Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್ಸ್ ಬಹಿಷ್ಕಾರ ?

ಸಲ್ಮಾನ್ ಖಾನ್ ಕಾರ್ಯಕ್ರಮಗಳಿಗೆ  ಫೋಟೋಗ್ರಾಫರ್ಸ್  ಬಹಿಷ್ಕಾರ  ?
ಮುಂಬೈ , ಸೋಮವಾರ, 15 ಸೆಪ್ಟಂಬರ್ 2014 (10:38 IST)
ಬಾಲಿವುಡ್ ನಲ್ಲಿ ಏನೇನು ಆಗುತ್ತೆ ಎನ್ನುವ ಸುದ್ದಿ ಗೊತ್ತೇ ಇರಲ್ಲ, ಈ ಕ್ಷಣದಲ್ಲಿ ಇದ್ದ ವಾತಾವರಣ ಮತ್ತೊಂದು ಕ್ಷಣದಲ್ಲಿ ಇರಲ್ಲ. ಅದೇರೀತಿ ಆಗಿದೆ ಸಲ್ಮಾನ್ ಖಾನ್ ಅವರ ವಿಷಯದಲ್ಲಿ. ಹಾಗೆ ಆಗಿರುವುದು ಸಲ್ಮಾನ್ ಮತ್ತು ಫೋಟೋಗ್ರಾಫರ್‌ಗಳ ನಡುವೆ. ಅವರು ಸಲ್ಮಾನ್ ಖಾನ್ ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸ ಬೇಕು ಎನ್ನುವ ನಿರ್ಧಾರ ಮಾಡಿದ್ದಾರಂತೆ. ಸಲ್ಮಾನ್ ಬಿಗ್ ಬಾಸ್ 8  ಪ್ರೊಮೊ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿಲ್ಲ. ಹಿಂದಿ ಸಿನಿಮಾ ಕಿಕ್ ಪ್ರಮೋಶನ್ ಸಮಯದಲ್ಲಿ ಸಲ್ಮಾನ್ ಖಾನ್ ಅವರು ಫೋಟೋಗ್ರಾಫರ್ಸ್ ಮೇಲೆ ಜಗಳಕ್ಕೆ ಇಳಿದಿದ್ದರು. ಆ ಬಳಿಕ ಇದಕ್ಕೆ ಸಂಬಂಧ ಪಟ್ಟ ವಿವಾದ ಜಾಸ್ತಿ ಜೋರಾಗಿತ್ತು. ಈಗ ಅದನ್ನು ಮತ್ತಷ್ಟು ಹೆಚ್ಚು ಮಾಡಲು ಛಾಯಾಚಿತ್ರಕಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.  
 
ಫೋಟೋಗ್ರಾಫರ್‌ಗಳ ಈ ನಿರ್ಧಾರ ತನಗೆ ನಷ್ಟ ಉಂಟು ಮಾಡುತ್ತದೆ ಆದರೂ ಸಹಿತ ಅವರ ನಿರ್ಣಯವನ್ನು ತಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ ಸಲ್ಮಾನ್ ಖಾನ್. ತಾನು ಅವರ ಮೇಲೆ ಯಾವುದೇ ಬಗೆಯ ನಿಷೇಧ ಹೇರಲಿಲ್ಲ. ಅವರೇ ತನ್ನನ್ನು ಬಹಿಷ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ ಸಲ್ಲು ಮಿಯಾ. ಅವರು ಮರ್ಯಾದೆಯಾಗಿ ತನ್ನ ಜೊತೆ ಇದ್ದಷ್ಟು ಕಾಲ ತಾನು ಸಹ ಅದೇರೀತಿ ಇರುತ್ತೇನೆ. ಅವರು ಮಿತಿಮೀರಿದರೆ ನಾನು ಸಹ ಎಂದು ಪ್ರೆಸ್ ಮೀಟ್‌ನಲ್ಲಿ ಹೇಳಿದ್ದಾರೆ ಸಲ್ಮಾನ್. ತಾನು ಭಾಗವಹಿಸುವ ಕಾರ್ಯಕ್ರಮವನ್ನು ಅವರು ಮೀನಿನ ಮಾರುಕಟ್ಟೆ ಮಾಡುವುದನ್ನು ಮಾತ್ರ ತಾನೆಂದಿಗೂ ಒಪ್ಪಲ್ಲ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ಸಲ್ಮಾನ್. ಈ ಗಲಾಟೆ ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ.. ಅದು ಸರಿ ಆಗುವವರೆಗೂ ಓಲ್ಡ್ ಫೋಟೋ ನೋಡುವ ಸೌಭಾಗ್ಯ ಅವರ ಅಭಿಮಾನಿಗಳಿಗೆ!

Share this Story:

Follow Webdunia kannada