Select Your Language

Notifications

webdunia
webdunia
webdunia
webdunia

ಟಾರ್ಜನ್ ರಾಣಿ ಆಗುತ್ತಿದ್ದಾಳೆ ಸನ್ನಿ ಲಿಯೊನೂ !

ಟಾರ್ಜನ್ ರಾಣಿ ಆಗುತ್ತಿದ್ದಾಳೆ ಸನ್ನಿ ಲಿಯೊನೂ !
ಮುಂಬೈ , ಗುರುವಾರ, 2 ಅಕ್ಟೋಬರ್ 2014 (11:11 IST)
ಮೂರು ದಶಕಗಳ ಹಿಂದೆ ಬಾಲಿವುಡ್ ನಲ್ಲಿ ತೆರೆ ಏರಿದ ಚಿತ್ರ ಅಡ್ವೆಂಚರ್ ಆಫ್ ಟಾರ್ಜನ್. ಆ ಚಿತ್ರವು ದೇಶವಿಡಿ ಹೊಸ ಲೋಕ ತೆರೆದಿತ್ತು. ಆಗ ಮೂರು ಕೋಟಿಗೂ ಅಧಿಕ ಮೊತ್ತ ಗಳಿಕೆ ಮಾಡಿತ್ತು. ಅದರಲ್ಲಿ ಹೇಮಂತ್ ಬಿರ್ಜಿ ಟಾರ್ಜನ್ ಆಗಿದ್ದರೆ, ಕಿಮಿಕಾಟ್ಕರ್ ನಾಯಕಿ ಆಗಿದ್ದರು.
 
 

ಬಪ್ಪಿಲಹರಿ ಅವರ ಸಂಗೀತ ನಿರ್ದೇಶನ ಹೊಂದಿದ್ದ ಆ ಚಿತ್ರದ ಸಂಗೀತ ಸಂಚಲನ ಉಂಟು ಮಾಡಿತ್ತು. ಈಗ ಆ ಹಳೆಯ ಕಥೆ ಏಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ  ಮೂಡುತ್ತಿರ
ಬಹುದು.ಈಗ ಮತ್ತೊಮ್ಮೆ ಆ ಚಿತ್ರವನ್ನು ರೀಮೇಡ್ ಮಾಡುತ್ತಿದ್ದಾರೆ ನಿರ್ದೇಶಕ ಸೋಹನ್ ಷಾ. 
 
ಆ ಅಡ್ವೆಂಚರ್ ಆಫ್ ... ಚಿತ್ರದ ನಾಯಕ ಯಾರು ಎನ್ನುವುದು ಇನ್ನು ನಿಕ್ಕಿ ಆಗಿಲ್ಲ, ಆದರೆ ನಾಯಕಿಯಾಗಿ ಸನ್ನಿ ಲಿಯೋನ್ ಆಯ್ಕೆ ಆಗಿದ್ದಾಳೆ. ಈಗಾಗಲೇ ಸನ್ನಿ ಜೊತೆ ಕರಾರು ಮಾಡಿಕೊಳ್ಳಲಾಗಿದೆಯಂತೆ .ಅಂದು ಕಿಮಿ ಸೌಂದರ್ಯ ಅಂದಿನ ಯುವಕರ ಮನ ಸೆಳೆದಿತ್ತು.

ಈಗ ಸನ್ನಿ ಆ ಜಾಗಕ್ಕೆ ಬಂದಿದ್ದು ಆಕೆ ಕಿಮಿಯಂತೆ ಸೆಳೆಯುತ್ತಾಳಾ ಅಥವಾ ಇನ್ನು ಹೆಚ್ಚು ಸೆಳೆತ ಉಂಟು ಮಾಡುತ್ತಾಳಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಏನೇ ಆದರು ಸಧ್ಯದಲ್ಲೇ ತನ್ನ ಕೆಲಸ ಆರಂಭ ಮಾಡುತ್ತಿರುವ ಈ ಚಿತ್ರ ಯುವ ಜನಾಂಗವನ್ನು ನಿಶ್ಚಿತವಾಗಿ ಆಕರ್ಷಿಸುತ್ತದೆ ಎನ್ನುವ ನಂಬಿಕೆ ಸೋಹನ್ ಗೆ ಇದೆ.. ಹಾಗೆ ಆಗಲಿ !

Share this Story:

Follow Webdunia kannada