Select Your Language

Notifications

webdunia
webdunia
webdunia
webdunia

ರಾಮ್ ಗೋಪಾಲ್ ವರ್ಮ ಸನ್ನಿಯ ಫ್ಯಾನ್ ಅಂತೆ..ಸಧ್ಯದಲ್ಲಿ ಇವರಿಬ್ಬರೂ ಒಂದಾಗ್ತಾರಂತೆ!

ರಾಮ್ ಗೋಪಾಲ್ ವರ್ಮ ಸನ್ನಿಯ ಫ್ಯಾನ್ ಅಂತೆ..ಸಧ್ಯದಲ್ಲಿ  ಇವರಿಬ್ಬರೂ ಒಂದಾಗ್ತಾರಂತೆ!
ಮುಂಬೈ , ಬುಧವಾರ, 24 ಸೆಪ್ಟಂಬರ್ 2014 (11:03 IST)
ರಾಮ್ ಗೋಪಾಲ್ ವರ್ಮ ದೆವ್ವ ಭೂತದ ಕತೆಗಳನ್ನು  ನಿರ್ಮಿಸುವ ನಿರ್ದೇಶಕ. ಆತನ ವಿಶೇಷತೆಯೇ ಹಾಗೆ.. ಸಾಮಾನ್ಯವಾಗಿ ವರ್ಮ ಚಿತ್ರಗಳಲ್ಲಿ ಪ್ರೇಕ್ಷಕನ ಹೃದಯದ ಬಡಿತ ಹೆಚ್ಚಿಸುವ ಅಂಶಗಳಿಗೆ ಆದ್ಯತೆ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು, ಆದರೆ ತಾನು ಆರೀತಿ ಮಾಡುವುದು ಕೇವಲ ಗ್ರಾಹಕರ ದೃಷ್ಟಿ ಕೋನದಿಂದ. ಏಕೆಂದರೆ ಯಾರು ಹೆಚ್ಚು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತಾರೋ ಅಂತಹವನ್ನು ಮಾರಾಟ ಮಾಡ್ತೀನಿ ಅಂತಾರೆ ಈ ದೆವ್ವದ ನಿರ್ದೇಶಕ. 
 
ಸಾಮಾನ್ಯವಾಗಿ ವರ್ಮ ಅವರ ಸಿನಿಮಾಗಳು ಹೆಚ್ಚಾಗಿ  ಬಾಲಿವುಡ್ ನಲ್ಲಿ ಬರುತ್ತಿದ್ದವು ಈ ಹಿಂದೆ.. ಆದರೆ ಈಗ ಅದರ ಪ್ರಮಾಣ ಕಡಿಮೆಯಾಗಿ ಟಾಲಿವುಡ್ ಪಟ್ಟಣದಲ್ಲಿ ಮಾತ್ರ  ಹೆಚ್ಚು ಚಿತ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ತಾವು ನಿರ್ಮಿಸಿದ  ಅನುಕ್ಷಣ ಎನ್ನುವ ಸಿನಿಮಾ ಇತ್ತಿಚೆಗೆ ಬಿಡುಗಡೆ ಆಯಿತು. ಅವೆಲ್ಲ ಸಾಮಾನ್ಯ ಸಂಗತಿ, ಆದರೆ ಈಗ ರಾಮ ಗೋಪಾಲ್ ವರ್ಮ  ಕರೆಂಟ್ ತೀಗ ಎನ್ನುವ ಚಿತ್ರದ ಆಡಿಯೋ ಬಿಡುಗಡೆಯ ಸಮಯದಲ್ಲಿ  ಅವರಿಗೆ ಅತ್ಯಂತ ಇಷ್ಟವಾದ ನಟಿ ಹೆಸರನ್ನು ಹೇಳಿದರು. ಆಕೆ ಬೇರೆ ಯಾರು ಅಲ್ಲ ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್. ಸನ್ನಿ ಕಂಡ್ರೆ ರಾಮ್ ಗೋಪಾಲ್ ವರ್ಮ್ ಗೆ ಸಕತ್ ಇಷ್ಟವಂತೆ. ಇತ್ತೀಚಿಗೆ ರಾಮ ಗೋಪಾಲ್ ವರ್ಮ ಒಂದು ಕಥೆ ಸಿದ್ಧ ಮಾಡಿದ್ದು, ಅದರಲ್ಲಿ ಸನ್ನಿ ಯನ್ನು ಓಕೆ ಮಾಡಿದ್ದಾರಂತೆ. 
 
ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಕಥೆಯಾಗಿದೆ ಎಂದು ಬಿ ಟೌನ್  ಮಂದಿ ಹೇಳಿದ್ದಾರೆ. ಸನ್ನಿ ಸಹಿತ ಈ ಪ್ರಾಜಕ್ಟ್‌ನಲ್ಲಿ ನಟಿಸಲು ಸಮ್ಮತಿ ನೀಡಿದ್ದಾಳಂತೆ. ಈಗ ಇದಕ್ಕೆ ಸಂಬಂಧಪಟ್ಟ ಪ್ರೊಡಕ್ಷನ್ ಕೆಲಸ ಶರವೇಗದಿಂದ ಸಾಗುತ್ತಿದ್ದು, ವರ್ಮ ಮತ್ತು ಸನ್ನಿ ಪ್ರಾಜಕ್ಟ್ ಅಕ್ಟೋಬರ್ ಅಂತ್ಯದಲ್ಲಿ ಆರಂಭಗೊಂಡು  ಡಿಸೆಂಬರ್ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಬಾಲಿವುಡ್ ಪಟ್ಟಣ ವಾಸಿಗಳು.ವರ್ಮ ಮತ್ತು ಸನ್ನಿ ಕಾಂಬಿನೇಶನ್ ಸಿನಿಮಾ 2014 ರಲ್ಲಿ ಎಂತಹ ಅದ್ಭುತ ಸೃಷ್ಟಿ ಮಾಡುತ್ತದೆಯೋ ಎನ್ನುವ ಕುತೂಹಲ ಬಾಲಿವುಡ್ ನವರಿಗಿದೆ. ಸಾಮಾನ್ಯವಾಗಿ ಹೀರೋಯಿನ್ ಗಳನ್ನು  ಹೆಚ್ಚು ಬಿಚ್ಚುಡುಗೆ ಮಾಡಿಸುವ ವರ್ಮ ಸನ್ನಿಗೆ  ಪೂರ್ತಿ ಬಟ್ಟೆ ಹಾಕಿ ಜನರ ಮುಂದೆ ತರ್ತಾರಾ? ಸದ್ಯಕ್ಕೆ ಎಲ್ಲವು ಸಸ್ಪೆನ್ಸ್ !

Share this Story:

Follow Webdunia kannada