Select Your Language

Notifications

webdunia
webdunia
webdunia
webdunia

ಚಿರಂಜೀವಿ ಮನಸೆಳೆದ ಹೊಸ ಗ್ಲಾಮರಸ್ ಹೀರೋಯಿನ್ ಯಾರೆಂದರೆ !!

ಚಿರಂಜೀವಿ ಮನಸೆಳೆದ ಹೊಸ ಗ್ಲಾಮರಸ್ ಹೀರೋಯಿನ್ ಯಾರೆಂದರೆ !!
ಮುಂಬೈ , ಬುಧವಾರ, 10 ಸೆಪ್ಟಂಬರ್ 2014 (11:40 IST)
ತೆಲುಗು  ಚಿತ್ರರಂಗದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲಿಯೂ ಸಹಿತ ತನ್ನ ರೂಪ ಅಭಿನಯಗಳಿಂದ ಮನ ಸೆಳೆದ ನಟಿ ಶ್ರೀದೇವಿ. ಆಕೆಯ ನಟನೆಯನ್ನು ಮೆಚ್ಚಿಕೊಂಡು ದೊಡ್ಡ ಫ್ಯಾನ್ ಗಳಾಗಿದ್ದಾರೆ ರಾಮ್ ಗೋಪಾಲ್ ವರ್ಮ ಅವರಂತೆ ಇನ್ನು ಅನೇಕರು. ಈಗ ಆ ಪಟ್ಟಿಗೆ ನಟ ಚಿರಂಜೀವಿ ಸಹ ಸೇರ್ಪಡೆ ಆಗಿದ್ದಾರೆ. ಜಗದೇಕ ವೀರುಡು ಅತಿಲೋಕ ಸುಂದರಿ ಚಿತ್ರದಲ್ಲಿ ಈ ಇಬ್ಬರು ನಟಿಸಿದ್ದರು ಆ ಚಿತ್ರವನ್ನು ಕೆ.ರಾಘವೇಂದ್ರ ರಾವು ಅವರು ನಿರ್ದೇಶಿಸಿದ್ದರು . ಆ ಚಿತ್ರದ ಸೂಪರ್‌  ಹಿಟ್  ಆಗಲು  ಶ್ರೀದೇವಿ ಕಾರಣ ಎನ್ನುವ ಸತ್ಯವನ್ನು ಅವರು ನಿರ್ಭಯವಾಗಿ ಒಪ್ಪಿಕೊಂಡಿದ್ದಾರೆ. ಅದೇರೀತಿ ಆ ಚಿತ್ರ ರೀಮೇಡ್ ಆಗುತ್ತಿದ್ದು, ಅದರಲ್ಲಿ  ಚಿರು ಪುತ್ರ ಚೆರ್ರಿ ನಟಿಸುತ್ತಿದ್ದಾರೆ.

ರಾಮ ಚರಣ್ ಜೊತೆ ತಮನ್ನ ಜಗದೇಕ ಸುಂದರಿಯಾಗಿದ್ದಾಳೆ. ಆಕೆಯೇ ಬೆಸ್ಟು ಎಂದು ಚಿರು ಅವರು ಸೆಲೆಕ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರಕ್ಕೆ ರಾಘವೇಂದ್ರ ರಾವು ಅವರನ್ನು ಹೊರತು ಪಡಿಸಿದರೆ ಮತ್ಯಾರು ನಿರ್ದೇಶನ ಮಾಡಿದರೂ ಸಹಿತ ಹೆಚ್ಚು ಸೂಕ್ತ ಅನ್ನಿಸಲ್ಲ ಎಂದು ಹೇಳಿದ್ದಾರೆ. ತಮಗೆ ದೊರೆತ ಆ ಪ್ರಚಂಡ ಯಶಸ್ಸು ಈಗ ತಮ್ಮ ಮಗನಿಗೂ ದೊರಕಬೇಕು ಎನ್ನುವ ಆಶಯ ಹೊಂದಿರುವ ಚಿರಂಜೀವಿ ಆ ಚಿತ್ರ ನೋಡುವ ಪ್ರೇಕ್ಷಕನಾಗುತ್ತೇನೆ ಎಂದಿದ್ದಾರೆ. ಇದನ್ನು ಅಶ್ವಿನಿ ದತ್ ನಿರ್ಮಿಸುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಅವರು ತಮ್ಮುವನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಟಾಲಿವುಡ್ ಪ್ರಕಾರ ಯಾರನ್ನು ಅಷ್ಟೆಲ್ಲ ಹೊಗಳಲ್ಲ ಚಿರು, ಅಂತಾಹುದರಲ್ಲಿ ಅದ್ಯಾಕೆ ಈ ಪರಿ ಈ ಹುಡುಗಿಯನ್ನು ಹೊಗಳಿದ್ದಾರೆ? ಆ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲ ಸಾರಿ !! 

Share this Story:

Follow Webdunia kannada