Webdunia - Bharat's app for daily news and videos

Install App

ಅನುರಾಗ್ ಬಸು ನಿರ್ದೇಶನದ ಹೊಸ ಚಿತ್ರದಲ್ಲಿ ಕಿಶೋರ್ ಕುಮಾರ್ ಪಾತ್ರದಲ್ಲಿ ರಣಬೀರ್ ಕಪೂರ್..

Webdunia
ಶನಿವಾರ, 13 ಸೆಪ್ಟಂಬರ್ 2014 (10:24 IST)
ಎಂತಹ ಪಾತ್ರಗಳನ್ನೂ ಆಗಿರಲಿ ಅದನ್ನು ಸವಾಲಾಗಿ ತೆಗೆದುಕೊಂಡು ಮಾಡುವುದರಲ್ಲಿ ಯಂಗ್ ಹೀರೋ ರಣಬೀರ್ ಕಪೂರ್ ಸಹ ಹಿಂದೆ ಉಳಿದಿಲ್ಲ. ಆದ ಕಾರಣ ಅವರು ಬರ್ಫಿ ಚಿತ್ರದಲ್ಲಿ ನಟಿಸಿದ್ದು. ಆ ಚಿತ್ರದ ನಂತರ ಮತ್ತೊಂದು ಸವಾಲ್ ಎದುರಿಸಲು ಸಿದ್ಧತೆ ನಡೆಸಿದ್ದಾರೆ ರಣಬೀರ್. ಈಗ ಭಾರತೀಯ ಚಿತ್ರರಂಗದ ಪ್ರಸಿದ್ಧ  ನಟ, ನಿರ್ದೇಶಕ , ಗಾಯಕ, ನಿರ್ಮಾಪಕ ಕಿಶೋರ್ ಕುಮಾರ್ ಅವರ ಪಾತ್ರವಾಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ . ಈ ಚಿತ್ರವನ್ನು ಅನುರಾಗ್ ಬಸು ನಿರ್ದೇಶಿಸುತ್ತಾ ಇದ್ದಾರೆ. ಈ ಚಿತ್ರದ ಶೂಟಿಂಗ್ ಆರಂಭ ಮಾಡಲು ಇನ್ನು ಸ್ವಲ್ಪ ಸಮಯ ಇದೆ. 
 
ಬಸು ಈ ಚಿತ್ರದ ಕಥೆ , ಚಿತ್ರಕಥೆಯ ತಯಾರಿಯಲ್ಲಿ ಇದ್ದಾರಂತೆ. ಈಗ ಬಸು ಅವರು ಕಿಶೋರ್ ಕುಮಾರ್ ಅವರ ಮಗ ಅಮಿತ್ ಕುಮಾರ್ ಅವರ ಬಳಿ ಅನುಮತಿ ಪಡೆದಿದ್ದಾರಂತೆ. ಕಥೆ ಬಗ್ಗೆ ಅಮಿತ್ ಬಳಿ ಚರ್ಚೆಗಳು ನಡೆಸಲಾಗಿದೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಕಿಶೋರ್ ಕುಮಾರ್ ಗೆ ಸಂಬಂಧಪಟ್ಟ ಕೆಲವು ಸಂಗತಿಗಳನ್ನು ಅಮಿತ್ ಬಳಿ ಕೇಳಿ ತಿಳಿದು ಕೊಳ್ಳುವುದರ ಜೊತೆಗೆ ಸ್ಕ್ರೀನ್ ಪ್ಲೇ ತಯಾರು ಮಾಡಲು ಅಮಿತ್ ಬಳಿ ಸಹಾಯ ಕೇಳಿದ್ದಾರಂತೆ ಅನುರಾಗ್. ಅದಕ್ಕೆ ಅಮಿತ್ ಕಡೆಯಿಂದ ಸಮ್ಮತಿ ಸಿಕ್ಕಿದೆ.. ಇವೆಲ್ಲ ಆದ ಬಳಿಕ ರಣಬೀರ್ ನಟನೆ.. ಕಿಶೋರ್ ಆಗಿ ರಣ ಬೀರ್ ಎಷ್ಟರ ಮಟ್ಟಿಗೆ ಜನರನ್ನು ಸೆಳೆಯುತ್ತಾರೆ ಎನ್ನುವುದೇ ಈಗಿರುವ ಕುತೂಹಲ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments