Select Your Language

Notifications

webdunia
webdunia
webdunia
webdunia

ಮೇಡಂ ಜಿ ಮೇಡಂ ಜಿ ಎಂದು ಪ್ರಿಯಾಂಕ ಹಿಂದೆ ಹೊರಟರು ಮಧುರ್ ಭಂಡಾರ್ಕರ್

ಮೇಡಂ ಜಿ ಮೇಡಂ ಜಿ ಎಂದು ಪ್ರಿಯಾಂಕ ಹಿಂದೆ ಹೊರಟರು ಮಧುರ್ ಭಂಡಾರ್ಕರ್
ಮುಂಬೈ , ಮಂಗಳವಾರ, 16 ಸೆಪ್ಟಂಬರ್ 2014 (11:45 IST)
ಫ್ಯಾಶನ್, ಪೇಜ್ 3 ನಂತಹ ಸಿನಿಮಾಗಳ ಮೂಲಕ ನಗರ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದರು ಸಿನಿಮಾ ಮಂದಿ. ಇಂತಹ ಭಿನ್ನ ಕಥೆಯ ಬಗ್ಗೆ ಸಿನಿಮಾ ನಿರ್ಮಿಸಿದವರು ಮಧುರ ಭಂಡಾರ್ಕರ್. ಈಗ ಅವರು ಪ್ರಿಯಾಂಕ ಜೊತೆ ಮತ್ತೊಮ್ಮೆ ಕೆಲಸ ಮಾಡುತ್ತಿದ್ದಾರೆ. ಮೇರಿ ಕೊಂ ಚಿತ್ರದ ಯಶಸ್ಸಿನ ಖುಷಿಯಲ್ಲಿ ಇರುವ ಪ್ರಿಯಾಂಕ ಚೋಪ್ರ ಈಗ ಮೇಡಂ ಜಿ ಎನ್ನುವ ಸಿನಿಮಾದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಸ್ಕ್ರಿಪ್ಟ್ ಇನ್ನಿತರ   ಸಂಗತಿಗಳನ್ನು ಮಧುರ ಭಂಡಾರ್ಕರ್ ಎಲ್ಲ ಹೊಣೆಗಾರಿಕೆ ಹೊತ್ತಿದ್ದಾರೆ. 
 
ಸಿನಿಮಾದಲ್ಲಿ ಯಾರ್ಯಾರು ನಟಿಸುತ್ತಾರೆ ಎನ್ನುವ ಸಂಗತಿ ನವೆಂಬರ್ ನಲ್ಲಿ ತಿಳಿಯುವುದಾಗಿ ಹೇಳಿದ್ದಾರೆ ಪ್ರಿಯಾಂಕ. ಆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ ಪಿಗ್ಗಿ ಚಾಪ್ಸ್.
 
ಭಂಡಾರ್ಕರ್ ಅವರ ಚಿತ್ರ ಫ್ಯಾನ್ ನಲ್ಲಿ ನಟಿಸಿದ್ದ ಪ್ರಿಯಾಂಕ ಚೋಪ್ರ ತನ್ನ ಅಭಿನಯಕ್ಕೆಂದು ರಾಷ್ಟ್ರೀಯ ಪ್ರಶಸ್ತಿಯನ್ನು ಸಹಿತ ಪಡೆದಿದ್ದರು. ಈ ರೀತಿ ತಾರ ಬದುಕಲ್ಲಿ ತನಗೊಂದು ಉತ್ತಮ ತಿರುವು ನೀಡಿದ ಮಧುರ ಭಂಡಾರ್ಕರ್ ಗೆ ನಿರ್ದೇಶನದ ಹೊಣೆ ನೀಡಿ ತನ್ನ ಋಣ ತೀರಿಸಲು ಸಿದ್ಧವಾಗಿದ್ದಾರೆ ಈಕೆ. ಮಧುರ್ ತನ್ನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಬಗ್ಗೆ ಸಕತ್ ಖುಷಿಯಾಗಿದ್ದಾರೆ ಪ್ರಿಯಾಂಕ ಚೋಪ್ರ . ಪ್ರತಿಯೊಂದನ್ನು ಲೆಕ್ಕಾಚಾರದಿಂದ ಕಾಣುವ ಸಿನಿಮಾಮಂದಿಯಲ್ಲಿ ಇಂತಹ ಗುಣವು ಇದೆ ಹಾಗೂ ಇಂತಹ ಪ್ರಕರಣಗಳು ಚಿತ್ರರಂಗದಲ್ಲಿ ಆಗಾಗ ಕಂಡು ಬರುತ್ತದೆ..

Share this Story:

Follow Webdunia kannada