Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಮೇಲೆ ಮತ್ತೊಂದು ಕೇಸ್ ನಮೂದು..

ಸಲ್ಮಾನ್ ಖಾನ್ ಮೇಲೆ  ಮತ್ತೊಂದು ಕೇಸ್ ನಮೂದು..
ಮುಂಬೈ , ಮಂಗಳವಾರ, 16 ಸೆಪ್ಟಂಬರ್ 2014 (11:46 IST)
ಧರ್ಮದ ವಿಷಯಕ್ಕೆ ಬಂದಾಗ ತುಂಬಾ ಗಂಭೀರವಾಗಿ ಯೋಚಿಸುವ ಜಾತ್ಯತೀತ ರಾಷ್ಟ ನಮ್ಮದು. ಅದೇ ರೀತಿ ಆಗಿದೆ ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರ ಸಲುವಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮೇಲೆ ಕೇಸು ನಮೂದಾಗಿದೆ ಮಹಾರಾಷ್ಟ್ರದಲ್ಲಿ. ಆಲ್ ಇಂಡಿಯನ್ ಖ್ವಾಮಿ  ತನ್ _ಜಿಮ್ ವಿದರ್ಭ  ಯೂನಿಟ್  ನಾಯಕ ಮಹಮ್ಮದ್ ಅಲಿ  ಕೇಸ್ ದಾಖಲು  ಮಾಡಿದ್ದಾರೆ.   ಸಲ್ಮಾನ್ ಖಾನ್ ಬೇಕೂ ಬೇಕಂತಲೇ ಧರ್ಮ ವಿರೋಧದ ಕೆಲಸ ಮಾಡಿದ್ದಾರೆ ಹಾಗೂ ಅಂತಹ ಮಾತುಗಳನ್ನು ಆಡಿ ಧರ್ಮದ ಬಗ್ಗೆ ಅಗೌರವ ತೋರಿದ್ದಾರೆ. ಒಂದು ಧರ್ಮ ಹಾಗೂ ಅವರ ನಂಬಿಕೆಗಳ ಬಗ್ಗೆ ಅಪಮಾನ ಮಾಡುವುದು ಎಳ್ಳಷ್ಟು ಸರಿಯಲ್ಲ ಎನ್ನುವ ಅಂಶವನ್ನು ಕೇಸಿನ ಅರ್ಜಿಯಲ್ಲಿ ತಿಳಿಸಿದ್ದಾರೆ. 
 
ಸಲ್ಮಾನ್ ಖಾನ್ ಅವರು ಬೀಯಿಂಗ್ ಹ್ಯುಮನ್ ಎನ್ನುವ ಸಂಸ್ಥೆ ಹೊಂದಿದ್ದಾರೆ. ಆ ಸಂಸ್ಥೆಯು ಅನೇಕ ಸಮಾಜ ಹಿತ ಕಾರ್ಯಕ್ರಮಗಳನ್ನು ಮಾಡುತ್ತಿದೆ.ಇತ್ತೀಚಿಗೆ ಆ ಸಂಸ್ಥೆಯು ಒಂದು ಫ್ಯಾಶನ್ ಷೋ ಏರ್ಪಡಿಸಿತ್ತು. ಅದರಲ್ಲಿ ರೂಪದರ್ಶಿಯೊಬ್ಬಳು ಅಲ್ಲ ಎನ್ನುವ ಅರೇಬಿಕ್ ಭಾಷೆಯಲ್ಲಿ ತನ್ನ ಡ್ರಸ್ ಮೇಲೆ ಬರೆದುಕೊಂಡಿದ್ದಳು. ಆ ಉಡುಪು ಧರಿಸಿ ರ‌್ಯಾಂಪ್ ಮೇಲೆ ನಡೆದಿದ್ದಳು. ಸಲ್ಮಾನ್ ಖಾನ್ ಬಗ್ಗೆ ಕೇಸ್ ನಮೂದು ಮಾಡಿರುವ ಮಿಸ್ಟರ್ ಮೊಹಮ್ಮದ್ ಅವರು ಫ್ಯಾಶನ್ ಶೋಗೆ ಸಂಬಂಧಪಟ್ಟ ವೀಡಿಯೋ ಕ್ಲಿಪ್ಪಿಂಗ್ ಸಹ ಪೋಲೀಸರಿಗೆ  ನೀಡಿದ್ದಾರೆ. 

Share this Story:

Follow Webdunia kannada