Select Your Language

Notifications

webdunia
webdunia
webdunia
webdunia

ಇಲಿಯಾನಳಿಗೆ ಬಯಸದೆ ಬಂದ ಭಾಗ್ಯ .. ಬಾಲಿವುಡ್ ಟೌನ್ ನಲ್ಲಿ ಸಾಲು ಸಾಲು ಸಿನಿಮಾ

ಇಲಿಯಾನಳಿಗೆ ಬಯಸದೆ ಬಂದ ಭಾಗ್ಯ .. ಬಾಲಿವುಡ್ ಟೌನ್  ನಲ್ಲಿ ಸಾಲು ಸಾಲು ಸಿನಿಮಾ
ಮುಂಬೈ , ಸೋಮವಾರ, 22 ಸೆಪ್ಟಂಬರ್ 2014 (11:35 IST)
ದಕ್ಷಿಣ ಭಾರತದ ಬಗ್ಗೆ ಕೆಲವು ಬಾಲಿವುಡ್ ನಟಿಯರಿಗೆ ನಿರ್ಲಕ್ಷ್ಯ ಇದ್ದರು ಸಹಿತ ಬಾಲಿವುಡ್ ನ್ನು ಆಳಿರುವ ಬಹುತೇಕ ಹೀರೋಯಿನ್ ಗಳು ದಕ್ಷಿಣ ಭಾರತದ ನಟಿಯರು. ಎಲ್ಲರಿಗೂ ಗೊತ್ತಿರುವಂತೆ ಅಂದಕಾಲತ್ತಿನ ವೈಜಯಂತಿ ಮಾಲ , ರೇಖಾ ,ಹೇಮಾ ಮಾಲಿನಿಯಿಂದ ಹಿಡಿದು , ನಂತರ ಶ್ರೀದೇವಿ, ಜಯಪ್ರದ ಸೇರಿದಂತೆ ಅನೇಕ ತಾರಮಣಿಯರು ದಕ್ಷಿಣ ಭಾರತದವರೇ ಆಗಿದ್ದಾರೆ. ಅವರು ಬಾಲಿವುಡ್ ಚಿತ್ರರಂಗವನ್ನು ಆಳಿ ಅಲ್ಲಿನವರನ್ನೇ ಮದುವೆಯಾಗಿ ದಕ್ಷಿಣದ ಸಂಸ್ಕೃತಿ ಹರಡಿದ್ದಾರೆ. ಈಗ ಕಾಜಲ್ ಅಗರವಾಲ್, ಅಸಿನ್, ತಮನ್ನ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ ನಟಿಯರು. ಅಸಿನ್ ಚಿತ್ರಗಳಾದರೂ ಒಂದೆರಡು ಯಶಸ್ಸು ಕಂಡಿತು, ಆದರೆ ತಮ್ಮು ಮತ್ತು ಕಾಜಲ್ ಗತಿ ಬ್ಯಾಡ ಯಾರಿಗೂ. ಅದಾದ ಬಳಿಕ ಇಲಿಯಾನ ಆ ಕಡೆ ತನ್ನ ಗಮನ ಕೇಂದ್ರೀಕರಿಸಿದಳು. ಆಕೆ ಅದೃಷ್ಟ ಒಂದರ್ಥದಲ್ಲಿ ಪರವಾಗಿಲ್ಲ ಎಂದೇ ಹೇಳ ಬಹುದು.
 
ಹೇಗೆಂದರೆ ಆಕೆ ನಟಿಸಿದ ಬರ್ಫಿ ಒಳ್ಳೆಯ ಯಶಸ್ಸು ಕಂಡಿತು, ಅದೇರೀತಿ ಫಟಾ ಪೋಸ್ಟರ್ ನಿಕ್ಲ ಹೀರೋ  ಚಿತ್ರವೂ ಒಳ್ಳೆಯ ಹೆಸರು ಆಕೆಗೆ ನೀಡಿತು. ಇತ್ತೀಚಿಗೆ ಆಕೆ ಮಾಡಿಸಿದ ಬಿಕಿನಿ ಫೋಟೋ ಶೂಟ್ ಬಾಲಿವುಡ್ ನಗರವಾಸಿಗಳ ಗಮನ ಸೆಳೆದಿದೆ. ಈಗ ಆಕೆ ಯಶ್ ರಾಜ್ ಅವರ ಚಿತ್ರಗಳಲ್ಲಿ ನಟಿಸಲು ಅವಕಾಶ ಗಳಿಸಿಕೊಂಡಿದ್ದಾಳೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಯಶ್ರಾಜ್ ಅವರ ಪ್ರೊಡಕ್ಷನ್ ಗೆ ಸಹಿ ಮಾಡಿದರೆ ಮೂರು ಚಿತ್ರಗಳಲ್ಲಿ ನಟಿಸ ಬೇಕಾದ ಕರಾರು. ಈ ಮುಖಾಂತರ ಇಲಿಯಾನ ಮೂರು ಚಿತ್ರಗಳಲ್ಲಿ ಅದೂ ಒಳ್ಳೆಯ ಬ್ಯಾನರ್ ನಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾಳೆ. ಅಂತೂ ಇಂತೂ ಈ ಗೋವಾ ಬ್ಯೂಟಿಗೆ ಲಕ್ ಖುಲಾಯಿಸುತ್ತಿದೆ. ಆ ಮೂರು ಚಿತ್ರಗಳಲ್ಲಿ ಒಂದು ಶಾರುಖ್ ಖಾನ್, ಮತ್ತೊಂದು ಸಲ್ಮಾನ್ ಖಾನ್ ಹಾಗೂ ರಣಬೀರ್ ಕಪೂರ್  ನಟನೆಯ ಚಿತ್ರಗಳಾಗಿವೆ. 

Share this Story:

Follow Webdunia kannada