Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬದ ಸಡಗರದಲ್ಲಿ ಅಮಿತಾಬ್ ಬಚ್ಚನ್..ಆಮೀರ್ ಖಾನ್ .. ಎಕೋ ಫ್ರೆಂಡ್ಲಿ ಉತ್ಪನ್ನ ಗಳಿಗೆ ಬಿಗ್ ಬಿ ಆದ್ಯತೆ

ದೀಪಾವಳಿ ಹಬ್ಬದ ಸಡಗರದಲ್ಲಿ ಅಮಿತಾಬ್ ಬಚ್ಚನ್..ಆಮೀರ್ ಖಾನ್ .. ಎಕೋ ಫ್ರೆಂಡ್ಲಿ  ಉತ್ಪನ್ನ ಗಳಿಗೆ ಬಿಗ್ ಬಿ ಆದ್ಯತೆ
ಮುಂಬೈ , ಶುಕ್ರವಾರ, 24 ಅಕ್ಟೋಬರ್ 2014 (12:23 IST)
ದೀಪಾವಳಿ ಅಂದ್ರೆ ಎಲ್ಲರಿಗೂ ಸಂಭ್ರಮದ ಹಬ್ಬ. ಈ ಬೆಳಕಿನ ಹಬ್ಬದ ಆಚರಣೆಯಲ್ಲಿ ಬಾಲಿವುಡ್ ಮಂದಿ ಹಿಂದೆ ಉಳಿದಿಲ್ಲ. ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ ಈ ಹಬ್ಬ. ಇದರ ಆಚರಣೆಗೆಂದು ಸಿದ್ಧ ನಡೆಸಿದ್ದು ಅಮಿತಾಬ್ ಪತ್ನಿ ಜಯ ಬಚ್ಚನ್. ಇದ ಸಂಪೂರ್ಣ ಹೊಣೆಗಾರಿಕೆಯನ್ನು ಜಯ ಅವರೇ ಹೊತ್ತಿದ್ದು, ಪ್ರತಿಯೊಂದು ಅಂಶಗಳಿಗೂ ಆದ್ಯತೆ ನೀಡಿದ್ದಾರಂತೆ.

ಅಲ್ಲದೆ ಈ ಬಾರಿ ಎಕೋ ಫ್ರೆಂಡ್ಲಿ ಉತ್ಪನ್ನಗಳ ಬಳಕೆ ಮಾಡ ಬೇಕು ಎನ್ನುವ ನಿರ್ಧಾರಕ್ಕೆ ಈ ಕುಟುಂಬ ಬದ್ಧವಾಗಿದೆಯಂತೆ. ಸಂಪ್ರದಾಯಬದ್ಧವಾಗಿ ನಡೆಯುವ ಈ ಹಬ್ಬದಲ್ಲಿ ಭಾಗವಹಿಸಲು ಬರುವ ಅತಿಥಿಗಳಲ್ಲಿ ಅನಿಲ್ ಕಪೂರ್, ಕಂಗನಾ ರನೌಟ್, ಶಾರುಖ್ ಖಾನ್ , ದೀಪಿಕ ಪಡುಕೋಣೆ ಜೋಯ ಅಖ್ತರ್ , ಜಾವೇದ್ ಅಖ್ತರ್ ಮುಂತಾದವರು.
 
ಅದೇ ರೀತಿ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಸಹ ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ಬಿಗ್ ಶಾಪ್ ಪಾರ್ಟಿಯನ್ನು ಸಿದ್ಧ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಪ್ರಿಯಾಂಕ ಚೋಪ್ರ, ರಣವೀರ್ ಸಿಂಗ್, ಕರಣ್ ಜೋಹರ್ ಮುಂತಾದವರು ಆಹ್ವಾನಿತರಾಗಿದ್ದಾರೆ. 

Share this Story:

Follow Webdunia kannada