Webdunia - Bharat's app for daily news and videos

Install App

ಹಾಲಿವುಡ್ ನಟಿ ಜೊತೆ ಎರಡೆರಡು ಬಾರಿ ಡೇಟಿಂಗ್ ಮಾಡಿದ ಹೃತಿಕ್ ರೋಶನ್..

Webdunia
ಶನಿವಾರ, 1 ನವೆಂಬರ್ 2014 (12:03 IST)
ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಡೇಟಿಂಗ್ ಮಾಡುವುದು ವಿಶೇಷ ಸಂಗತಿಯಲ್ಲ. ಅದನ್ನು ಕೆಲವರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ,  ಒಂದಷ್ಟು ಜನ ಮಾಧ್ಯಮಗಳ  ಬಳಿ ಯಾಮಾರಿಸಲು ಪ್ರಯತ್ನ ಪಡುತ್ತಾರೆ. ಇನ್ನು ಒಂದಷ್ಟು ಮಂದಿ ತಾವು ಡೇಟಿಂಗ್ ಮಾಡಿರುವುದನ್ನು ಜಗತ್ತಿನ ಮುಂದೆ ಅದೂ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ಬಿಡುತ್ತಾರೆ. ಅದೇ ರೀತಿ ಆಗಿದೆ ಹೃತಿಕ್ ರೋಶನ್ ಬಗ್ಗೆ.

ಪ್ರಸ್ತುತ ವಿಚ್ಛೇದನದ ಬಿಸಿಯಲ್ಲಿ ಇರುವ ಈ ಗೆಲುವಿನ ಕುದುರೆ ಇತ್ತೀಚಿಗೆ ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಜೊತೆ ಡೇಟಿಂಗ್ ಹೋಗಿದ್ದಾರೆ ದುಬೈ ನಲ್ಲಿ. ಆಕೆಯ ಜೊತೆ ಕೇವಲ ಒಂದು ದಿನ ಮಾತ್ರವಲ್ಲ ಮತ್ತೊಂದು ದಿನವೂ ಸಹ ಡೇಟಿಂಗ್ ಮಾಡಿದ್ದಾರೆ. ಈ ಸಂಗತಿಯು ಈಗ ಬಾಲಿವುಡ್ ನಲ್ಲಿ ಹೆಚ್ಚು ಚರ್ಚೆಯ ಸಂಗತಿಯಾಗಿದೆ. ತನಗೆ ಬಾಲಿವುಡ್ ಚಿತ್ರದಲ್ಲಿ ನಟಿಸ ಬೇಕು ಎನ್ನುವ ಆಸೆ ಇದೆ ಎಂದು ಪ್ಯಾರಿಸ್ ಹಿಲ್ಟನ್ ಹೇಳಿದ್ದಾಳೆ.

ಮೊದಲ ಬಾರಿ ಆಕೆಯೊಂದಿಗೆ ಡೇಟಿಂಗ್ ಮಾಡಿದ ಹೃತಿಕ್ ರಾತ್ರಿ ಇಡಿ ಒಟ್ಟಿಗಿದ್ದರಂತೆ. ಆದರೆ ಅದು ಕೇವಲ ಸಾಮಾನ್ಯ  ಭೇಟಿ ಎಂದು ತಿಪ್ಪೆ ಸಾರಿಸಿದರೂ ಸಹಿತ ಅದನ್ನು ಒಪ್ಪಲು ಬಾಲಿವುಡ್ ಮಂದಿ ಬುದ್ದುಗಳಲ್ಲ. ಅಷ್ಟೇ ಅಲ್ಲದೆ  ಗ್ರೀಕ್ ಶಿಲ್ಪ ಹೃತಿಕ್ ರೋಶನ್ ಮಾದಕ ಚೆಲುವೆಯೊಂದಿಗೆ ಮತ್ತೊಮ್ಮೆ ಡೇಟಿಂಗ್ ಮಾಡಿರುವುದು ಇವರ ಬಾಂಧವ್ಯ ಎಷ್ಟು ಬೆಳೆದಿದೆ ಎನ್ನುವುದನ್ನು ಸ್ಪಷ್ಟ ಪಡಿಸುತ್ತಿದೆ.

ಏನೇ ಇರಲಿ ಸಿನಿತಾರೆಯರ  ಸಿನಿಮಾಗಳಂತೆ ಅವರ ಬದುಕು ವರ್ಣರಂಜಿತವಾಗಿರುತ್ತದೆ ಅನ್ನುವ ಮಾತು ಇಂತಹ ಪ್ರಕರಣಗಳಿಂದ ಸಾಬೀತಾಗುತ್ತದೆ. ಅಷ್ಟೇ ಅಲ್ಲದೆ ಹಿಲ್ಟನ್ ಆಸೆ ಸಧ್ಯದಲ್ಲಿ ನೆರವೇರುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಅನೇಕ ಹಾಲಿವುಡ್ ನಟಿಯರು ಹೃತಿಕ್ ಜೊತೆ ನಟಿಸಿದ್ದಾರೆ..ಅಂತಹುದರಲ್ಲಿ ತನ್ನ ಮನ ಗೆದ್ದ ಭಾಮೆ ಜೊತೆ ಇವರು ನಟಿಸದೆ ಇರುತ್ತಾಳೆಯೇ? ..  
.....

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?