Select Your Language

Notifications

webdunia
webdunia
webdunia
webdunia

ಸಿನಿಮಾಕ್ಕೆ ಬೈ ಮದುವೆ ಹಾಯ್ ಹೇಳುತ್ತಿರುವ ಇಲಿಯಾನ

ಸಿನಿಮಾಕ್ಕೆ ಬೈ ಮದುವೆ ಹಾಯ್ ಹೇಳುತ್ತಿರುವ ಇಲಿಯಾನ
ಮುಂಬೈ , ಮಂಗಳವಾರ, 30 ಸೆಪ್ಟಂಬರ್ 2014 (10:43 IST)
ಈವರೆಗೂ ಮಾಧ್ಯಮಗಳ ಮುಂದೆ  ಶಾರುಖ್ ಖಾನ್ ಜೊತೆ ಅಭಿನಯಿಸಲು ಅವಕಾಶ ಸಿಕ್ತು, ತನ್ನ ಕೆರಿಯರ್ ನಲ್ಲಿ ಸಾಕಷ್ಟು ಉತ್ತಮ ಗೆಲುವು ಸಿಕ್ತು ಅದೂ ಇದೂ ಎಂದು ಹೇಳಿದ ಸಣ್ಣ ಸೈಜಿನ ಸೊಂಟದ ಸುಂದರಿ ಇಲಿಯಾನ ಈಗ ಮದುವೆ ಆಗಿ ಈ ಚಿತ್ರರಂಗಕ್ಕೆ ಬೈ ಬೈ ಹೇಳುವ ಸಿದ್ಧತೆ ನಡೆಸಿದ್ದಾಳೆ ಎನ್ನುವ ಸಂಗತಿ ಬಾಲಿವುಡ್ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. 
 
ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆಂಡ್ರೂ ನಿಬೋನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಈ ಚೆಲುವೆ ಈಗ ಆ ಪ್ರೀತಿಯ ತಾಪದಿಂದ ಕಂಗಾಲಾಗಿ ಮದುವೆ ಆಗಲು ಸಿದ್ಧ ಆಗಿದ್ದಾಳೆ ಎಂದೇ ಹೇಳ ಬಹುದಾಗಿದೆ. ಒಟ್ಟಾರೆ ಆಂಡ್ರೂ ಜೊತೆ ಮದುವೆ ಆಗಿ ಚಿತ್ರರಂಗಕ್ಕೆ ಬೈ ಹೇಳ್ತಾ ಇದ್ದಾಳೆ.  ಹಾಗಂತ ಸುದ್ದಿ ಹರಡಿದೆ. 28  ರ ಹರೆಯದ ಇಲಿಯಾನ ತನ್ನ ಪ್ರೀತಿಯ ವಿಷಯವನ್ನು ಗುಟ್ಟಾಗಿ ಇಟ್ಟಿಲ್ಲ, ಆದರೆ ತನ್ನ ನಿಶ್ಚಿತಾರ್ಥ  ಮತ್ತು ಮದುವೆ ಬಗ್ಗೆ ಮಾಧ್ಯಮದ ಮುಂದೆ ಹೇಳಿಲ್ಲ. ಈಗ ಆಕೆ ಕೈಲಿ ಇರುವ ಸಿನಿಮಾಗಳಲ್ಲಿ ನಟಿಸಿದ ಬಳಿಕ ಮದುವೆ ಮಾಡಿಕೊಳ್ಳೋದು ಖಂಡಿತ ಎನ್ನುವುದು ಎಲ್ಲರು ಮಾತನಾಡಿಕೊಳ್ಳುತ್ತಿರುವ ಸಂಗತಿಯಾಗಿದೆ. ಬಾಲಿವುಡ್ ನ ಕೆಲವು ನಿರ್ಮಾಪಕರು ಆಕೆ ಬಳಿ ಹೋದಾಗ ತಾನು ನಟಿಸಲ್ಲ ಎಂದು ಆ ಅವಕಾಶವನ್ನು ತಿರಸ್ಕರಿಸಿದ ಸುದ್ದಿ ಬಂದಿದೆ. 

Share this Story:

Follow Webdunia kannada