Select Your Language

Notifications

webdunia
webdunia
webdunia
webdunia

ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸಹಿತ ಅಂಗಾಂಗ ಪ್ರದರ್ಶನ ಮಾಡುತ್ತಿದ್ದೀರಿ.ಯಾಕೆ ಈ ರೀತಿಯ ಆಷಾಢಭೂತಿ ವರ್ತನೆ?

ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸಹಿತ ಅಂಗಾಂಗ ಪ್ರದರ್ಶನ ಮಾಡುತ್ತಿದ್ದೀರಿ.ಯಾಕೆ ಈ  ರೀತಿಯ ಆಷಾಢಭೂತಿ ವರ್ತನೆ?
ಮುಂಬೈ , ಮಂಗಳವಾರ, 23 ಸೆಪ್ಟಂಬರ್ 2014 (10:11 IST)
ಬಾಲಿವುಡ್ ನಟಿ ದೀಪಿಕ ಪಡುಕೋಣೆ ಮತ್ತು ಪ್ರಸಿದ್ಧ ಅಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ನಡುವೆ ಮಾತಿನ ಯುದ್ಧ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಆಕೆ ಸೋಶಿಯಲ್ ಮೀಡಿಯ ಆಸರೆ ಪಡೆದು.. ಅದರಲ್ಲಿ ತನ್ನ ಅಭಿಪ್ರಾಯಗಳನ್ನು   ವ್ಯಕ್ತ ಪಡಿಸುತ್ತಿದ್ದಾಳೆ.. ಆಕೆಗೆ ಆ ಪತ್ರಿಕೆಯವರು ಸಹಿತ ಪ್ರತ್ಯುತ್ತರ ನೀಡುತ್ತಿದ್ದಾರೆ. 
 
ದೀಪಿಕ ದೃಷ್ಟಿಕೋನ...
ನನ್ನ ಚಿತ್ರದ ಪಾತ್ರಗಳು ಬಯಸಿದಂತೆ  ನಾನು ಇರುತ್ತೇನೆ.. ಒಮ್ಮೆ ಸಂಪೂರ್ಣವಾಗಿ ಮೈ ಮುಚ್ಚಿರುವ ಉಡುಗೆ ಧರಿಸಿದರೆ, ಮತ್ತೊಮ್ಮೆ ಬೆತ್ತಲೆಯಾಗಿಯೂ ಸಹಿತ ಬರ ಬಹುದು. ಅಂತಹ ಪಾತ್ರಗಳಿಗೆ ಜೀವ ಕೊಡ ಬೇಕಾ ಬೇಡವಾ ಎನ್ನುವ ನಿರ್ಧಾರ ನನ್ನ ಇಷ್ಟದಂತೆ ಇರುತ್ತದೆ. 
 
ಆದರೆ ಓದುಗರನ್ನು ಆಕರ್ಷಿಸುವ ದೃಷ್ಟಿಯಿಂದ ಹೆಣ್ಣುಮಕ್ಕಳ ಗೌರವವನ್ನು ಹೀಗೆಳೆಯುವ ಪದ್ಧತಿ ಎಂದಿಗೂ ಸರಿಯಲ್ಲ. ಏನೇ ಆಗಲಿ ಹೆಣ್ಣಿನ ಬಗ್ಗೆ ಪುರುಷ ನೀಡುವ ಹೇಳಿಕೆ ಅನುಚಿತ ರೀತಿಯಲ್ಲಿ ಇರುತ್ತದೆ. ಎಂದಾದರು ನೀವು ಶಾರುಖ್ ಖಾನ್ ಅವರ ಎಯಿಟ್ ಪ್ಯಾಕ್  ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿದ್ದೀರಾ ? ಎಂದು ಆಕೆ ಇತ್ತೀಚೆಗೆ ಫೇಸ್ ಬುಕ್ ಹೇಳಿದ್ದಾಳೆ. 
 
webdunia
ರೀಲ್ ಲೈಫ್ ಮತ್ತು ರಿಯಲ್ ಲೈಫ್ ನಡುವೆ ತುಂಬಾ ವ್ಯತ್ಯಾಸ ಇರುತ್ತದೆ ಎಂದು ಆಕೆ ಟೈಮ್ಸ್ ಆಫ್ ಇಂಡಿಯ ಹೆಡ್ಡಿಂಗ್ ಕೋಟ್ ಮಾಡಿ ಹೇಳಿದ್ದಾಳೆ. ಹೆಡ್ ಲೈನ್ ಮೂಲಕ ಜನರನ್ನು ಆಕರ್ಷಿಸಲು ನೀವು ಹೆಣ್ಣಿನ ಸ್ತನಗಳು ಮತ್ತು ಪುರುಷರ ಅಂಗಗಳನ್ನು ಹಾಗೂ ದೇಹದ ಇತರ ಭಾಗಗಳನ್ನು ಆಯ್ಕೆ ಮಾಡುವುದೆಷ್ಟು ಸರಿ ? ಎಂದು ಪ್ರಶ್ನೆ ಮಾಡಿದ್ದಾಳೆ. 
 
ಫೇಸ್ ಬುಕ್ ನಲ್ಲಿ ದೀಪಿಕ ಪೋಸ್ಟ್ ಗೆ ಉತ್ತರ.. ಟೈಮ್ಸ್ ಪಾಯಿಂಟ್ ಆಫ್ ವ್ಯೂ ನಲ್ಲಿ.. 
ನೀವು ರೀಲ್ ಮತ್ತು ರಿಯಲ್ ಲೈಫ್ ನ ವ್ಯತ್ಯಾಸ ಹೇಳಿರುವ ಬಗ್ಗೆ ನಾವು ಅಂಗೀಕರಿಸುತ್ತೇವೆ. ಇತ್ತೀಚಿನ ಹಲವು ದಿನಗಳಿಂದ ನೀವು ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸಹಿತ ಅಂಗಾಂಗ ಪ್ರದರ್ಶನ ಮಾಡುತ್ತಿದ್ದೀರಿ. ಪ್ರಮೋಶನ್ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವುದು, ಮ್ಯಾಗಜೈನ್ ಕವರ್ ಪೇಜ್ ಗೆ ಫೋಸ್ ನೀಡುವುದು ಸಾಮಾನ್ಯವಾಗಿ ಕಂಡು ಬರ್ತಾ ಇದೆ. 
ಅಲ್ಲಿ ನೀವು ಯಾವ ರೋಲ್ ನಲ್ಲಿ ನಟಿಸುತ್ತಿದ್ದಿರಿ? ಯಾಕೆ ಈ  ರೀತಿಯ ಆಷಾಢಭೂತಿ ವರ್ತನೆ? ಇದಕ್ಕೂ ಮುನ್ನ ಅನೇಕ ಮೀಡಿಯಾಗಳು ನಿಮ್ಮ ಸ್ತನದರ್ಶನದ  ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆಗ ಎದುರು ಹೇಳದ ನೀವು ಅದ್ಯಾಕೆ ಈಗ ಇಷ್ಟೊಂದು ಗಲಾಟೆ ಮಾಡ್ತಾ ಇರೋದು ?? ಹೀಗಂತ ಟೈಮ್ಸ್ ಆಫ್ ಇಂಡಿಯಾ ದವರು ಫೇಸ್ ಬುಕ್ ನಲ್ಲಿಯೇ ಮರು ಪ್ರಶ್ನಿಸಿದ್ದಾರೆ.. 
ಸೆಕ್ಸಿ ಶಾರುಖ್ ಖಾನ್ ಅವರ ಎಯಿಟ್ ಪ್ಯಾಕ್ ಬಗ್ಗೆ ಹೇಳಿಲ್ಲ ಎಂದು ಹೇಳಿದ್ದಿರಿ.. ಅವರವರ ಅಭಿಪ್ರಾಯ ಅವರವರದ್ದು.. ಆದರೆ ಬೇರೆಯವರ ಅಭಿಪ್ರಾಯದ ಬಗ್ಗೆ ಹೇಳುವ ಹಕ್ಕು ಯಾರಿಗೂ ಇಲ್ಲ.. ಆಕರ್ಷಕ ಹೆಡ್ ಲೈನ್ ಜೊತೆಗೆ ಅನಾಕರ್ಷಕ ಹೆಡ್ ಲೈನ್ ಹಾಕಿ ಮಾರಾಟ ಮಾಡಲು ಪ್ರಯತ್ನಿಸುತ್ತೇವೆ..
 
 ನೀವು ಸಂದರ್ಶನಗಳನ್ನು ಟ್ವೀಟ್  ಮಾಡೋದನ್ನು ನಾವು ಕಾಣುತ್ತಿರುತ್ತೇವೆ. ಅದು ನಿಮ್ಮ ಸಿನಿಮಾಗಳ ಪ್ರಮೋಶನ್ ಗೆ ಸಾಕಷ್ಟು ಉಪಯುಕ್ತ. ಯೂ ಟ್ಯೂಬ್ ನಲ್ಲಿ ಇರುವ ನಿಮ್ಮ ವೀಡಿಯೋಗಳ ಬಗ್ಗೆ ನೀವ್ಯಾಕೆ ವಿರುದ್ಧ ಹೇಳಿಲ್ಲ? ಅಷ್ಟೇ ಅಲ್ಲದೆ ನಿಮ ಸಂಬಂಧಪಟ್ಟ ಅಸಹ್ಯಕರ ಫೋಟೋಗಳು ಮೀಡಿಯಾದಲ್ಲಿ ಬರುತ್ತಿರುವ ಬಗ್ಗೆ ನಮ್ಮ ಮೀಡಿಯಾ ಮಿತ್ರರು ಸಾಕಷ್ಟು ಆಶ್ಚರ್ಯ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯ ಪ್ರತಿಕ್ರಿಯೆ ವ್ಯಕ್ತ ಪಡಿಸಿವೆ. 
 
ಕಳೆದ ಕೆಲವು ದಿನಗಳ  ಹಿಂದೆ ದೀಪಿಕ ಪಡುಕೋಣೆ  ತನ್ನ ವಕ್ಷಸ್ಥಳ ಪ್ರದರ್ಶಿಸುತ್ತಿರುವ ಬಗೆ ಒಂದು ಲೇಖನ ಬರೆದು ಅದರ ವೆಬ್ ಸೈಟ್ ನಲ್ಲಿ ವೀಡಿಯೋ ಪೋಸ್ಟ್ ಮಾಡಿತ್ತು.. ಅದಕ್ಕೆ ಸಂಬಂಧಪಟ್ಟಂತೆ ನಾನು ಹೆಣ್ಣು, ನನಗೆ ಸ್ತನಗಳಿವೆ  ಸೋ ತೋರಿಸುತ್ತೇನೆ  ಎಂದು ದೀಪಿಕ ಪಡುಕೋಣೆ ಎಗರಾಡಿದ್ದಳು ಸೋಶಿಯಲ್ ಮೀಡಿಯಾದಲ್ಲಿ.. ಕಾಲಾನುಕಾಲದಿಂದ ಅರೆ ಬೆತ್ತಲೆಯಾಗಿ ಎಲ್ಲರ ಮುಂದೆ ಬಂದಿರುವ ದೀಪಿಕ ಇದ್ದಕ್ಕಿದ್ದ ಹಾಗೆ ಹೀಗೆ ಆಗಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.. ಟೈಮ್ಸ್ ಮತ್ತು ದೀಪಿ ನಡುವಿನ ಯುದ್ಧ ಹೇಗೆ ಎಂಡ್ ಆಗುತ್ತೋ ವೇಟ್ ಅಂಡ್ ವಾಚ್!!

Share this Story:

Follow Webdunia kannada