Select Your Language

Notifications

webdunia
webdunia
webdunia
webdunia

ನೀನು ಈ ಸವಾಲನ್ನು ಅಂಗೀರಿಸುತ್ತೀಯಾ ಇನ್ನು ಮೂರು ದಿನಗಳಿವೆ-ಯಾರಿಗೆ ಹೃತಿಕ್ ಸವಾಲ್ ಹಾಕಿರೋದು ?

ನೀನು ಈ ಸವಾಲನ್ನು ಅಂಗೀರಿಸುತ್ತೀಯಾ ಇನ್ನು ಮೂರು ದಿನಗಳಿವೆ-ಯಾರಿಗೆ ಹೃತಿಕ್ ಸವಾಲ್ ಹಾಕಿರೋದು ?
ಮುಂಬೈ , ಮಂಗಳವಾರ, 23 ಸೆಪ್ಟಂಬರ್ 2014 (10:19 IST)
ಹೃತಿಕ್ ರೋಶನ್  ಇರುವ ಕಡೆ ಹೊಸ ಚಾಲೆಂಜ್ ಇರಲೇ ಬೇಕು, ಇದು ಅಲಿಖಿತವಾದ  ಒಂದು ನಿಯಮ. ಹಾಗೆ ಆಗಿದೆ ಈಗ ಸಹಿತ. ಈವರೆಗೂ ಎಲ್ಲರು ತಿಳಿದಿರುವಂತೆ ಐಸ್ ಬಕೆಟ್ ಚಾಲೆಂಜ್ ಕಡೆಗೆ ಹೀರೋ ಹೀರೋಯಿನ್ ಗಳು ಗಮನ ನೆಟ್ಟಿದ್ದರು. ಅದರಲ್ಲಿ ಕನ್ನಡ ಹಿಂದಿ ಎಲ್ಲ ಭಾಷೆಯ ಹೀರೋ ಹೀರೋಯಿನ್ ಗಳು ಸಹಿತ ಭಾಗವಹಿಸಿ  ದೇಣಿಗೆ ನೀಡಿದ್ದರು ಮತ್ತು ಸಂಗ್ರಹಿಸಿದ್ದರು. ಆದರೆ ಹೃತಿಕ್ ಈಗ ಆಟೋ ರಿಕ್ಷ ಚಾಲೆಂಜ್ ಗೆ ಹೆಚ್ಚಿನ ಗಮನ ನೀಡಿದ್ದಾರೆ. ತನ್ನ ಹೊಸ ಚಿತ್ರ ಬ್ಯಾಂಗ್ ಬ್ಯಾಂಗ್ ಗೆಂದು  ಒಂದು ದಿನ ನಟ್ಟ ನಡುರಾತ್ರಿಯಲ್ಲಿ ತಮ್ಮ ಕಾರು ಬಿಟ್ಟು ಆಟೋ ರಿಕ್ಷ ಹತ್ತಿ ಮನೆಗೆ ಹೋಗಿದ್ದಾರೆ.  
 
ಆದರೆ ಆಟೋ ಡ್ರೈವರ್ ಗೆ ಅದರಲ್ಲಿ ಹತ್ತಿದ್ದು ಬಾಲಿವುಡ್ ಸೂಪರ್ ಸ್ಟಾರ್ ಎನ್ನುವ ಸಂಗತಿ ಗೊತ್ತೇ ಆಗಿಲ್ಲ, ಆಟ ಈ ಹೀರೋವನ್ನು  ಮನೆ ಬಳಿ  ಬಿಟ್ಟು ಹೋದರಂತೆ.. ನನ್ನ ಸಿಟಿ ನನಗೆ ಇಷ್ಟ, ಆದರೆ ಆ ಡ್ರೈವರ್ ನನ್ನನ್ನು ಗುರುತು ಹಿಡಿಯಲೇ ಇಲ್ಲ ಅದೇ ಸಕತ್ ಆಶ್ಚರ್ಯ ಆಗಿದ್ದು ಎಂದು ಟ್ವೀಟ್  ಮೂಲಕ ಹೇಳಿದ್ದಾರೆ. ನಾನು ಆಟೋದಲ್ಲಿ ಹೋದಂತೆ ನೀವು ಸಹಿತ ಹೋಗಿ ಎಂದು ಚಾಲೆಂಜ್ ಮಾಡಿದ್ದಾರೆ ಒಂದಷ್ಟು ಬಾಲಿವುಡ್ ಮಂದಿ ಬಳಿ. ಅದರಲ್ಲಿ ಶಾರುಖ್ ಖಾನ್, ಉದಯ್ ಚೋಪ್ರ, ಡಿನೋ  ಮೇರಿಯ ಮುಂತಾದವರಿದ್ದಾರೆ. ಅಷ್ಟು ಮಾತ್ರವಲ್ಲದೆ ಆತನ ಹೊಸ ಗೆಳತಿ ಪ್ರಿಯಾಂಕ ಚೋಪ್ರ ಸಹಿತ ಈ ಚಾಲೆಂಜ್ ಎದುರಿಸ ಬೇಕಾಗಿದೆ. 
 
ನಾನು ಸವಾಲ್ ಮಾಡುತ್ತಿರುವ ಏಕೈಕ ಹೆಣ್ಣು  ದಿ ಸೂಪರ್ ಪ್ರಿಯಾಂಕ ಚೋಪ್ರ. ನೀನು ಈ ಸವಾಲನ್ನು ಅಂಗೀರಿಸುತ್ತಿಯಾ ಇನ್ನು ಮೂರು ದಿನಗಳಿವೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ  ಬಿಡುಗಡೆಯಾದ ಮೆರಿಕೊಂ ಚಿತ್ರಕ್ಕೆಂದು ಆಕೆ ಬಾಕ್ಸಿಂಗ್ ಕಲಿತ ಕಾರಣದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳ ಬಹುದು ಎಂದು ಈ ಸವಾಲ್ ಆಕೆಗೆ ಮಾತ್ರ ಹಾಕಿರ ಬಹುದೇನೋ.. ಒಟ್ಟಾರೆ ಪಿಗ್ಗಿ ಆರ್ ಯು ರೆಡಿ...

Share this Story:

Follow Webdunia kannada