Select Your Language

Notifications

webdunia
webdunia
webdunia
webdunia

ಪ್ರೇಕ್ಷಕರಿಗೆ ಇಷ್ಟವಾಗುವಂತೆ ಗ್ಲಾಮರ್ ಆಗಿರೋದ್ರದಲ್ಲಿ ತಪ್ಪೇನು.. ಹೇಳಿ ತಪ್ಪೇನು ??

ಪ್ರೇಕ್ಷಕರಿಗೆ ಇಷ್ಟವಾಗುವಂತೆ ಗ್ಲಾಮರ್ ಆಗಿರೋದ್ರದಲ್ಲಿ ತಪ್ಪೇನು.. ಹೇಳಿ ತಪ್ಪೇನು ??
ಮುಂಬೈ , ಸೋಮವಾರ, 22 ಸೆಪ್ಟಂಬರ್ 2014 (11:31 IST)
ಕರೀನ ಕಪೂರ್ ಬೆಂಗಾಲದ ನವಾಬ ಸೈಫ್ ಅಲಿ ಖಾನ್ ಜೊತೆ ಮದುವೆ ಆದ ನಂತರವೂ  ಬಾಲಿವುಡ್ ನಲ್ಲಿ ನಟಿಸುತ್ತಾ ಇದ್ದಾಳೆ. ಆಕೆಯ ಗ್ಲಾಮರಸ್ ಅದೆಷ್ಟು ಜನರ ಗಮನ ಸೆಳೆದಿದೆ ಎಂದರೆ ಆ ಸೆಕ್ಸಿ ಚೆಲುವೆ ಕೇಳಿದಷ್ಟು ಮೊತ್ತ ನೀಡಲು ಚಿತ್ರರಂಗದವರು ಸಿದ್ಧ ಆಗಿದ್ದಾರೆ. ಅಲ್ಲದೇ ಅನೇಕ ಆಡ್ ಗಳಲ್ಲೂ ಸಹಿತ ನಟಿಸುತ್ತಿದ್ದಾಳೆ ಈ ಚೆಲುವೆ! ಕರೀನ ಕೇವಲ ಹದಿನೈದು  ಸೆಕೆಂಡುಗಳಷ್ಟು  ಜಾಹೀರಾತಲ್ಲಿ ಕಾಣಿಸಿಕೊಳ್ಳಲು ಸುಮಾರು 5  ರಿಂದ ಆರು ಕೋಟಿ ಪಡೆಯುತ್ತಾಳೆ. ಯಾವುದಾದರು ಪ್ರಾಡಕ್ಟ್ ಕಂಪನಿಯವರು ತಮ್ಮ ಜೋಬು ತುಂಬಿಸಿಕೊಂಡು   ಆಕೆ ಮುಂದೆ ಹೋಗ ಬೇಕು. ಅಂತಹುದರಲ್ಲಿ ಇತ್ತೀಚಿಗೆ ಆಕೆ ಕೇವಲ ಮೂರು ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದ್ದಾಳೆ. ಆಕೆ ಎಷ್ಟೇ ಡಿಮ್ಯಾಂಡ್ ಮಾಡಿದರು ಸಹಿತ ನೀಡಲು ಸಿದ್ಧ ಇರುವ ಈ ಸಮಯದಲ್ಲಿ ಕರೀನ ಅದ್ಯಾಕೆ ಇಷ್ಟು ಕಡಿಮೆ ಕೇಳಿದ್ದಾಳೆ ಎನ್ನುವುದೇ ಸಧ್ಯದ ಪ್ರಶ್ನೆ.
 
ಮದುವೆಯಾದ ಬಳಿಕವು ಗ್ಲಾಮರಸ್ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ಕರೀನ ಎಕ್ಸ್ಪೋಸಿಂಗ್ ವಿಷಯದಲ್ಲಿ ಎಂದಿಗೂ ಹಿಂದೆ ಉಳಿದಿಲ್ಲ ಮತ್ತು ಹಿಂದಡಿ ಇಡಲ್ಲ ಎಂದು ಹೇಳಿದ್ದಾಳೆ. ಕಥೆಯ ಜೊತೆಗೆ ಈ ಸಂಗತಿಗೂ ಸಹಿತ ತಾನು ಆದ್ಯತೆ ನೀಡುವುದಾಗಿ ಹೇಳಿರುವ ಕರೀನ ಪ್ರೇಕ್ಷಕರ ಮನ ಗೆಲ್ಲು ಗ್ಲಾಮರಸ್ ಆಗಿರುವುದರಲ್ಲಿ ತಪ್ಪೇನು ಎಂದು  ಮಾಧ್ಯಮದವರನ್ನೇ ಪ್ರಶ್ನಿಸಿದ್ದಾಳೆ. ಇನ್ನು ಎರಡು ಮೂರು ವರ್ಷಗಳ ಕಾಲ ತಾನು ಚಿತ್ರರಂಗದಲ್ಲಿ ಉಳಿಯುವುದಾಗಿ ಹೇಳಿದ್ದಾಳೆ ಈಕೆ.ಆಮೇಲೆ .....?

Share this Story:

Follow Webdunia kannada