Select Your Language

Notifications

webdunia
webdunia
webdunia
webdunia

ದೀಪಿಕ ಪಡುಕೋಣೆ ನೂರು ಕೋಟಿ ಕ್ಲಬ್‌ನ ಸೂಪರ್ ರಾಣಿ

ದೀಪಿಕ ಪಡುಕೋಣೆ ನೂರು ಕೋಟಿ ಕ್ಲಬ್‌ನ ಸೂಪರ್  ರಾಣಿ
ಮುಂಬೈ , ಶನಿವಾರ, 1 ನವೆಂಬರ್ 2014 (12:11 IST)
ಬಾಲಿವುಡ್ ನಲ್ಲಿ ಈಗ ಮತ್ತೆ ದೀಪಿಕಾ ಪಡುಕೋಣೆಯದ್ದೇ  ಕಾಲ. ಆಕೆಯು ಕಳೆದ ವರ್ಷ ನಟಿಸಿದ್ದ ಮತ್ತು ಈ ವರ್ಷ ಬಿಡುಗಡೆ ಆದ ಚಿತ್ರ ಕೊಚ್ಚಾಡಿಯನ್ ಚಿತ್ರ ಮಕಾಡೆ ಮಲಗಿದ ಬಳಿಕ ಸಣ್ಣ ಪ್ರಮಾಣದಲ್ಲಿ ಬೇಸರ ಉಂಟಾಗಿತ್ತು ಆ ಚೆಲುವೆಗೆ . ಆದರ ಆ ಬಳಿಕ ಬಂದ ಫೈಂಡಿಂಗ್ ಫ್ಯಾನಿ ಚಿತ್ರವೂ ಯಶಸ್ವಿ, ಅದಕ್ಕಿಂತಲೂ ಆಕೆಯ ಅಭಿನಯದ ಇತ್ತೀಚಿನ ಚಿತ್ರ ಹ್ಯಾಪಿ ನ್ಯೂ ಇಯರ್ ಗೆಲುವು ದೀಪಿಕಾ ಪಡುಕೋಣೆಯ ಸ್ಥಾನವನ್ನು ಬದಲಾಯಿಸಿದೆ ಬಾಲಿವುಡ್ ನಲ್ಲಿ. ಆಕೆಯ ಅದೃಷ್ಟ ಸೂಪರ್ ಆಗಿರುವುದರಿಂದ  ನೂರು ಕೋಟಿ ಕ್ಲಬ್ ಬಾಗಿಲು ಆರಾಮವಾಗಿ ತೆರೆದಿದೆ ಬಾಲಿವುಡ್ ಬಾಕ್ಸಾಫೀಸಲ್ಲಿ.  
 
ನೂರು ಕೋಟಿ  ಕ್ಲಬ್ ಗೆ  ಸೇರಿದ  ಅತ್ಯಧಿಕ ಚಿತ್ರಗಳು ದೀಪಿಕ ನಟನೆಯದ್ದೆ ಆಗಿದೆ. ಕಾಕ್ ಟೈಲ್ ಚಿತ್ರದಲ್ಲಿ ದೀಪಿಕ ಮತ್ತು ಸೈಫ್ ಅಲಿ ಖಾನ್ ಅವರ ನಟನೆಯು ಮೊಟ್ಟ ಮೊದಲ ಬಾರಿಗೆ ದೀಪಿ ಚಿತ್ರವನ್ನು ನೂರು ಕೋಟಿ ಕ್ಲಬ್ ಗೆ ಸೇರುವಂತೆ ಮಾಡಿತ್ತು. ಅವರಿಬ್ಬರ ಕೆಮಿಸ್ಟ್ರಿ ಆ ಚಿತ್ರದಲ್ಲಿ ಅಷ್ಟೊಂದು ಮನ ಸೆಳೆದಿತ್ತು ಪ್ರೇಕ್ಷಕರಿಗೆ. ಆ ಬಳಿಕ ಸೈಫ್ ಜೊತೆ ನಟಿಸಿದ ರೇಸ್ 2 ಚಿತ್ರ ಕೇವಲ ಹದಿನಾಲ್ಕು ದಿನಗಳಲ್ಲಿ 100  ಕೋಟಿ ಕ್ಲಬ್ ಸೇರುವಂತೆ ಮಾಡಿತ್ತು.
 
ಬಾಲಿವುಡ್ ನಲ್ಲಿ ಆಕೆಯ ಸ್ಥಾನ ಬದಲಾಯಿಸಿದ್ದು 2013 ರ ಸಮಯದಲ್ಲಿ. ಆಗ ದೀಪಿ ರಣಬೀರ್ ಕಪೂರ್  ಅವರ ಜೊತೆ ನಟಿಸಿದ್ದ ಏ ಜವಾನಿ ಹೈ ದಿವಾನಿ,  ಶಾರುಖ್ ಖಾನ್ ಜೊತೆ ಚೆನ್ನೈ ಎಕ್ಸ್ ಪ್ರೆಸ್, ರಣವೀರ್ ಸಿಂಗ್ ಅವರೊಂದಿಗೆ ಅಭಿನಯಿಸಿದ್ದ ಗಲಿಯೊಂಕಿ ರಾಸ್ ಲೀಲ ರಾಮ್ ಲೀಲ ಚಿತ್ರವೂ ನೂರು ಕೋಟಿ ಕ್ಲಬ್ ನ್ನು ಓಡಿ ಮುಟ್ಟಿತ್ತು.. ಅಲ್ಲದೆ ಹೊಸ ಹೊಸ ಇತಿಹಾಸಗಳನ್ನು ಸೃಷ್ಟಿ ಮಾಡಿತ್ತು ಆ ಚಿತ್ರಗಳು. 
 
ಕೇವಲ ಕಲೆಕ್ಷನ್ ಮಾತ್ರವಲ್ಲ ಆಕೆಯ ಆಯ್ಕೆಯು ಸಹಿತ ಗೆಲುವನ್ನು ತಂದಿದೆ. ಇತ್ತೀಚಿಗೆ ಬಿಡುಗಡೆಯಾದ ಹ್ಯಾಪಿ ನ್ಯೂ ಇಯರ್ ಕೇವಲ ಮೂರು ದಿನಗಳಲ್ಲಿ ನೂರು ಕೋಟಿ ಮೊತ್ತವನ್ನು ಮುಟ್ಟಿದೆ ಅಷ್ಟೇ ಅಲ್ಲದೆ, ಇತ್ತೀಚಿನ ಬಾಕ್ಸಾಫೀಸ್ ಲೆಕ್ಕದ ಪ್ರಕಾರ ವಿಶ್ವವಿಡಿ ಇದು 230 ಕೋಟಿ ಗಳಿಕೆ ಮಾಡಿದೆ.ಒಟ್ಟಾರೆ ಕರಾವಳಿ ಸುಂದರಿಯ ಈ ಗೆಲುವು ನಿರಂತರವಾಗಿರಲಿ ಎಂದು ಹಾರೈಸೋಣ.

Share this Story:

Follow Webdunia kannada