Webdunia - Bharat's app for daily news and videos

Install App

ವಿವಾದದ ಸುಳಿಯಲ್ಲಿ ಸೂರ್ಯ ನಟನೆ ಮಾಸ್ ಚಿತ್ರದ ಪೋಸ್ಟರ್ ?

Webdunia
ಗುರುವಾರ, 23 ಅಕ್ಟೋಬರ್ 2014 (10:51 IST)
ತನ್ನ ತಾರ ಬದುಕಲ್ಲಿ ಪ್ರಯೋಗಗಳಿಗೆ ಆದ್ಯತೆ ನೀಡುವ ನಟ ಕಾಲಿವುಡ್ ಸೂರ್ಯ. ಅವರ ನಟನೆಯ ಮಾಸ್ ಚಿತ್ರದ ಪೋಸ್ಟರ್ ದೀಪಾವಳಿಯ ಕಾಣಿಕೆಯಾಗಿ ಅವರ ಅಭಿಮಾನಿಗಳ ಮುಂದೆ ಮಂಗಳವಾರ ಮಧ್ಯರಾತ್ರಿ ಬಿಡುಗಡೆ ಮಾಡಿದ್ದಾರೆ ಸೂರ್ಯ. ಹಾರರ್ ಕಾಮಿಡಿ ಚಿತ್ರವಾಗಿರುವ ಮಾಸ್ ಚಿತ್ರದಲ್ಲಿನ ಪೋಸ್ಟರ್ ನಲ್ಲಿ ಸೂರ್ಯ ಕಪ್ಪು ಹಾಗೂ ಬೂದು ಬಣ್ಣಗಳ ಮಿಶ್ರಣದ ಮುಖದಲ್ಲಿದ್ದಾರೆ . ಇದರಲ್ಲಿ ಸೂರ್ಯ ಭಿನ್ನವಾಗಿ ಕಾಣುತ್ತಿದ್ದಾರೆ. 
 
ಈ ಚಿತ್ರವನ್ನು ಬಹುಮುಖ ಪ್ರತಿಭೆ ವೆಂಕಟ್ ನಿರ್ದೇಶಿಸುತ್ತಾ ಇದ್ದಾರೆ. ಆದರೆ ಈ ಪೋಸ್ಟರ್ ಕಂಡಾಗ ಇದು ಇಂಗ್ಲೀಷ್ ಸಿನಿಮಾ ಪೋಸ್ಟರ್ ನಿಂದ ಕಾಪಿ ಮಾಡಲಾಗಿದೆ ಎನ್ನುವ ಗುಸುಗುಸು ಹರಡಿದೆ. ದ ಬೊರ್ನ್ ಅಲ್ಟಿ  ಮೇಟಮ್ (the bourne ultimatum)ಎನ್ನುವ ಸಿನಿಮಾದ ಪೋಸ್ಟರ್ ನಂತೆ ಇದೆ ಎನ್ನುವ ಸುದ್ದಿ ಹರಡಿದೆ. ಅದರಲ್ಲೂ ಸಹಿತ ಹೀರೋ ಇದೆ ರೀತಿ  ಬಣ್ಣ ಬಳಿದುಕೊಂಡಿದ್ದಾರೆ. ಮಾಸ್ ಚಿತ್ರದ ಪೋಸ್ಟರ್ ಸೂರ್ಯ ಫೇಸ್ ಬುಕ್ ಪೇಜ್ ನಲ್ಲಿ ಬಂದ ಸ್ವಲ್ಪ ಹೊತ್ತಿನ ಬಳಿಕ ಕೆಲವರು ಇದು ಆಂಗ್ಲ ಚಿತ್ರದ ಪೋಸ್ಟರನ್ನು ಹೋಲುತ್ತದೆ ಎಂದು ಹೇಳಿದ್ದಾರೆ.

ಈ ಎರಡು ಚಿತ್ರಗಳ ಪೋಸ್ಟರ್ ಅಕ್ಕಪಕ್ಕದಲ್ಲಿ ಇಟ್ಟು ಸೇಮ್ ಟು ಸೇಮ್ ಎಂದು ಹೇಳಿದ್ದಾರೆ. ಇದೆ ರೀತಿಯ ವಿವಾದವನ್ನು ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಪೋಸ್ಟರ್ ಸಹಿತ ಎದುರಿಸಿತ್ತು. ಆದರೆ ಸೂರ್ಯ ಚಿತ್ರದ ಮಾಸ್ ಪೋಸ್ಟರ್ ಮಾತ್ರ ಖಂಡಿತವಾಗಿ ಇಂಗ್ಲೀಷ್ ಚಿತ್ರದ್ದು ಎನ್ನುವ ಸುದ್ದಿಗೆ ಬೆಲೆ ಸಿಕ್ಕಿದೆ. ಒಟ್ಟಾರೆ ಈಗ ಪೋಸ್ಟರ್ ವಿವಾದ ಕಾಲ. ಈ ಚಿತ್ರದಲ್ಲಿ ನಯನತಾರ ಮತ್ತು ಅಮಿ ಜಾಕ್ಸನ್ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments