಈಗಲೂ ರಜನಿ ಅವರ ಬಗ್ಗೆ ಅನೇಕ ಜೋಕ್ ಗಳು ಹರಿದಾಡುತ್ತಲೇ ಇವೆ. ಆ  ಜನಪ್ರಿಯತೆಯ ಅಡಿಯಲ್ಲಿ ಈಗ ಮತ್ತೊಬ್ಬ ರೋಬೋಟ್ ಸಿದ್ಧ ಆಗುತ್ತಿದ್ದಾನೆ! 

 
ಒಟ್ಟಾರೆ ಮೊದಲ ರೋಬೋಟ್ ರಜನಿಕಾಂತ್  ಜೊತೆಯಲ್ಲಿ ನಟಿಸಿದ್ದ ಐಶ್ ಈಗ ರಜನಿ ಹಾಗೂ ಆಮೀರ್ ಜೊತೆ ಒಟ್ಟಾಗಿ ನಟಿಸುವುದಕ್ಕೆ ಗಮನ ನೀಡಿದ್ದಾರೆ.  ಈ ಮೂರು ತಾರೆಯರ ಸಂಗಮದಿಂದ ಬಾಕ್ಸಾಫೀಸ್ ಚಿಂದಿಯಾಗುವುದು ನಿಶ್ಚಿತ ಎನ್ನುವ ಮಾತುಗಳು ಕಾಲಿವುಡ್ ನಲ್ಲಿ ಕೇಳಿ ಬರುತ್ತಿವೆ.. ಆದರೆ ಎಲ್ಲಕ್ಕೂ ಸಮಯ ಉತ್ತರ ಹೇಳುತ್ತದೆ. 
 
 

Share this Story:

Follow Webdunia kannada