Select Your Language

Notifications

webdunia
webdunia
webdunia
webdunia

ಆಗ ಮೇರಿ ಕೋಮ್ ಈಗ ಕಿರಣ್ ಬೇಡಿ.. ಇದು ಪ್ರಿಯಾಂಕ ಚೋಪ್ರ ಹೊಸ ಸಾಹಸ

ಆಗ ಮೇರಿ ಕೋಮ್  ಈಗ ಕಿರಣ್ ಬೇಡಿ.. ಇದು ಪ್ರಿಯಾಂಕ ಚೋಪ್ರ ಹೊಸ ಸಾಹಸ
ಮುಂಬೈ , ಸೋಮವಾರ, 22 ಸೆಪ್ಟಂಬರ್ 2014 (11:38 IST)
ಬಾಲಿವುಡ್  ಚಿತ್ರಗಳಲ್ಲಿ ಪ್ರಿಯಾಂಕ ಚೋಪ್ರ ನಟನೆಯು ಎಂತಹ ಪಾತ್ರಗಳಿಗೆ ಸೀಮಿತ ಆಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ.. ಸಕತ್ ಗ್ಲಾಮರ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದರೂ ಸಹಿತ ಆಕೆ ಹೀರೋ ಕೈಕೆಳಗಿನ ಹೀರೋಯಿನ್ ಮಾತ್ರ ಆಗಿದ್ದರು. ಆದರೆ ಆಕೆಯ ಬದುಕಲ್ಲಿ ಬೆಳಕಾಗಿದೆ ಬಾಕ್ಸರ್ ಮೇರಿ ಕೋಮ್ ಅವರ ಬದುಕಿನ ಕಥೆ. ಇದಕ್ಕೆ ಪೂರಕವಾಗಿ ಈ ಚಿತ್ರದಲ್ಲಿ ಆಕೆ ಮಾಡಿ ಮಾತ್ರವನ್ನು ಜನ ಸ್ವೀಕರಿಸಿ, ಮತ್ತೊಂದು ಹೊಸ ಪ್ರಯೋಗಕ್ಕೆ ಸಿದ್ಧತೆ ನಡಿಸಿದ್ದಾಳೆ ಆಕೆ. ಈಗ ಪ್ರಿಯಾಂಕ ತನ್ನ ತನ್ನ ಪ್ರೊಡಕ್ಷನ್ ಹೌಸ್ ನಿಂದ ಅನೇಕ ಚಿತ್ರಗಳಲ್ಲಿ  ನಿರ್ಮಾಣ ಮಾಡುವುದಕ್ಕೆ ಆದ್ಯತೆ ನೀಡುತ್ತಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ.ಅದರಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರ ಬದುಕಿನ ಚಿತ್ರಣದ ಕಥೆಯನ್ನು ತಮ್ಮ ನಟನೆಯ ಮುಖಾಂತರ ಜನರ ಮುಂದೆ ತರಲು ಸಿದ್ಧವಾಗಿದ್ದಾರೆ. 
 
ತಮ್ಮ ಪ್ರೊಡಕ್ಷನ್ ಹೌಸ್ ನಿಂದ ಮೊದಲ ಐಪಿಎಸ್ ಅಧಿಕಾರಿಣಿ ಕಿರಣ್ ಬೇಡಿ ಜೀವನ ಕಥನದಲ್ಲಿ ನಟಿಸುವುದಕ್ಕೆ ಆಕೆ ಆದ್ಯತೆ ನೀಡುತ್ತಿರುವ ಬಗ್ಗೆ ಬಾಲಿವುಡ್ ನಲ್ಲಿ ಸುದ್ದಿ ಹರಡಿದೆ. ಸಧ್ಯದಲ್ಲೇ ಚಿತ್ರದ ಕೆಲಸ ಆರಂಭವಾಗುತ್ತದೆ ಎಂದು ಹೇಳಿದ್ದಾರೆ ಬಾಲಿವುಡ್ ಮಂದಿ.

Share this Story:

Follow Webdunia kannada