Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್‌ಗೆ ಶಾಕ್ ನೀಡಿದ ಸನ್ನಿ ಲಿಯೋನ್. ಸನ್ನಿ ಅಂದ್ರೆ ಸುಮ್ಮನೇನಾ?

ಅಮಿತಾಬ್ ಬಚ್ಚನ್‌ಗೆ ಶಾಕ್ ನೀಡಿದ ಸನ್ನಿ ಲಿಯೋನ್. ಸನ್ನಿ ಅಂದ್ರೆ ಸುಮ್ಮನೇನಾ?
ಮುಂಬೈ , ಶನಿವಾರ, 13 ಸೆಪ್ಟಂಬರ್ 2014 (10:17 IST)
ಬಾಲಿವುಡ್ ನ ಯಂಗ್ ಹೀರೋಗಳು ನಾಚುವಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಅಮಿತಾಬ್ ಬಚ್ಚನ್. ಅವರ ಸ್ಟೆಪ್ಸ್ ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಒಟ್ಟಾರೆ ಅವರಿಗೆ ಅಭಿಮಾನಿಗಳ ಮಹಾಪೂರವೇ ಇದೆ. ಅಂತಹ ಬಿಗ್ ಬಿ ಗೆ  ಶಾಕ್ ನೀಡಿದ್ದಾಳೆ ಮಾದಕ ನಟಿ ಸನ್ನಿ ಲಿಯೋನ್. ಪ್ರಸಿದ್ಧ ಹಾಡುಗಾರ ಬಲ್ವೆಂದರ್ ಸಿಂಗ್ ತಮ್ಮ ಖಾಸಗಿ ಹಾಡಿನ ಆಲ್ಬಮ್ ಬಿಡುಗಡೆಗಾಗಿ ಅತಿಥಿಗಳಾಗಿ  ಅಮಿತಾಬ್ ಬಚ್ಚನ್  ಹಾಗೂ ಸನ್ನಿ ಲಿಯೋನ್ ಅವರನ್ನು  ಅತಿಥಿಯಾಗಿ ಆಹ್ವಾನಿಸಿದ್ದರು.   
 
 ಅಮಿತಾಬ್ ಅವರ ಬಳಿ  ಎಲ್ಲರು ಬಂದು ಮಾತಾಡುತ್ತ- ಪ್ರಶ್ನೆಗಳನ್ನು ಕೇಳುತ್ತಾ ನಿಂತರಂತೆ.. ಆ ಕಾರ್ಯಕ್ರಮಕ್ಕೆ  ತಡವಾಗಿ ಬಂದ ಸನ್ನಿಯನ್ನು ಕಂಡೊಡನೆ ಎಲ್ಲರು ಅತ್ತ ಹೋದರಂತೆ. ಅಮಿತಾಬ್ ಅವರ ಬಳಿ ಯಾರು ಇರಲೇ ಇಲ್ಲವಂತೆ ! ಇದರಿಂದ ಅಮಿತಾಬ್ ಮುಖದ ಬಣ್ಣ ಸ್ವಲ್ಪ ಬದಲಾದುದನ್ನು  ಗಮನಿಸಿದ ಕಾರ್ಯಕ್ರಮದ ಆಯೋಜಕರು ಮೊದಲು  ಅಮಿತಾಬ್ ಬಚ್ಚನ್ ಅವರನ್ನು ವೇದಿಕೆಗೆ ಕರೆದು ಗೌರವಿಸಿ ಆ ಬಳಿಕ ಸನ್ನಿಯನ್ನು ಕರೆದರಂತೆ. ಸನ್ನಿ ಬಗ್ಗೆ  ಇಷ್ಟೊಂದು ಕ್ರೇಜ್ ಇದೆಯಾ  ಎಂದು ಅಮಿತಾಬ್ ಅವರು ತಮ್ಮ ಸ್ನೇಹಿತರ ಬಳಿ ಕಾಮೆಂಟ್ ಮಾಡಿರುವುದು ಈಗ ಬಾಲಿವುಡ್ ನಲ್ಲಿ ದೊಡ್ಡ ಸುದ್ದಿಯಾಗಿದೆ!! 

Share this Story:

Follow Webdunia kannada