Select Your Language

Notifications

webdunia
webdunia
webdunia
webdunia

ನನ್ನ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ. ನಾನು ಈಗ ಆರಾಮವಾಗಿದ್ದೇನೆ

ನನ್ನ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ. ನಾನು ಈಗ ಆರಾಮವಾಗಿದ್ದೇನೆ
ಮುಂಬೈ , ಶುಕ್ರವಾರ, 19 ಸೆಪ್ಟಂಬರ್ 2014 (10:44 IST)
ಇತ್ತೀಚಿಗೆ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಗುರಿಯಾಗಿರುವ ಅಮಿತಾಬ್ ಬಚ್ಚನ್ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಗಮನ ನೀಡದೆ ಇರುವಂತಹ ಪರಿಸ್ಥಿತಿ ಉಂಟಾಗಿದೆ ಎಂದೇ ಹೇಳ ಬಹುದಾಗಿದೆ. ಈ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನನ್ನ ಆರೋಗ್ಯದಲ್ಲಿ ಈಗ ಸುಧಾರಣೆ ಆಗುತ್ತಿದೆ ಎಂದು ಹೇಳಿದ್ದಾರೆ. 71 ವರ್ಷದ ಈ ಅಭಿಜಾತ ಕಲಾವಿದ ತನ್ನ ಬ್ಲಾಗ್ ನಲ್ಲಿ ಈ ಸಂಗತಿಯನ್ನು ಹೇಳಿದ್ದಾರೆ. ತನ್ನ ಆರೋಗ್ಯದ ಬಗ್ಗೆ ಹಾರೈಸಿದ ಎಲ್ಲ ಅಭಿಮಾನಿಗಳಿಗೂ ಸಹಿತ ಈಗ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
 
ನನ್ನ ಆರೋಗ್ಯದ ಬಗ್ಗೆ ಚಿಂತಿಸಿ , ನನಗೆ ಸಂಪೂರ್ಣವಾಗಿ ಗುಣವಾಗ ಬೇಕು ಎಂದು ಬಯಸಿದವರಿಗೆಲ್ಲ ಧನ್ಯವಾದಗಳು. ಈಗ ನನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ ಅಮಿತಾಬ್ ಬಚ್ಚನ್. ರೆಕಾರ್ಡಿಂಗ್ ಸೆಶನ್ ಸಮಯದಲ್ಲಿ ಅವರು ಕೆಮ್ಮಿನ ಸಮಸ್ಯೆ ಎದುರಿಸಿದ್ದರು. 

Share this Story:

Follow Webdunia kannada