Select Your Language

Notifications

webdunia
webdunia
webdunia
webdunia

ಬ್ಲಾಕ್ ಚಿತ್ರದ ಸೋನಂ ಗೂ ಈಗಿನ ಸೋನಂ ಗೂ ವ್ಯತ್ಯಾಸವಿದೆ..

ಬ್ಲಾಕ್  ಚಿತ್ರದ ಸೋನಂ ಗೂ ಈಗಿನ  ಸೋನಂ ಗೂ ವ್ಯತ್ಯಾಸವಿದೆ..
ಮುಂಬೈ , ಶನಿವಾರ, 20 ಸೆಪ್ಟಂಬರ್ 2014 (10:41 IST)
ಅಮಿತಾಬ್ ಬಚ್ಚನ್ ಗೆ ಸೌಂದರ್ಯದ ಬಗ್ಗೆ ಅಪಾರವಾದ ಇಷ್ಟ ಅಂತ ಕಾಣುತ್ತೆ. ಅದನ್ನು ಬಿಗ್ ಬಿ ಮನದಲ್ಲಿ ಇಟ್ಟುಕೊಳ್ಳದೆ ನೇರವಾಗಿ ಹೇಳಿ ಬಿಡ್ತಾರೆ. ಅವರು ನಿನ್ನೆ ತನಕ ದೀಪಿಕ ಪಡುಕೋಣೆಯ ರೂಪರಾಶಿಯನ್ನು   ಹೊಗಳಿದ್ದರು. ಆಕೆಯ ಅಂದಕ್ಕೆ ಮರುಳಾಗಿ ಬಿಗ್ ಬಿ ಸಾಕಷ್ಟು ಕಡೆ ಎಷ್ಟು ಚಂದದ ಹುಡುಗಿ ಎಂದು ಭಾವನೆ ವ್ಯಕ್ತ ಪಡಿಸಿದ್ದರು. ಆದರೆ ಈಗ ಆ ಚಾನ್ಸ್ ಅನಿಲ್ ಕಪೂರ್  ಪುತ್ರಿ ಸೋನಂ ಪಾಲಾಗಿದೆ.
 
 ಮುಖ್ಯವಾಗಿ ಆಕೆಯು ಸಿಕ್ಕಾಪಟ್ಟೆ ಚಂದದ ಹುಡುಗಿ ಎನ್ನುವ ಹೊಗಳಿಕೆ ಬಿಗ್ ಬಿ ಅವರ ಕಡೆಯಿಂದ ಹರಿದು ಬಂದಿದೆ. ಬ್ಲಾಕ್ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸೋನಂಗೂ  ಈಗ ಅಭಿನೇತ್ರಿ ಆಗಿರುವ ಸೋನಂ ಗೂ ಸಹಿತ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹೇಳಿದ್ದಾರೆ ಬಿಗ್ ಬಿ. ಆಕೆ ಖೂಬ್ ಸೂರತ್ ಚಿತ್ರದ ಪ್ರಮೋಶನ್‌‍ಗೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಯದಲ್ಲಿ ಈ ಮನದ ಭಾವ ವ್ಯಕ್ತ ಪಡಿಸಿದ್ದಾರೆ.. ಕ್ಯಾ ಬಾತ್ ಹೈ ಸೋನಂ  .. ಓಕೆ ,... ನೆಕ್ಟ್ ಸರ್ಜಿ ?? 

Share this Story:

Follow Webdunia kannada