Select Your Language

Notifications

webdunia
webdunia
webdunia
webdunia

ಶ್ರದ್ಧಾ ಕಪೂರ್‌ಗೆಂದು ಒಂದು ಕೋಟಿ ರೂ ವಜ್ರದ ಉಂಗುರ ಕೊಂಡ ಆದಿತ್ಯ ರಾಯ್ ಕಪೂರ್

ಶ್ರದ್ಧಾ ಕಪೂರ್‌ಗೆಂದು ಒಂದು ಕೋಟಿ ರೂ ವಜ್ರದ ಉಂಗುರ ಕೊಂಡ ಆದಿತ್ಯ ರಾಯ್ ಕಪೂರ್
ಮುಂಬೈ , ಗುರುವಾರ, 18 ಸೆಪ್ಟಂಬರ್ 2014 (10:32 IST)
ಬಾಲಿವುಡ್ ನಲ್ಲಿ ಪ್ರೀತಿ ಮಾಡುವುದು ಹೊಸದಲ್ಲ. ಅದೇರೀತಿ ಸಿನಿ ತಾರೆಯರು ತಮಗೆ ಇಷ್ಟವಾದವರ ಜೊತೆಗೆ ಲವ್, ಅಫೇರ್, ಓಡಾಟ, ಡೇಟಿಂಗ್ ಮಣ್ಣು ಮಸಿ ಅಂತ ಬ್ಯುಸಿ ಇರ್ತಾರೆ. ಅದಕ್ಕೆ ಅವರ ಆ  ಜೀವನ ಶೈಲಿ ಸಹಿತ ಸಾಕಷ್ಟು ಪ್ರಭಾವ ಬೀರಿದೆ ಎಂದೇ ಹೇಳ ಬಹುದಾಗಿದೆ. ಅಲ್ಲದೆ ಈ ಬಿಟೌನ್ ನಲ್ಲಿ ಇಂದು ಇದ್ದ ಜೋಡಿ ನಾಳೆ ಕಾಣಲ್ಲ, ಸರಿಸುಮಾರು ಏಳು ವರ್ಷಗಳ ಕಾಲ ಒಟ್ಟಿಗೆ ಇದ್ದು ಇನ್ನೇನು ಮದುವೆ ಆಗಿಯೇ ಬಿಡ್ತಾರೆ ಎಂದು ತಿಳಿದಿದ್ದ ಬಿಪಾಸ ಮತ್ತು ಜಾನ್ ಅಬ್ರಹಾಂ ಬೇರೆಯಾದ ಪ್ರಕರಣಗಳು, ರಣಬೀರ್-ಕತ್ರಿನ ಸಂಗತಿ ಹೀಗೆ ಹತ್ತು ಹಲವಾರು. ಅವೆಲ್ಲ ಬೇರೆ ಕಥೆ ಆದರೆ ಆಶಿಕಿ ಮೂಲಕ ಸೂಪರ್ ಹಿಟ್ ಕೊಟ್ಟ ಜೋಡಿ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್. ಇವರಿಬ್ಬರು ಆ ಚಿತ್ರವನ್ನು ಜನರ ಮನದಲ್ಲಿ ಹೆಚ್ಚು ಕಾಲ ನಿಲ್ಲುವಂತೆ ಮಾಡಿದ್ದು ಎಲ್ಲರಿಗು ಗೊತ್ತಿದೆ, ಇದರ ಜೊತೆಗೆ ಈ ಜೋಡಿ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ. 
 
ಇದರ ಅನ್ವಯ ಹೌದಾ ಶ್ರದ್ಧಾ - ಆದಿತ್ಯ ಅಂದ್ರೆ ನೋ ವೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ಎಲ್ಲರ ಬಾಯ್ ಮುಚ್ಚಿಸಿದ್ದಾರೆ. ಹಾಗೆ ಹೇಳಿದ ಮಾತ್ರಕ್ಕೆ ಮಂದಿ ಸುಮ್ಮನೆ ಇರ್ತಾರಾ?  ಈ ಜೋಡಿ ಬಗ್ಗೆ ಬಾಲಿವುಡ್ ಮಂದಿ ಒಂದು ಕಣ್ಣು ಇಟ್ಟೇ.. ಇದ್ದಾರೆ, ಅದಕ್ಕೆ ಪೂರಕವಾಗಿ ಒಂದು ಸಂಗತಿ ನಡೆದಿದೆ. ಅದೇನೆಂದರೆ, ದಾವತ್ ಇ ಇಶ್ಕ್ ಚಿತ್ರದ ಪ್ರಮೋಶನ್ ಗೆ ಸೂರತ್ ಗೆ ಹೋದಾಗ ಆದಿತ್ಯ ರಾಯ್ ಕಪೂರ್ ಅಲ್ಲಿ ಇದ್ದ ವಜ್ರದ ಅಂಗಡಿಗೆ  ಹೋಗಿ ಒಂದು ಕೋಟಿ ರೂಪಾಯಿ ಬೆಲೆ ಬಾಳುವ ಉಂಗುರ ಶ್ರದ್ಧಳಿಗೆ ಖರೀದಿ ಮಾಡಿರುವ ಸಂಗತಿ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲವು ಬಿ ಟೌನ್ ವಾಸಿಗಳು ಅಂದು ಕೊಂಡಂತೆ ಆದಲ್ಲಿ ಈ ಜೋಡಿ ಗಟ್ಟಿಮೇಳ ಸಧ್ಯದಲ್ಲೇ ಅಲ್ಲದಿದ್ದರೂ ನಿಶ್ಚಿತವಾಗಿ ಆಗುತ್ತೇ ಅನ್ನುವ ನಂಬಿಕೆ ಹೊಂದಿದ್ದಾರೆ ಬಾಲಿವುಡ್ ಮಂದಿ . ಹಾಗೆ ಆಗಲಿ ಎನ್ನುವ ಹಾರೈಕೆ ನಮ್ಮದು! 

Share this Story:

Follow Webdunia kannada