Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್ ಮೊದಲ ಸ್ಥಾನ ಶಾರುಖ್ ಗೆ ಸಿಕ್ಕಿದೆ ಎರಡನೇ ಸ್ಥಾನ...ಎಲ್ಲಂದ್ರೆ!

ಅಮಿತಾಬ್ ಬಚ್ಚನ್ ಮೊದಲ ಸ್ಥಾನ ಶಾರುಖ್ ಗೆ ಸಿಕ್ಕಿದೆ ಎರಡನೇ ಸ್ಥಾನ...ಎಲ್ಲಂದ್ರೆ!
ಮುಂಬೈ , ಮಂಗಳವಾರ, 23 ಸೆಪ್ಟಂಬರ್ 2014 (10:21 IST)
ಬಾಲಿವುಡ್ ನಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ಅವರ ಬಗ್ಗೆ ಕ್ರೇಜ್ ಕಡಿಮೆ ಆಗದೆ ದಿನೇದಿನೇ ಹೆಚ್ಚಾಗುತ್ತಲೇ ಇವೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಲ್ಲರ ಕಣ್ಣ ಮುಂದೆ ಬಂದಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಈಗ ವೆಬ್  ಮೀಡಿಯಾದಲ್ಲಿ ಸುಮಾರು ಒಂದು ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ.. ಈಗ ಅವರನ್ನು ಸಮೀಪಿಸಿದ್ದಾರೆ ಶಾರುಖ್ ಖಾನ್. ಸೋಶಿಯಲ್ ಮೀಡಿಯಾ ಟ್ವಿಟ್ಟರ್ ನಲ್ಲಿ ಅಮಿತಾಬ್ ಅವರ ಫಾಲೋಯರ್ಸ್ ಸಂಖ್ಯೆ ಈಗ ಒಂದು ಕೋಟಿ ಇದೆ.. ಅವರ ಸಮೀಪದ ಸಂಖ್ಯೆಯಲ್ಲಿ ಇದ್ದಾರೆ ಶಾರುಖ್ ಖಾನ್. ಈಗ ಅವರು 90 ಲಕ್ಷ ಜನ ಹಿಂಬಾಲಕರನ್ನು ಪಡೆದಿದ್ದಾರೆ. 
 
ಈಗ ವೆಬ್ ಮೀಡಿಯಾ ಅತಿ ಹೆಚ್ಚು ಅನುಚರರನ್ನು ಪಡೆದ  ಪಟ್ಟಿಯಲ್ಲಿ  ಅಮಿತಾಬ್ ಬಚ್ಚನ್ ನಂತರ ಸ್ಥಾನ ಶಾರುಖ್ ಖಾನ್ ಪಡೆದಿದ್ದಾರೆ. ಆಮೀರ್ ಖಾನ್  ಅವರಿಗೆ ಮೂರನೇ ಸ್ಥಾನ, ಸಲ್ಮಾನ್ ಖಾನ್ ಗೆ ನಾಲ್ಕನೇ ಸ್ಥಾನ  ಇದೆ. ಶಾರುಖ್ ಖಾನ್ ಇಲ್ಲಿಯೂ ಸಹಿತ ಕಿಂಗ್ ಖಾನ್ ಆಗಿದ್ದಾರೆ ಎನ್ನುವುದನ್ನು  ಭಾರತೀಯ ಚಿತ್ರರಂಗಕ್ಕೆ ತೋರಿಸಿದ್ದಾರೆ. 

Share this Story:

Follow Webdunia kannada