Select Your Language

Notifications

webdunia
webdunia
webdunia
webdunia

ನನಗಾ ಮದುವೆ ಯಾರು ಹೇಳಿದ್ದು ನಿಮಗೆ.. ನಾನು ಯಾವಾಗ ಹೇಳಿದೆ ಮದುವೆ ವಿಷ್ಯ ? ನನ್ನ ಕೆರಿಯರ್ ನನಗೆ ಮುಖ್ಯ !

ನನಗಾ ಮದುವೆ ಯಾರು ಹೇಳಿದ್ದು ನಿಮಗೆ.. ನಾನು ಯಾವಾಗ ಹೇಳಿದೆ ಮದುವೆ ವಿಷ್ಯ  ? ನನ್ನ ಕೆರಿಯರ್ ನನಗೆ ಮುಖ್ಯ !
ಮುಂಬೈ , ಶನಿವಾರ, 13 ಸೆಪ್ಟಂಬರ್ 2014 (10:27 IST)
ನನಗಾ ಮದುವೆ.. ಆಗಲೇ ಮದುವೆನಾ ಅಂತ ರಾಗ ಎಳೆದಿದ್ದಾಳೆ ಬ್ಲಾಕ್ ಬ್ಯೂಟಿ ಬಿಪಾಸ ಬಸು. ಆಕೆಯ ಈ ರಾಗದಿಂದ ಬಾಲಿವುಡ್ ಮಂದಿ ಸಕತ್ ಆಶ್ಚರ್ಯ ಹೊಂದಿದ್ದಾರಂತೆ. ಹರ್ಮನ್ ಬವೇಜಾ ಜೊತೆ ಆಕೆ ನಿಶ್ಚಿತಾರ್ಥ ಆಗಿರುವ ಸಂಗತಿಯನ್ನು ಸಹಿತ ಸಮ್ಮತಿಸಿಲ್ಲ. ಅಲ್ಲದೆ ಈಗ ತನ್ನ ಗಮನ ಸಿನಿ ಕೆರಿಯರ್ ಕಡೆಗೆ ಮಾತ್ರ. ಹರ್ಮನ್ ನನ್ನ ಒಳ್ಳೆಯ ಸ್ನೇಹಿತ ಎಂದು ಜಗತ್ತಿನ ಮುಂದೆ ಹೇಳಿದ್ದಾಳೆ  ಈ ಸುಂದರಿ.
 
ಈಗ ತಾನು ಮಾಡ ಬೇಕಾಗಿರುವ ಸಿನಿಮಾಗಳು, ಕೆಲಸಗಳು ಸಾಕಷ್ಟಿವೆ. ಅವುಗಳ ಬಗ್ಗೆಯೂ ಸಹಿತ ಹೆಚ್ಚು ಹೇಳಲಾರೆ ಎನ್ನುವ ಮಾತನ್ನು ಹೇಳಿದ್ದಾಳೆ  ಬಿಪಾಸ. ಈಗಷ್ಟೇ ಆಕೆಯ ನಟನೆಯ ಕ್ರೀಯೇಚರ್ 3ಡಿ ಸಿನಿಮಾದ ಯಶಸ್ಸು ಅನುಭವಿಸುತ್ತಾ ಇದ್ದಾಳೆ. ಈ ಮೊದಲು ಆಕೆ ನಟಿಸಿದ್ದ ಆತ್ಮ, ಹಂಶಕಲ್  ಬಾಕ್ಸಾಫೀಸಲ್ಲಿ ಮಕಾಡೆ ಮಲಗಿತ್ತು. ಪ್ರೇಕ್ಷಕರಿಗೆ ತನ್ನನ್ನು ತಾಯಿ ಪಾತ್ರದಲ್ಲಿ ನೋಡಲು ಇಷ್ಟ ಪಟ್ಟಿಲ್ಲ ಆದ್ದರಿಂದ ಆತ್ಮಕ್ಕೆ ಹೆಚ್ಚು  ಬೆಲೆ ಸಿಗಲಿಲ್ಲ ಎಂದು ಹೇಳಿದ್ದಾಳೆ ಈ ಕೃಷ್ಣ ಸುಂದರಿ. 2001  ರಲ್ಲಿ ಅಜ್ ನಬಿ ಚಿತ್ರದ ಮೂಲಕ ತನ್ನ ಕೆರಿಯರ್ ಆರಂಭ ಮಾಡಿದ್ದಳು. ಈಗ ಬಾಲಿವುಡ್ ಲೀಡ್ ನಟಿಯರಲ್ಲಿ ಒಬ್ಬಳಾಗಿದ್ದಾಳೆ ಈ ಚೆಲುವೆ!

Share this Story:

Follow Webdunia kannada