Select Your Language

Notifications

webdunia
webdunia
webdunia
webdunia

ಬಿಕ್ಕಳಿಸಿ ಅತ್ತ ಶಿಲ್ಪ ಶೆಟ್ಟಿ ಅದಕ್ಕೆ ಕಾರಣವೇನು ಗೊತ್ತಾ ?

ಬಿಕ್ಕಳಿಸಿ ಅತ್ತ ಶಿಲ್ಪ ಶೆಟ್ಟಿ ಅದಕ್ಕೆ ಕಾರಣವೇನು ಗೊತ್ತಾ ?
ಮುಂಬೈ , ಬುಧವಾರ, 10 ಸೆಪ್ಟಂಬರ್ 2014 (11:48 IST)
ಈಗಂತೂ ಬಾಲಿವುಡ್‌ನಲ್ಲಿ ಮಾತ್ರವಲ್ಲ  ಭಾರತದೆಲ್ಲೆಡೆ ಹೆಚ್ಚು ಸುದ್ದಿ ಆಗುತ್ತಿರುವ ಸಂಗತಿ ಅಂದ್ರೆ ಪ್ರಿಯಾಂಕ ಚೋಪ್ರ ನಟನೆಯ ಮೇರಿಕೋಮ್.  ಈ ಚಿತ್ರವನ್ನು  ವೀಕ್ಷಿಸಿದ ಶಿಲ್ಪ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತರಂತೆ. ಆ ಚಿತ್ರದ ದೃಶ್ಯಗಳು, ಪ್ರಿಯಾಂಕ ನಟನೆಯನ್ನು ತನ್ಮಯತೆಯಿಂದ ವೀಕ್ಷಿಸಿದ ಈ ನಟಿಗೆ ಅಳು ತಡೆಯಲು ಆಗಲೇ ಇಲ್ಲವಂತೆ.  ಸೆಪ್ಟೆಂಬರ್ 5 ರಂದು ಬಿಡುಗಡೆ ಆದ ಮೇರಿಕೋಂ ಚಿತ್ರ ವಿಮರ್ಶಕರನ್ನು ಮಾತ್ರವಲ್ಲದೆ ಸಾಮಾನ್ಯರ ಮನ ಸೆಳೆದ  ಚಿತ್ರವಾಗಿದೆ. ಬಾಕ್ಸರ್ ಜೀವನಾಧಾರಿತ ಚಿತ್ರವಾಗಿರುವ ಮೇರಿಕೋಂನಲ್ಲಿ ಈ ಹೆಸರಿನ ಪಾತ್ರಧಾರಿಯಾಗಿರುವ ಪಿಗ್ಗಿ ಚಾಪ್ಸ್ ನಟನೆಯ ಬಗ್ಗೆ ಟ್ವಿಟ್ವರ್‌ನಲ್ಲಿ ಪ್ರಶಂಸೆ ಮಾಡಿ ಹೇಳಿದ್ದಾರೆ ಶಿಲ್ಪ ಶೆಟ್ಟಿ.  
 
ಮೇರಿಕೋಂ ಚಿತ್ರದಲ್ಲಿ ಪ್ರಿಯಾಂಕ ನಟನೆ ಸೂಪರ್ ಆಗಿದೆ. ಒಮಾಂಗ್ ಕುಮಾರ್ ಅವರ ನಿರ್ದೇಶನವು ಸಹ ಅದ್ಭುತವಾಗಿದೆ. ಈ ಚಿತ್ರವನ್ನು ವೀಕ್ಷಿಸುವಾಗ ಕಣ್ಣೀರು ತಡೆಯಲಾಗಲೇ  ಇಲ್ಲ ನನಗೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ ಇದಾಗಿದೆ ಎಂದು ಟ್ವೀಟ್ ಮಾಡಿ  ಹೇಳಿದ್ದಾರೆ.  ಈ ಚಿತ್ರದ ಸೋಲುಗೆಲುವಿನ ಬಗ್ಗೆ ಸಣ್ಣ ಪ್ರಮಾಣದ ಆತಂಕ ಹೊಂದಿದ್ದ ಪಿಗ್ಗಿಗೆ ಅಪರೂಪವಾದ ಗೆಲುವು ಸಿಕ್ಕಿದೆ.. ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ!

Share this Story:

Follow Webdunia kannada