Webdunia - Bharat's app for daily news and videos

Install App

ತಂಗಿಯ ಚಿತ್ರಕ್ಕೆ ಅಕ್ಕನ ಹಾಡು..ಇದು ಶಮಿತಾಬ್ ವಿಶೇಷತೆ

Webdunia
ಗುರುವಾರ, 23 ಅಕ್ಟೋಬರ್ 2014 (12:47 IST)
ತಂಗಿಗಾಗಿ ಆ ಚಿತ್ರದಲ್ಲಿ ಹಾಡಿದ್ದಾಳೆ ನಟಿ ಶ್ರುತಿ ಹಾಸನ್. ಆ ಚಿತ್ರದ ಹೆಸರು ಶಮಿತಾಬ್. ಯುವನಟ ಧನುಷ್ ನಟಿಸುತ್ತಿರುವ ಎರಡನೇ ಹಿಂದಿ ಚಿತ್ರ ಇದಾಗಿದೆ.  ಈ ಚಿತ್ರ ಹಲವು ಬಗೆ ವಿಶೇಷತೆಗಳನ್ನು ಹೊಂದಿದೆ. 
 
 
ಇದರಲ್ಲಿ  ಸೂಪರ್ ಸ್ಟಾರ್  ಕಮಲ್ ಹಾಸನ್ ಅವರ ಎರಡನೇ ಮಗಳು ಅಕ್ಷರ ಹಾಸನ್ ನಟಿಸುತ್ತಿದ್ದಾಳೆ. ಈ ಚಿತ್ರದ ಮೂಲಕ ಆಕೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಇದರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಟಿಸುತ್ತಿದ್ದಾರೆ. ಅಲ್ಲದೆ ಇದರಲ್ಲಿ ಪ್ರಸಿದ್ಧ ನಟಿ ರೇಖಾ ಸಹ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಹೀಗೆ ಅನೇಕ ಪ್ರತ್ಯೇಕತೆಗಳಿಂದ ಕೂಡಿರುವ ಈ ಚಿತ್ರದಲ್ಲಿ ತಂಗಿ ಅಕ್ಷರ ಗೆಂದು ಅಕ್ಕ ಶ್ರುತಿ ಒಂದು ಹಾಡನ್ನು ಹಾಡಿದ್ದಾಳೆ. ಮತ್ತೊಂದು ವಿಶೇಷ ಎಂದರೆ ಈ ಚಿತ್ರಕ್ಕೆ  ಪ್ರಸಿದ್ಧ ನಿರ್ದೇಶಕ ಇಳಯರಾಜ ಸಂಗೀತ ನೀಡಿದ್ದಾರೆ.  
 
ಸಂಗೀತದಲ್ಲಿ ಸಾಧನೆ   ಮಾಡಿರುವ ಶ್ರುತಿ ಈಗ ಒಂದು ಹಿಂದಿ ಮತ್ತು ಒಂದು ತಮಿಳು ಚಿತ್ರದಲ್ಲಿ ಹಾಡುತ್ತಿದ್ದಾಳೆ. ನಟಿಯಾಗಿ ಬ್ಯುಸಿಯಾಗಿರುವ ಈಕೆಗೆ ಸಂಗೀತದ ಮೇಲಿರುವ ಪ್ರೀತಿಯಿಂದ ಸಮಯ ಸಿಕ್ಕಾಗ ಸಿನಿಮಾಗಳಲ್ಲಿ ಸಹ ಹಾಡುವುದಕ್ಕೆ ಆದ್ಯತೆ ನೀಡುತ್ತಿರುತ್ತಾಳೆ. ಒಳ್ಳೆಯ ಹಾಡು ಎಂದು ಅನ್ನಿಸಿದರೆ ಖಂಡಿತ ಹಾಡ್ತೀನಿ ಎನ್ನುತ್ತಾಳೆ ಈ ಚೆಲುವೆ. ಶಮಿತಾಬ್ ಚಿತ್ರ ಮುಂಬರುವ  ಫೆಬ್ರವರಿಯಲ್ಲಿ ಬಿಡುಗಡೆ ಆಗಲು ಸಿದ್ಧತೆ ನಡೆಸಲಾಗಿದೆ ಎನ್ನುವ ಸುದ್ದಿ ಇದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments