Select Your Language

Notifications

webdunia
webdunia
webdunia
webdunia

ತೆಲುಗು ಸಿನಿಮಾದಲ್ಲಿ ಸನ್ನಿ ನಟಿಸಲು ಪಡೆದ ಸಂಭಾವನೆ ಜಸ್ಟ್ 75 ಲಕ್ಷ!

ತೆಲುಗು ಸಿನಿಮಾದಲ್ಲಿ ಸನ್ನಿ ನಟಿಸಲು ಪಡೆದ ಸಂಭಾವನೆ ಜಸ್ಟ್ 75  ಲಕ್ಷ!
ಮುಂಬೈ , ಮಂಗಳವಾರ, 21 ಅಕ್ಟೋಬರ್ 2014 (12:26 IST)
ಸನ್ನಿ ಲಿಯೋನ್  ಈಗ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರಗಳಲ್ಲೂ ಸಹಿತ ನಟಿಸುತ್ತಿದ್ದಾರೆ. ಆಕೆಯು ಆದಷ್ಟು ತನ್ನ ರಾಶಿ ರಾಶಿ ದೇಹ ಸಿರಿಯನ್ನು ತೋರಿಸಿ ಅಪಾರವಾದ ಭಾರತೀಯ ರಸಿಕ ಹೃದಯಗಳನ್ನು ದೋಚಿದ್ದಾರೆ. ಈಗ ಕನ್ನಡದಲ್ಲಿ ನಿರ್ದೇಶಕ ನಟ ಪ್ರೇಂ ಅವರ ಚಿತ್ರದಲ್ಲಿ ಬಂದು ಡ್ಯಾನ್ಸ್ ಮಾಡಿ ಹೋಗಿ ಆಗಿದೆ.  ಕರೆಂಟ್ ತೀಗ ಎನ್ನುವ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸನ್ನಿ  ಶಾಲಾ ಮೇಡಂ ಆಗಿದ್ದಾರೆ.

ಈ ಸೆಕ್ಸಿ ಮೇಡಂ ಯಾವ ರೀತಿಯ ಪಾಠ ಹೇಳಿಕೊಡಬಹುದು ಎನ್ನುವುದನ್ನು ವಿವರಿಸಬೇಕಿಲ್ಲ. ಈ ಚಿತ್ರದಲ್ಲಿ ಮಂಚು ಮನೋಜ್ ಹೀರೋ ಆಗಿದ್ದಾರೆ.  ಸೆಕ್ಸಿ ಹಾಟ್ ಟೀಚರಮ್ಮ ಒಂಟಿಯಾಗಿರಲು ನಿರ್ದೇಶಕರಿಗೆ ಮನ ಒಪ್ಪದ ಕಾರಣ ಸಂಪೂರ್ಣೇಶ್ ಬಾಬು   ಎನ್ನುವ ನಟನನ್ನು ಜೊತೆ ಮಾಡಿದ್ದಾರೆ. ನೋಡಲು ಕಡಿಮೆ ಎತ್ತರ ಹೊಂದಿರುವ ಈತ ಉದ್ದದ ಸನ್ನಿ ಜೊತೆ ರೋಮ್ಯಾನ್ಸ್ ಮಾಡುವ ಅವಕಾಶ ಪಡೆದಿದ್ದಾರೆ. 
 
ತಾನು ನಟಿಸಿದ ಒಂದೇ ಒಂದು ಚಿತ್ರದ ಮೂಲಕವೇ  ಸೆಲೆಬ್ರಿಟಿ  ಸ್ಥಾನ ಪಡೆದ ಸಂಪೂರ್ಣೇಶ್ ಈಗ ಸನ್ನಿ ಸೌಂದರ್ಯ ಹತ್ತಿರದಿಂದ ನೋಡಿ , ಆನಂದಿಸುವ ಅವಕಾಶ ಪಡೆದಿದ್ದಾರೆ. ಈ ಚಿತ್ರದ ನಟನೆಗೆ ಸನ್ನಿ ಪಡೆದ ಸಂಭಾವನೆ ಬರೋಬ್ಬರಿ 75  ಲಕ್ಷಗಳು. ಈ ಚಿತ್ರದ  ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಬಾಕ್ಸಾಫೀಸ್ ನ್ನು ಕೊಳ್ಳೆ ಹೊಡೆಯ ಬಹುದೆನ್ನುವ ನಿರೀಕ್ಷೆ ಇದೆ.
 

Share this Story:

Follow Webdunia kannada